ಶನಿವಾರ ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ನೀಡಿರುವ ಮಾಹಿತಿಯ ಪ್ರಕಾರ, ಶುಕ್ರವಾರ ರಾತ್ರಿ ಅಫ್ಘಾನ್ ತಾಲಿಬಾನ್ ಕಳುಹಿಸಿದ್ದ ಸ್ಫೋಟಕ ತುಂಬಿದ ಡ್ರೋನ್‌ಗಳನ್ನು ಪಾಕಿಸ್ತಾನದ ವಾಯುಪಡೆ ಮತ್ತು ಸೇನೆ ಹೊಡೆದುರುಳಿಸಿದೆ. ಈ ದಾಳಿಗಳು ಕೇವಲ ಗಡಿ ಭಾಗಕ್ಕೆ ಸೀಮಿತವಾಗದೆ, ಪಾಕಿಸ್ತಾನದ ಆಯಕಟ್ಟಿನ ಪ್ರದೇಶಗಳಾದ ಕ್ವೆಟ್ಟಾ, ಕೊಹತ್ ಮತ್ತು ರಾಜಧಾನಿ ಇಸ್ಲಾಮಾಬಾದ್‌ನ ಪಕ್ಕದಲ್ಲೇ ಇರುವ ರಾವಲ್ಪಿಂಡಿ ನಗರಗಳನ್ನು ಗುರಿಯಾಗಿಸಿಕೊಂಡಿದ್ದವು ಎಂಬುದು ಈಗ ಭಾರಿ ಸಂಚಲನ ಮೂಡಿಸಿದೆ.