ಮತ್ತೊಮ್ಮೆ ದುಬೈ ಟಾರ್ಗೆಟ್​! ಬೃಹತ್​ ಕಟ್ಟಡದಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ; ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು

ದುಬೈ ಕಟ್ಟಡದಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ
ದುಬೈ ಕಟ್ಟಡದಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ
Published on
ದುಬೈ: ಪ್ರಸ್ತುತ, ವಿಶ್ವವನ್ನೇ ತಲ್ಲಣ ಮೂಡಿಸಿರುವ ಇರಾನ್ ಮತ್ತು ಇಸ್ರೇಲ್​-ಅಮೆರಿಕ ನಡುವಿನ ಯುದ್ಧ ಸಂಘರ್ಷ ಇದೀಗ 14ನೇ ದಿನಕ್ಕೆ ಕಾಲಿಟ್ಟಿದೆ.​ ಇಲ್ಲಿಯವರೆಗೆ ಭೀಕರ ದಾಳಿಗಳನ್ನು ಮುಂದುವರಿಸಿಕೊಂಡೇ ಬಂದಿರುವ ರಾಷ್ಟ್ರಗಳು, ವಾರ್​ ನಿಲ್ಲಿಸುವ ಮನಸ್ಸು ಮಾಡುತ್ತಿಲ್ಲ. ಈ ಮಧ್ಯೆ, ಮತ್ತೊಮ್ಮೆ ದುಬೈ ಟಾರ್ಗೆಟ್​ ಆಗಿದೆ.
ಇಂದು (ಮಾ.13) ಇಲ್ಲಿನ ಆರ್ಥಿಕ ಕೇಂದ್ರ ಪ್ರದೇಶವಾದ ದುಬೈನ ಬುರ್ಜ್​ ಖಲೀಫದ ಬಳಿ ಸ್ಫೋಟ ಸಂಭವಿಸಿದ್ದಾಗಿ ಅಂತಾರಾಷ್ಟ್ರೀಯ ವರದಿಗಳು ಉಲ್ಲೇಖಿಸಿವೆ. ದುಬೈನ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರದಲ್ಲಿ ಈ ಬ್ಲಾಸ್​ ವರದಿಯಾಗಿದೆ. ಘಟನಾ ಸ್ಥಳದಲ್ಲಿ ಈಗಾಗಲೇ ಪೊಲೀಸರು ಹೈಅಲರ್ಟ್​ ಆಗಿದ್ದು, ಸ್ಫೋಟಗೊಂಡ ಸ್ಥಳದಿಂದ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿವೆ.

ದಟ್ಟ ಹೊಗೆ, ಸೈರನ್​ ಅಲರ್ಟ್​

ಯುಎಇಯ ಅತಿದೊಡ್ಡ ನಗರವಾದ ಶೇಖ್​ ಜಾಯೆದ್​ ರಸ್ತೆಯಲ್ಲಿ ಸೈರನ್​ಗಳು ಕೇಳಿಬಂದಿದ್ದು, ಸ್ಥಳೀಯರೊಬ್ಬರು ಘಟನೆಯನ್ನು ವಿವರಿಸಿದ್ದಾರೆ. ನಾನು ಉಳಿದಿರುವ ಬಿಲ್ಡಿಂಗ್​ ಪಕ್ಕದಲ್ಲೇ ಸ್ಫೋಟ ಸಂಭವಿಸಿದೆ ಎಂದು ಆಸ್ಟ್ರೇಲಿಯಾ ಉದ್ಯಮಿಯೊಬ್ಬರು ತಮ್ಮ ಎಕ್ಸ್​​ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net