ಈ ಆಕರ್ಷಕ ಉಂಗುರದ ಮೌಲ್ಯ ಎಷ್ಟು ಎಂಬುದನ್ನು ಸದ್ಯದ ಮಟ್ಟಿಗೆ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಆಭರಣ ತಜ್ಞರು ಅಂದಾಜಿಸಿರುವ ಪ್ರಕಾರ, ಇದರ ಬೆಲೆ 25,000ದಿಂದ 35,000 ಅಮೇರಿಕನ್ ಡಾಲರ್‌ಗಳು ಇರಬಹುದು (ಸರಿಸುಮಾರು 21 ಲಕ್ಷದಿಂದ 30 ಲಕ್ಷ ರೂ.) ಎನ್ನಲಾಗಿದೆ. ಆಂಟ್ವೆರ್ಪ್ ಮೂಲದ ಪ್ರಮುಖ ಆಭರಣ ವ್ಯಾಪಾರಿ ಡೇವಿಡ್ ಗಾಟ್ಲೀಬ್ ಅವರು, ಆಂಟ್ವೆರ್ಪ್ ವರ್ಲ್ಡ್ ಡೈಮಂಡ್ ಸೆಂಟರ್ (AWDC) ಪರವಾಗಿ ಈ ಉಂಗುರವನ್ನು ರಚಿಸಿದ್ದಾಗಿ ಹೇಳಿಕೊಂಡಿದ್ದಾರೆ.