ಇರಾನ್‌ಗೆ 72 ಗಂಟೆಗಳ ಡೆಡ್‌ಲೈನ್ ಕೊಟ್ಟ ಟ್ರಂಪ್​: ಒಪ್ಪಂದಕ್ಕೆ ಬರದಿದ್ದರೆ ತೈಲ ಪೈಪ್‌ಲೈನ್ ಸ್ಫೋಟದ ಎಚ್ಚರಿಕೆ! Donald Trump

ಇರಾನ್‌ಗೆ 72 ಗಂಟೆಗಳ ಡೆಡ್‌ಲೈನ್ ಕೊಟ್ಟ ಟ್ರಂಪ್​: ಒಪ್ಪಂದಕ್ಕೆ ಬರದಿದ್ದರೆ ತೈಲ ಪೈಪ್‌ಲೈನ್ ಸ್ಫೋಟದ ಎಚ್ಚರಿಕೆ! Donald Trump
ಇರಾನ್‌ಗೆ 72 ಗಂಟೆಗಳ ಡೆಡ್‌ಲೈನ್ ಕೊಟ್ಟ ಟ್ರಂಪ್​: ಒಪ್ಪಂದಕ್ಕೆ ಬರದಿದ್ದರೆ ತೈಲ ಪೈಪ್‌ಲೈನ್ ಸ್ಫೋಟದ ಎಚ್ಚರಿಕೆ! Donald Trump
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಅತ್ಯಂತ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದಾರೆ
  • ಯುದ್ಧವನ್ನು ಕೊನೆಗೊಳಿಸಲು ಕದನ ವಿರಾಮ ಒಪ್ಪಂದಕ್ಕೆ ಬರಲು ಕೇವಲ ಮೂರು ದಿನಗಳ ಗಡುವನ್ನು ನೀಡಿದ್ದಾರೆ
  • ಒಪ್ಪಂದಕ್ಕೆ ಸಹಕರಿಸದಿದ್ದರೆ ಇರಾನ್‌ನ ತೈಲ ಪೈಪ್‌ಲೈನ್‌ಗಳು ಒಳಗಿನಿಂದಲೇ ಸ್ಫೋಟಗೊಳ್ಳಲಿವೆ ಎಂದು ಟ್ರಂಪ್​ ಗುಡುಗಿದ್ದಾರೆ
Donald Trump : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಅತ್ಯಂತ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದು, ಯುದ್ಧವನ್ನು ಕೊನೆಗೊಳಿಸಲು ಕದನ ವಿರಾಮ ಒಪ್ಪಂದಕ್ಕೆ ಬರಲು ಕೇವಲ ಮೂರು ದಿನಗಳ ಗಡುವನ್ನು ನೀಡಿದ್ದಾರೆ. ಒಂದು ವೇಳೆ ಈ ಅವಧಿಯೊಳಗೆ ಒಪ್ಪಂದಕ್ಕೆ ಸಹಕರಿಸದಿದ್ದರೆ, ಇರಾನ್‌ನ ತೈಲ ಪೈಪ್‌ಲೈನ್‌ಗಳು "ಒಳಗಿನಿಂದಲೇ ಸ್ಫೋಟಗೊಳ್ಳಲಿವೆ" ಎಂದು ಟ್ರಂಪ್​ ಗುಡುಗಿದ್ದಾರೆ. ಇರಾನ್‌ನ ಆರ್ಥಿಕತೆಯ ಬೆನ್ನೆಲುಬಾಗಿರುವ ತೈಲ ಉದ್ಯಮವನ್ನೇ ಗುರಿಯಾಗಿಸಿಕೊಂಡು ನೀಡಿರುವ ಈ ಹೇಳಿಕೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಟ್ರಂಪ್ ಅವರು, ಒಂದು ವೇಳೆ ಇರಾನ್ ತನ್ನ ತೈಲವನ್ನು ರಫ್ತು ಮಾಡಲು ಸಾಧ್ಯವಾಗದಿದ್ದರೆ, ಅಲ್ಲಿನ ತೈಲ ಪೈಪ್‌ಲೈನ್‌ಗಳು ಅಂತಿಮವಾಗಿ ಯಾಂತ್ರಿಕ ವೈಫಲ್ಯದಿಂದ ಮತ್ತು ನೈಸರ್ಗಿಕ ಶಕ್ತಿಗಳ ಕಾರಣದಿಂದಾಗಿ ಹಾನಿಗೊಳಗಾಗುತ್ತವೆ ಎಂದು ವಿವರಿಸಿದ್ದಾರೆ. ಅಂದರೆ, ನಿರಂತರ ಬಳಕೆಯಿಲ್ಲದೆ ಮತ್ತು ರಫ್ತು ಸ್ಥಗಿತಗೊಂಡರೆ ಆ ವ್ಯವಸ್ಥೆಯು ತನ್ನಷ್ಟಕ್ಕೆ ತಾನೇ ದುರ್ಬಲಗೊಂಡು ಕಾರ್ಯನಿರ್ವಹಿಸದ ಸ್ಥಿತಿಗೆ ತಲುಪುತ್ತದೆ ಎಂಬುದು ಟ್ರಂಪ್​ ಅವರ ಮಾತಿನ ಅರ್ಥವಾಗಿದೆ.
