ಅಮೆರಿಕದಲ್ಲಿ ಬ್ಲೂ ವೇವ್ ಬೆನ್ನಲ್ಲೇ ಟ್ರಂಪ್ ವಿರುದ್ಧ ಟ್ರೋಲ್; 'ಲೂಸರ್', 'ಅಪಾಯಕಾರಿ ತ್ಯಾಜ್ಯ' ಎಂದು ಎರ್ರಾಬಿರ್ರಿ ಗುಮ್ಮಿದ ನೆಟ್ಟಿಗರು

ಸೋಶಿಯಲ್​ ಮೀಡಿಯಾದಲ್ಲಿ ಟ್ರಂಪ್ ವಿರುದ್ಧ ಟ್ರೋಲ್
ಸೋಶಿಯಲ್​ ಮೀಡಿಯಾದಲ್ಲಿ ಟ್ರಂಪ್ ವಿರುದ್ಧ ಟ್ರೋಲ್
Published on: 

Donald Trump faces Blue storm on social media: ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಭಾರಿ ಶಾಂಕಿಂಗ್​ ನ್ಯೂಸ್ ಆಗಿ ಪರಿಣಮಿಸಿದೆ. ಟ್ರಂಪ್​ ಬೆಂಬಲಿತ ಭಾರತದ ಮೂಲದ ವಿವೇಕ್​ ರಾಮಸ್ವಾಮಿ ಅವರು ಸೋಲು ಕಂಡಿದ್ದಾರೆ. ಡೆಮೋಕ್ರಟಿಕ್​ ಪಕ್ಷದ ಡಾ. ಏಮಿ ಆಕ್ಷನ್​​ ಗೆಲುವು ಕಂಡಿದ್ದಾರೆ. ಸೆನೆಟ್​ ಮತ್ತು ಹೌಸ್​ನಲ್ಲಿಯೂ ಡೆಮಾಕ್ರಟಿಕ್ ಪಕ್ಷಕ್ಕೆ ಜಯ ಸಂದಿದೆ. ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್​ಗೆ ಭಾರಿ ಮುಖಭಂಗವಾಗಿರುವುದನ್ನೇ ಗುರಿಯಾಗಿಸಿಕೊಂಡ ನೆಟ್ಟಿಗರು, ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ಮೀಮ್​ ಕ್ರಿಯೇಟ್ ಮಾಡಿ ಲೇವಡಿ ಮಾಡಲಾಗುತ್ತಿದೆ.

ಚಹಾ ಮಾರುತ್ತಿರುವ ಟ್ರಂಪ್

ಭಾರತದ ಬೀದಿಯಲ್ಲಿ ಟ್ರಂಪ್ ಚಹಾ ಮಾರುತ್ತಿರುವಂತೆ, ಪಾತ್ರೆಗಳ ಮಧ್ಯೆ ಕುಳಿತಿರುವಂತೆ..ತಾನು ಕುಳಿತ ಕೊಂಬೆಯನ್ನು ತಾನೇ ಕತ್ತರಿಸಿಕೊಳ್ಳುವಂತೆ..ಅಧಿಕಾರಿಗಳು ಅವರನ್ನು ಅಪಾಯಕಾರಿ ತ್ಯಾಜ್ಯ ಎನ್ನುವ ಬುಟ್ಟಿಗೆ ಎಸೆಯುತ್ತಿರುವಂತೆ ಮೀಮ್ಸ್ ಕ್ರಿಯೇಟ್ ಮಾಡಲಾಗಿದೆ. ಇಷ್ಟೇ ಅಲ್ಲದೇ ಟ್ರಂಪ್​ ಇಟ್ಸ್​ ಡನ್​ ಬ್ರೋ ಎನ್ನುವ ಶೀರ್ಷಿಕೆ ಹಂಚಿಕೊಂಡಿರುವ ಮೀಮ್​ಗಳು ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಬಳಕೆದಾರರು ಯುಎಸ್ ಅಧ್ಯಕ್ಷರನ್ನು ಟ್ರೋಲ್ ಮಾಡುತ್ತಿದ್ದಾರೆ.

ಮಂಕಾರದ ರೆಡ್ ವೇವ್

ಅಮೆರಿಕದಲ್ಲಿ ಬ್ಲೂ ವೇವ್​​​...ಇರಾನ್​ ಅಲ್ಲಿ ಅಲ್ಲ ಅಮೆರಿಕದ ಆಡಳಿತದಲ್ಲಿ ಬದಲಾವಣೆಯಾಗುತ್ತಿದೆ ಎಂದು ಹಲವರು ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಮೆರಿಕದ ಆಡಳಿತದಲ್ಲಿ ಬದಲಾವಣೆ.. ಬ್ಲೂ ವೇವ್ ಮುಂದೆ ಮಂಕಾದ ರೆಡ್ ವೇವ್ ಎಂದು ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಟ್ರಂಪ್​ ಇಟ್ಸ್​​ ಡನ್​ ಬ್ರೋ

