ನಾಯಿಗಳಿಗೂ ಮಾತು ಗುರುತಿಸುವ ಸಾಮರ್ಥ್ಯ! ಇಲ್ಲಿದೆ ನೋಡಿ ನಿಮ್ಮ ಹುಬ್ಬೇರಿಸುವ ವರದಿ | Dogs

ಮನುಷ್ಯರ ಮಾತುಗಳನ್ನು ನಿಯಮಿತವಾಗಿ ಕೇಳಿಸಿಕೊಂಡು ಹಾಗೂ ಪ್ರತಿ ದಿನ ಅದಕ್ಕೆ ಒಡ್ಡಿಕೊಳ್ಳುವುದರಿಂದ ನಾಯಿಗಳೂ ಗಳಿಸುವ ಸಂಭವವಿದೆ ಎಂದು ಹಂಗೆರಿಯ ಇಎಲ್​​ಟಿಇ ಎಟ್ವೊಸ್ ಲೊರ್ನಾಂಡ್ ಯುನಿವರ್ಸಿಟಿಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Dogs
ನಾಯಿಗಳಿಗೂ ಮಾತು ಗುರುತಿಸುವ ಸಾಮರ್ಥ್ಯ! ಇಲ್ಲಿದೆ ನೋಡಿ ನಿಮ್ಮ ಹುಬ್ಬೇರಿಸುವ ವರದಿ | Dogs
Published on: 

ನವದೆಹಲಿ: ಮನುಷ್ಯರ ಮಾತಿಗೆ ಸ್ಪಂದಿಸುವ ಶ್ವಾನಗಳು, ಮಾನವರಾಡುವ ಮಾತುಗಳನ್ನು ಗ್ರಹಿಸಿ, ಅವುಗಳನ್ನು ಪದಗಳಾಗಿ ವಿಂಗಡಿಸುವ ಸಾಮರ್ಥ್ಯವನ್ನು ಕಂಡುಕೊಂಡಿದೆ ಎಂಬ ಅಚ್ಚರಿ ಸಂಗತಿಯೊಂದು ಇದೀಗ ಹೊಸ ವರದಿಯಲ್ಲಿ ಹೊರಬಿದ್ದಿದೆ.

ನಾಯಿಗಳೂ ಗಳಿಸುವ ಸಂಭವವಿದೆ

ನಾಯಿಗಳು ಮನುಷ್ಯರ ಮಾತುಗಳನ್ನು ಪದಗಳಾಗಿ ವಿಂಗಡಿಸುವ (ಗುರುತಿಸುವ) ಸಾಧ್ಯತೆ ಇದೆ ಎಂದು ಹೊಸ ಅಧ್ಯಯನವೊಂದು ಅಭಿಪ್ರಾಯಪಟ್ಟಿದೆ. ಮಾನವರಲ್ಲಿ ಮಾತ್ರ ಇರುವ ಈ ಸಾಮರ್ಥ್ಯವನ್ನು ಮನುಷ್ಯರ ಮಾತುಗಳನ್ನು ನಿಯಮಿತವಾಗಿ ಕೇಳಿಸಿಕೊಂಡು ಹಾಗೂ ಪ್ರತಿ ದಿನ ಅದಕ್ಕೆ ಒಡ್ಡಿಕೊಳ್ಳುವುದರಿಂದ ನಾಯಿಗಳೂ ಗಳಿಸುವ ಸಂಭವವಿದೆ ಎಂದು ಹಂಗೆರಿಯ ಇಎಲ್​​ಟಿಇ ಎಟ್ವೊಸ್ ಲೊರ್ನಾಂಡ್ ಯುನಿವರ್ಸಿಟಿಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಮಾತಿನ ದಕ್ಷ ಸಂಸ್ಕರಣೆ, ಮನುಷ್ಯರ ವಿಶಿಷ್ಟ ಭಾಷಾ ಸಾಮರ್ಥ್ಯ ಮಾನವರಿಗಷ್ಟೇ ಸೀಮಿತವಾಗಿರದು ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ ಎಂದು ‘ಸೈನ್ಸ್’ ಜರ್ನಲ್​ನಲ್ಲಿ ಪ್ರಕಟವಾದ ವರದಿಯಲ್ಲಿ ಸಂಶೋಧಕರು ತಿಳಿಸಿದ್ದಾರೆ. ಮಾತಿಗೆ ನಿಯಮಿತವಾಗಿ ಒಡ್ಡಿಕೊಳ್ಳುವುದರಿಂದ ಮಾತ್ರವೇ ಮಿದುಳು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಮರು ರೂಪುಗೊಳಿಸದು. ವಿಕಾಸದಲ್ಲಿ ಮಾನವರಿಗಿಂತ ತುಂಬಾ ದೂರವಿರುವ ಸಸ್ತನಿಗಳಲ್ಲಿ ಕೂಡ ಇದು ನಿಜ ಎಂದು ಸಂಶೋಧಕರು ಹೇಳಿದ್ದಾರೆ.

Also Read
ರೇಣುಕಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಪ್ರದೋಶ್​ ದರ್ಶನ್​ ವಿರುದ್ಧ ಇಂದು ಕೋರ್ಟ್​ನಲ್ಲಿ ಹೇಳಿದ್ದೇನು? | Actor Darshan
Dogs

20 ಶ್ವಾನಗಳ ಮೆದುಳಿನ ಪ್ರತಿಕ್ರಿಯೆ

ನಿರಂತರ ಮಾತಿನ ಹರಿವಿನಲ್ಲಿ ವ್ಯಂಜನದ ಮೇಲೆ ನಾವು ಗಮನ ಕೇಂದ್ರೀಕರಿಸಿದಾಗ ವೈಯಕ್ತಿಕ ಪದಗಳನ್ನು ಗುರುತಿಸುವುದು ಸುಲಭ ಎಂದು ಅಧ್ಯಯನ ತೋರಿಸಿಕೊಟ್ಟಿದೆ. ಮಾತಿಗೆ 20 ಮಾನವರು ಹಾಗೂ ಅವರ ಜತೆಗಾರ 20 ಶ್ವಾನಗಳ ಮೆದುಳಿನ ಪ್ರತಿಕ್ರಿಯೆ ತುಲನೆ ಮಾಡಿ ಸಂಶೋಧಕರು ಈ ಮಹತ್ವದ ತೀರ್ಮಾನಕ್ಕೆ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net