ಯಾವುದೇ ಕಾರಣದಿಂದ ತೈಲ ಅಥವಾ ಅನಿಲದ ಪೈಪ್‌ಲೈನ್ ಸ್ಥಗಿತಗೊಂಡರೆ ಅಂದರೆ, ದಿಗ್ಬಂಧನದ ಕಾರಣದಿಂದ ಹಡಗುಗಳ ಲಭ್ಯತೆ ಇಲ್ಲದೆ ಅಥವಾ ಕಂಟೈನರ್‌ಗಳಿಗೆ ತುಂಬಿಸಲು ಸಾಧ್ಯವಾಗದೆ ಪೂರೈಕೆ ನಿಂತುಹೋದರೆ, ಅದು ಗಂಭೀರ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಆ ಪೈಪ್‌ಲೈನ್ ಒಳಗಿನಿಂದಲೇ ಸ್ಫೋಟಗೊಳ್ಳುತ್ತದೆ ಎಂದು ಟ್ರಂಪ್​ ಅವರು ಪ್ರತಿಪಾದಿಸಿದ್ದಾರೆ. ಈ ಸ್ಫೋಟವು ಕೇವಲ ಯಾಂತ್ರಿಕವಾಗಿ ಮಾತ್ರವಲ್ಲದೆ, ಭೂಮಿಯ ಒಳಗೂ ಹಾನಿಯನ್ನುಂಟು ಮಾಡುತ್ತದೆ ಎಂಬುದು ಟ್ರಂಪ್​ ಅವರ ಮಾತಿನ ಅರ್ಥವಾಗಿದೆ. ಪೂರೈಕೆ ಸರಪಳಿ ಕಡಿತಗೊಂಡಾಗ ಉಂಟಾಗುವ ಒತ್ತಡವು ಇಡೀ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆ ಎಂದು ಟ್ರಂಪ್​ ಹೇಳಿದ್ದಾರೆ.
ಇನ್ನೂ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಇಂದು ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲಿದ್ದಾರೆ. ರಷ್ಯಾಗೆ ಆಗಮಿಸಿದ ಬೆನ್ನಲ್ಲೇ ಮಾತನಾಡಿದ ಅರಘ್ಚಿ, ಅಮೆರಿಕದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಶಾಂತಿ ಮಾತುಕತೆಗಳು ಹಳಿತಪ್ಪಲು ಅಮೆರಿಕದ ಅತಿಯಾದ ಬೇಡಿಕೆಗಳೇ ಕಾರಣ ಎಂದು ಗುಡುಗಿದ್ದಾರೆ.
ಮತ್ತೊಂದೆಡೆ, ಶ್ವೇತಭವನದ ವರದಿಗಾರರ ಸಂಘದ ಔತಣಕೂಟದಲ್ಲಿ ನಡೆದ ಗುಂಡಿನ ದಾಳಿಯು ತನ್ನ ಇರಾನ್ ನೀತಿಯ ಮೇಲೆ ಯಾವುದೇ ಪ್ರಭಾವ ಬೀರದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಘಟನೆಯ ಹಿಂದಿನ ಉದ್ದೇಶ ಇನ್ನೂ ನಿಗೂಢವಾಗಿದ್ದರೂ, ಇರಾನ್ ವಿಷಯದಲ್ಲಿ ತಮ್ಮ ನಿರ್ಧಾರಗಳು ಅಚಲವಾಗಿರುತ್ತವೆ ಎಂದು ಅವರು ಹೇಳಿದ್ದಾರೆ. ಪ್ರಾದೇಶಿಕ ಯುದ್ಧದ ಸವಾಲುಗಳನ್ನು ಎದುರಿಸಲು ತಮ್ಮ ಆಡಳಿತವು ಬದ್ಧವಾಗಿದೆ ಎಂಬ ಸಂದೇಶವನ್ನು ಟ್ರಂಪ್ ರವಾನಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net