ಅಮೆರಿಕಾ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (donald trump) ಅವರು ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (WEF) ಸಮಾವೇಶಕ್ಕೆ ತೆರಳುತ್ತಿದ್ದಾಗ, ಅವರ 'ಏರ್‌ಫೋರ್ಸ್ ಒನ್' ವಿಮಾನದಲ್ಲಿ ಸಣ್ಣ ಮಟ್ಟದ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿತು. ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಮತ್ತೆ ವಾಷಿಂಗ್ಟನ್ ಡಿಸಿ ಪ್ರದೇಶಕ್ಕೆ ವಾಪಸ್ ತರಲಾಗಿದ್ದು, ಟ್ರಂಪ್ ಅವರು ಮತ್ತೊಂದು ವಿಮಾನದ ಮೂಲಕ ತಮ್ಮ ಪ್ರಯಾಣವನ್ನು ಮುಂದುವರಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.