ಟ್ರಂಪ್ ಹೇಳುತ್ತಿದ್ದಂತೆ ಪಾಕ್ ಪ್ರಧಾನಿ, ವಿದ್ಯಾರ್ಥಿಯಂತೆ ಎದ್ದು ನಿಂತು ತಲೆಯಾಡಿಸಿದರು. ಶಾಲೆಯಲ್ಲಿ ಓರ್ವ ವಿದ್ಯಾರ್ಥಿ ಏನಾದರೂ ತಪ್ಪು ಮಾಡಿದಾಗ ಆತನನ್ನು ಎದ್ದು ನಿಲ್ಲಿಸಿ, ಶಿಕ್ಷಕ ವಿಚಾರಣೆ ಮಾಡುವಂತೆ, ಪಾಕ್ ಪ್ರಧಾನಿಯನ್ನು ಟ್ರಂಪ್ ವಿಚಾರಿಸಿದರು. ಈ ವೇಳೆ ವಿಶ್ವ ನಾಯಕರ ಎದುರು ಎದ್ದು ನಿಂತ ಶರೀಫ್, ಕೊಂಚ ಮುಜಗರಕ್ಕೆ ಒಳಗಾದಂತೆ ಕಂಡರು. ಟ್ರಂಪ್ ಎದುರು ಶರೀಫ್ ಕೋಲೆ ಬಸವನಂತೆ ತಲೆಯಾಡಿಸಿದರು.