ಪ್ರಸ್ತುತ ಇರಾನ್ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದ್ದು, ಗಲ್ಫ್ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ. ದುಬೈ ಮತ್ತು ಅಬುಧಾಬಿಯಂತಹ ನಗರಗಳು ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದರೂ, ಇರಾನ್ನ ಸತತ ದಾಳಿಯನ್ನು ತಡೆಯುವ ಸಾಮರ್ಥ್ಯ ಅವುಗಳಿಗಿಲ್ಲ. ತೈಲ ಮಾರುಕಟ್ಟೆ ಈಗಾಗಲೇ ಕುಸಿದಿದ್ದು, ಜಾಗತಿಕ ಪೂರೈಕೆ ಜಾಲ ಸಂಕಷ್ಟದಲ್ಲಿದೆ. ಅಮೆರಿಕ ಮತ್ತು ಇಸ್ರೇಲ್ ಪರವಾಗಿ ಯುಎಇ ಯುದ್ಧಕ್ಕೆ ಇಳಿದರೆ, ಕಳೆದ 50 ವರ್ಷಗಳಲ್ಲಿ ಅದು ಗಳಿಸಿದ ಆರ್ಥಿಕ ಯಶಸ್ಸು ಮಣ್ಣುಪಾಲಾಗುವ ಭೀತಿ ಎದುರಾಗಿದೆ.