ಬೆಲೆ ಕಟ್ಟಲೇಬೇಕು... ಕೊಟ್ಟ ಡೀಲ್​ ಕೈಬಿಟ್ಟ ಇರಾನ್​ ಸೇತುವೆ​, ವಿದ್ಯುತ್ ಸ್ಥಾವರ ಛಿದ್ರಕ್ಕೆ ಟ್ರಂಪ್​ ಶಪಥ! | Trump

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಮೇಲಿನ ಯುದ್ಧವನ್ನು ನಿಲ್ಲಿಸುವ ಯಾವ ಲಕ್ಷಣಗಳೂ ಇಲ್ಲ
  • ಕೊಟ್ಟ ಡೀಲ್ ಕೈಬಿಟ್ಟ ಇರಾನ್​ ಸೇತುವೆಗಳು, ವಿದ್ಯುತ್​ ಸ್ಥಾವರಗಳನ್ನು ಉಡೀಸ್​ಗೆ ಟ್ರಂಪ್​ ಪಣ
ಅಮೆರಿಕ: ಫೆ.28ರಂದು ಆರಂಭಗೊಂಡ ಇರಾನ್​ ಮತ್ತು ಅಮೆರಿಕ ನಡುವಿನ ಭೀಕರ ಯುದ್ಧವು ಅದ್ಯಾಕೋ ಕೊನೆಗಾಣುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಯುಎಸ್​ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರಾಚ್ಯ ಸಂಘರ್ಷ ಕುರಿತಂತೆ ನೀಡಿರುವ ಹೇಳಿಕೆಗಳು ಇಡೀ ಜಗತ್ತಿಗೆ ದೊಡ್ಡ ತಲೆಬಿಸಿ ತಂದೊಡ್ಡಿದೆ. ​ ​
ವಯೋನ್ ವರದಿ ಪ್ರಕಾರ, ಇಂದು (ಜೂ.10) ಫಾಕ್ಸ್ ನ್ಯೂಸ್‌ನ ಟ್ರೇ ಯಿಂಗ್ಸ್ಟ್ ಜತೆಗೆ ಮಾತನಾಡಿದ ಟ್ರಂಪ್​, ನಾವು ಕೊಟ್ಟಿದ್ದ ಡೀಲ್​ ಅನ್ನು ಇರಾನ್​ ಕೈಬಿಟ್ಟಿದೆ. ನಮ್ಮನ್ನು ಬೆನ್ನಟ್ಟುತ್ತಿರುವ ಇರಾನಿನ ವಿದ್ಯುತ್ ಸ್ಥಾವರಗಳು, ಪ್ರಮುಖ ಸೇತುವೆಗಳನ್ನು ಉಡೀಸ್​ ಮಾಡುವುದೇ ನಮ್ಮ ಮುಂದಿನ ಟಾರ್ಗೆಟ್​. ಇದನ್ನು ಛಿದ್ರಗೊಳಿಸುವ ಕೆಲಸ ಮುಂದುವರಿಯಬಹುದು ಎಂದರು.
ರಾಜತಾಂತ್ರಿಕ ಪ್ರಯತ್ನಗಳು ಸ್ಥಗಿತಗೊಂಡರೆ ಅಮೆರಿಕ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಇನ್ನೂ ತೀವ್ರಗೊಳಿಸಬಹುದು. ಇದಕ್ಕೂ ಮೊದಲೇ ಅವರಿಗೆ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶವಿತ್ತು. ಪ್ರಾಣಪಾಯದಿಂದ ಬದುಕುಳಿಯುವ ಚಾನ್ಸ್​ ಕೂಡ ಇತ್ತು. ಆದರೆ, ಇರಾನ್​ ಅದನ್ನು ಕಳೆದುಕೊಂಡಿದೆ ಎಂದು ಹೇಳಿದರು. ಟ್ರಂಪ್​ರ ಈ ಮಾತುಗಳು ಇತ್ತೀಚೆಗೆ ಇರಾನ್​ ಹೊರ್ಮುಜ್​ ಜಲಸಂಧಿ ಬಳಿ ಅಮೆರಿಕದ ಅಪಾಚೆ ಮಿಲಿಟರಿ ಕಾಪ್ಟರ್​ ಹೊಡೆದುರುಳಿಸಿದ ಬೆನ್ನಲ್ಲೇ ಬಂದಿವೆ ಎಂಬುದು ಗಮನಾರ್ಹ.

ಇಬ್ಬರೂ ಪೈಲಟ್​ ಸುರಕ್ಷಿತ!

ಇನ್ನೂ ಅಪಾಚೆ ಹೆಲಿಕಾಪ್ಟರ್​ ಮೇಲಿನ ಇರಾನ್​ ದಾಳಿಗೆ ಸ್ಪಷ್ಟನೆ ನೀಡಿದ ಟ್ರಂಪ್​, ಹೊರ್ಮುಜ್​ ಬಳಿ ನಮ್ಮ ಕಾಪ್ಟರ್​ ಸ್ವಲ್ಪ ಕೆಳಮಟ್ಟದಲ್ಲಿ ಹಾರಾಡಿದ ಪರಿಣಾಮ ಅವರ ಡ್ರೋನ್​ ತುದಿಯಲ್ಲಿ ಸಿಕ್ಕಿಕೊಂಡಿತು. ಇದರಿಂದ ಯಾವುದೇ ಸ್ಫೋಟ ಆಗಲಿಲ್ಲ. ಬದಲಿಗೆ ಆ ಡ್ರೋನ್​ ಜೊತೆಗೆ ಹೆಲಿಕಾಪ್ಟರ್​ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಇಬ್ಬರೂ ಪೈಲಟ್​ಗಳು ಬದುಕುಳಿದಿದ್ದಾರೆ ಎಂದು ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net