ನ್ಯೂಯಾರ್ಕ್: ಇಂದು (ಜ.03) ಕ್ಯಾರಕಾಸ್‌ನಲ್ಲಿ ತಮ್ಮ ಮಿಲಿಟರಿ ಪಡೆಯಿಂದ ವೆನೆಜುವೆಲಾ ಮೇಲೆ ದಾಳಿ ನಡೆಸಿದ ಅಮೆರಿಕ, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ರನ್ನು ಬಂಧಿಸಿ, ಯುಎಸ್ಗೆ ಕರೆತಂದಿತು. ಆರಂಭದಲ್ಲಿ ಇದು ಕೇವಲ ಅಮೆರಿಕದ ನುಡಿಯಾಗಿತ್ತು. ಆದರೀಗ, ಮಡುರೊ ನಮ್ಮ ಕಸ್ಟಡಿಯಲ್ಲಿರುವುದು ಸತ್ಯ ಎಂಬುದನ್ನು ಅಮೆರಿಕ ಅಧ್ಯಕ್ಷ ಟ್ರಂಪ್, ಫೋಟೋ ಮೂಲಕ ಸ್ಪಷ್ಟಪಡಿಸಿದ್ದಾರೆ.