ಕತ್ತೆ ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡುತ್ತೆ: 1 ಕೆಜಿ ಚೀಸ್​ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ | Donkey Cheese

ಕತ್ತೆ
ಕತ್ತೆ
Published on

ಪ್ರಮುಖ ಮುಖ್ಯಾಂಶಗಳು

  • ಇವನೊಂತರ ಪ್ರಯೋಜನವಿಲ್ಲದ ಕತ್ತೆ ಕಣ್ರೀ ಎನ್ನುವ ಜನರು
  • ಪ್ರಯೋಜನಕ್ಕೆ ಬಾರದ ಕತ್ತೆಯೇ ಇಲ್ಲಿ ಲಾಭವನ್ನು ತಂದುಕೊಡುತ್ತಿದೆ
  • ಇದರ ಹಾಲಿನಿಂದ ಬರುತ್ತಿದೆ ಲಕ್ಷ ಲಕ್ಷ ರೂಪಾಯಿ ಆದಾಯ
Donkey Cheese: ಇವನೊಂತರ ಕತ್ತೆಯಂತೆ. ಯಾವ ಪ್ರಯೋಜನಕ್ಕೂ ಇಲ್ಲ ಎಂದು ನಮ್ಮಲ್ಲಿ ಕೆಲಸಕ್ಕೆ ಬಾರದ ಸೋಮಾರಿಗಳನ್ನು ಬೈಯುವುದು ತೀರ ಸಾಮಾನ್ಯ ಬಿಡಿ. ಅದರಲ್ಲೂ, ಮಿಡಲ್​ ಕ್ಲಾಸ್​ ಮಂದಿಯ ಮನೆಗಳಲ್ಲಿ ಈ ಬೈಗುಳ ಆಗಾಗ್ಗೆ ಯಾವುದಾದರೂ ಒಂದು ವಿಚಾರಕ್ಕೆ ಕೇಳಿಬರುತ್ತಲೇ ಇರುತ್ತದೆ. ಕತ್ತೆ ಎಂಬ ಮೂಕ ಪ್ರಾಣಿಯನ್ನು ಇಲ್ಲಿ ಉಲ್ಲೇಖಿಸಿ ಬೈಯುವ ಜನರು, ಆ ಪ್ರಾಣಿಯಿಂದ ಯಾವುದೇ ರೀತಿಯಲ್ಲೂ ಲಾಭವಿಲ್ಲ ಎನ್ನುತ್ತಾರೆ. ಆದ್ರೆ, ಈ ರೋಚಕ ಸಂಗತಿ ತಿಳಿದರೆ ಖಂಡಿತ ಇನ್ಮುಂದೆ ಆ ರೀತಿ ಯಾರೂ ಹೇಳಲ್ಲ ಅನಿಸುತ್ತೆ.
ಕತ್ತೆ ಹಾಲು ಈಗ ಹಿಂದಿಗಿಂತ ದುಬಾರಿಯಾಗಿದೆ. ಪ್ರಯೋಜನಕ್ಕೆ ಬಾರದ ಪ್ರಾಣಿಯಿಂದಲೇ ಈಗ ಹಲವರು ಲಕ್ಷಗಟ್ಟಲೇ ಆದಾಯವನ್ನು ಎಣಿಸುತ್ತಿದ್ದಾರೆ. ಅಸಲಿಗೆ, ಕತ್ತೆಯ ಹಾಲಿನಿಂದ ಅಂತಹದ್ದೇನು ತಯಾರಿಸಲಾಗುತ್ತೆ? ಅಷ್ಟೊಂದು ದುಬಾರಿ ಹಾಗೂ ಆದಾಯ ತಂದುಕೊಡುವಂತದ್ದು ಈ ಪ್ರಾಣಿಯಿಂದ ಏನಿದೆ? ಎಂಬ ಹಲವರ ಕುತೂಹಲಕಾರಿ ಪ್ರಶ್ನೆಗೆ ಹೀಗಿದೆ ನೋಡಿ ಉತ್ತರ. ಕತ್ತೆಯ ಹಾಲಿನಿಂದ ತಯಾರಿಸಿದ ಚೀಸ್ ಬೆಲೆ ಒಂದು ಕೆಜಿಗೆ 55 ಸಾವಿರ ರೂ.ಗಿಂತ ಹೆಚ್ಚು ಎಂದು ವರದಿಯಾಗಿದೆ.