ಮಧ್ಯಂತರ ಚುನಾವಣೆಯ ಈ ಫಲಿತಾಂಶ ಟ್ರಂಪ್​ಗೆ ದೊಡ್ಡ ರಾಜಕೀಯ ಹಿನ್ನಡೆ. ಈ ಚುನಾವಣೆಯನ್ನು ಅವರು ತಮ್ಮ ಅಧ್ಯಕ್ಷತೆಯ ಜನಾಭಿಪ್ರಾಯ ಸಂಗ್ರಹವನ್ನಾಗಿ ಮಾಡಿಕೊಂಡಿದ್ದರು. ರಿಪಬ್ಲಿಕನ್​ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮತದಾರರನ್ನು ಒತ್ತಾಯಿಸಿದರು. ಆದರೆ. ಆರ್ಥಿಕ ಅತೃಪ್ತಿ, ಇಂಧನ ದರ ಏರಿಕೆ, ವಲಸೆ ನೀತಿ ಬಗ್ಗೆ ಸಾರ್ವಜನಿಕರಿಗಿದ್ದ ಅಸಮಾಧಾನವು ಸದ್ಯ ಫಲಿತಾಂಶವಾಗಿ ಹೊರಬಿದ್ದಿದೆ.

ವೈರಲ್​ ಆದ ಪೋಸ್ಟ್​​ವೊಂದರಲ್ಲಿ ಅಮೆರಿಕಕದ ಮಧ್ಯಂತರ ಚುನಾವಣೆಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜೆಡಿ ವ್ಯಾನ್ಸ್ ತಮ್ಮ ಉದ್ಯೋಗಗಳನ್ನು ಬದಲಾಯಿತ್ತಿರುವ ವ್ಯಂಗ್ಯ ವಿಡಿಯೋ ಹಂಚಿಕೊಳ್ಳಲಾಗಿದೆ. ಮತ ಎಣಿಕೆಯ ಸಮಯದಲ್ಲಿ ಡೆಮೊಕ್ರಟಿಕ್​​​ ಪಕ್ಷವು ಎರಡೂ ಸದನಗಳಲ್ಲಿ ಬಹುಮತವನ್ನು ಪಡೆಯುತ್ತಿದ್ದಾರೆ ಎನ್ನುವ ಮೀಮ್ಸ್​ ಕ್ರಿಯೇಟ್ ಮಾಡಲಾಗಿದೆ.

ಟ್ರಂಪ್ ಕಣ್ಣು ಟೆಹ್ರಾನ್ ಮೇಲೆ, ಮತದಾರರ ಕಣ್ಣು ಟೆಕ್ಸಾಸ್ ಮೇಲೆ

ಅಮೆರಿಕದ ಜನರು ತಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಟ್ರಂಪ್​​ ಎನ್ನುವ ಕಸವನ್ನು ದಯವಿಟ್ಟು ಎಸೆದು ಬಿಡಿ. ಅಮೆರಿಕದಲ್ಲಿ ಇನ್ನೂ ಬ್ಲೂ ವೇವ್ ಆರಂಭವಾಗಿದೆ ಡೆಮಾಕ್ರಟ್‌ ಗೆದ್ದಿದೆ. ವರ್ಣಭೇದ ನೀತಿ ಅನುಸರಿಸುವವರು ಸೋತಿದ್ದಾರೆ ಎಂದು ಭಾರತೀಯರು ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ.

ಟ್ರಂಪ್​ ಟೆಹ್ರಾನ್​ನಲ್ಲಿ ಆಡಳಿತ ಬದಲಾವಣೆಗೆ ಮುಂದಾದರೂ ಆದರೆ, ಕೊನೆಗೆ ಟೆಕ್ಸಾಸ್​ನಲ್ಲಿ ಆಡಳಿತವೇ ಬದಲಾಗಿ ಬಿಟ್ಟಿತು. ಟೆಹ್ರಾನ್‌ಗೆ ಹೊರಟ ಟ್ರಂಪ್‌ಗೆ ಟೆಕ್ಸಾಸ್‌ನಲ್ಲಿ ಶಾಕ್: ಸ್ವಂತ ನೆಲದಲ್ಲೇ ಆಯ್ತು ಆಡಳಿತ ಬದಲಾವಣೆ. ಟ್ರಂಪ್ ಕಣ್ಣು ಟೆಹ್ರಾನ್ ಮೇಲೆ, ಮತದಾರರ ಕಣ್ಣು ಟೆಕ್ಸಾಸ್ ಮೇಲೆ ರೆಡ್ ಸ್ಟೇಟ್‌ನಲ್ಲಿ ನೀಲಿ ಕ್ರಾಂತಿ ಎನ್ನುವಂತೆ ಪೋಸ್ಟ್ ಹಂಚಿಕೊಂಡು ಲೇವಡಿ ಮಾಡುತ್ತಿದ್ದಾರೆ

Related Stories

US President Donald Trump and the Midterm Election Results
US President Donald Trump
Donald Trump says he would become Israel's PM if Americans get bored!
ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಮಿಸ್ ಸ್ವಿಟ್ಜರ್ಲೆಂಡ್