ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮಕ್ಕೆ (Ceasefire) ಒಪ್ಪಂದ ಏರ್ಪಟ್ಟ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ ಅವರು ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸುವ ಹೇಳಿಕೆಯೊಂದನ್ನು ನೀಡಿದ್ದಾರೆ. ಆಯಕಟ್ಟಿನ ಪ್ರದೇಶವಾದ 'ಹಾರ್ಮುಜ್ ಜಲಸಂಧಿ'ಯಲ್ಲಿ (Strait of Hormuz) ಹಡಗುಗಳ ಸಂಚಾರಕ್ಕೆ ಸುಂಕ ಅಥವಾ ಟೋಲ್ ವಿಧಿಸಲು(Hormuz Tolls) ಟ್ರಂಪ್ ಮುಂದಾಗಿದ್ದಾರೆ. ವಿಶೇಷವೆಂದರೆ, ಇದನ್ನು ಇರಾನ್ ಜೊತೆಗಿನ 'ಜಂಟಿ ಉದ್ಯಮ' (Joint Venture) ಎಂದು ಅವರು ಕರೆದಿದ್ದಾರೆ.