ಅಷ್ಟಕ್ಕೂ, ಈ ಚೀಸನ್ನು ಹಸು ಅಥವಾ ಎಮ್ಮೆಯ ಹಾಲಿನಿಂದ ಮಾಡಿರುವುದಲ್ಲ. ಬದಲಿಗೆ ಬಹಳ ಅಪರೂಪದ 'ಬಾಲ್ಕನ್' ತಳಿಯ ಕತ್ತೆಯ ಹಾಲಿನಿಂದ ತಯಾರಿಸಲಾಗುತ್ತದೆ. ಈ ಕತ್ತೆಗಳು ಇಡೀ ಪ್ರಪಂಚದಲ್ಲಿ ಸೆರ್ಬಿಯಾದ 'ಜಸವಿಕಾ' ಪ್ರದೇಶದಲ್ಲಿ ಮಾತ್ರ ಲಭ್ಯವಿವೆ. ಇದರ ಹಾಲಿನಿಂದ ಮಾಡಿದ ಚೀಸ್​ಗೆ ಸಖತ್​ ಡಿಮಾಂಡ್ ಇದೆ. ಒಂದು ಕೆಜಿ ಚೀಸ್ ತಯಾರಿಸಲು ಸುಮಾರು 25 ಲೀಟರ್ ಹಾಲಿನ ಅವಶ್ಯಕತೆ ಇದೆ ಎನ್ನಲಾಗಿದೆ.
ವಾಸ್ತವವಾಗಿ, ಕತ್ತೆಗಳು ಬಹಳ ಕಡಿಮೆ ಪ್ರಮಾಣದಲ್ಲಿ ಹಾಲು ಕೊಡುತ್ತವೆ. ಅದಕ್ಕಾಗಿಯೇ, ಇದರ ಬೆಲೆ ಪ್ರತಿ ಪೌಂಡ್‌ಗೆ​ (ಸುಮಾರು ಅರ್ಧ ಕೆಜಿ), 600 ಡಾಲರ್​. ಇದು ನಮ್ಮ ಸ್ಥಳೀಯ ಕರೆನ್ಸಿಯಲ್ಲಿ ಸುಮಾರು 55,000 ರೂ. ಆಗುತ್ತದೆ. ಈ ಚೀಸ್ ತಯಾರಿಸುವುದು ಒಂದು ಕಲೆಯೂ ಹೌದು. ಇದನ್ನು ರೆಡಿ ಮಾಡಲು ತಿಂಗಳುಗಳೇ ಬೇಕಾಗುತ್ತದೆ. ಕತ್ತೆ ಹಾಲಿನ ಜೊತೆ ಹಸು ಅಥವಾ ಮೇಕೆ ಹಾಲನ್ನು ಸುವಾಸನೆಯ ಸಲುವಾಗಿ ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.
ಕತ್ತೆ ಹಾಲು ಪ್ರೋಟೀನ್‌ಗಳಲ್ಲಿ ಸಮೃದ್ಧ. ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿ. ಪ್ರಾಚೀನ ಕಾಲದಲ್ಲಿ ಈ ಹಾಲನ್ನು ಚರ್ಮದ ಸೌಂದರ್ಯಕ್ಕೂ ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದು ಇತರ ಚೀಸ್‌ಗಳಿಗಿಂತ ವಿಭಿನ್ನ ಟೇಸ್ಟ್​ ಮತ್ತು ಪರಿಮಳವನ್ನು ಹೊಂದಿರುತ್ತದೆ. ಹೀಗಾಗಿಯೇ, ಜಾಗತಿಕವಾಗಿ ಆಹಾರ ಪ್ರಿಯರು ಇದನ್ನು ಒಮ್ಮೆಯಾದರೂ ಸವಿಯಲು ಬಯಸುತ್ತಾರೆ. ಈ ದುಬಾರಿ ಮೌಲ್ಯದ ಚೀಸ್​ ಸವಿಯುವ ಆಸೆಯಿದ್ದರೆ, ನಿಮ್ಮ ಜೇಬು ಗಟ್ಟಿಯಿದ್ದರೆ ಖಂಡಿತ ಮುಂದೊಂದು ದಿನ ಈ 'ಪುಲೆ ಚೀಸ್' (Pule Cheese)​ ಟೇಸ್ಟ್​ ಮಾಡಿ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net