

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಇತ್ತೀಚಿನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಹೊಸ ಕೇಶವಿನ್ಯಾಸ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರ ಹೊಳೆಯುವ ಗೋಲ್ಡ್ ಬಣ್ಣದ ಕೂದಲು ಮತ್ತು ಕೇಶವಿನ್ಯಾಸವನ್ನು ನೋಡಿ ನೆಟ್ಟಿಗರು ತರಹೇವಾರು ಮೀಮ್ಸ್ಗಳು, ಜೋಕ್‌ಗಳು ಹಾಗೂ ಎಐ (AI) ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ತಂದೆಯ ಅನಾರೋಗ್ಯ ಮತ್ತು ವಿಗ್ ವ್ಯಾಮೋಹ ನೆನಪಿಸಿಕೊಂಡ ಮೇರಿ
ಮೇರಿ ಅವರ ಪ್ರಕಾರ, ಅವರ ತಂದೆ ಫ್ರೆಡ್ ಟ್ರಂಪ್ ಅವರು ಅಲ್ಸೈಮರ್ (ಮರೆವಿನ ಕಾಯಿಲೆ/Dementia) ರೋಗಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಕೂದಲು ಉದುರುವುದರ ಬಗ್ಗೆ ವಿಪರೀತ ಚಿಂತಿಯಲ್ಲಿ ತೊಡಗಿದ್ದರು. ಕಾಯಿಲೆ ತೀವ್ರತೆ ಹೆಚ್ಚಾದಂತೆ ಅವರು ಅವರ ಕೂದಲಿಗೆ ಹೊಂದಿಕೆಯಾಗುವಂತ ವಿಗ್ ಧರಿಸಲು ಪ್ರಾರಂಭಿಸಿದರು. ಜೊತೆಗೆ ತಮ್ಮ ಕೂದಲು ಮತ್ತು ಮೀಸೆಗೆ ವಿಪರೀತ ಡೈ (Dye) ಹಚ್ಚಿಕೊಳ್ಳುತ್ತಿದ್ದರು ಎಂದಿದ್ದಾರೆ.