ಕಾಲಿನಿಂದ ಒಂದೇ ಏಟಿಗೆ ಹಾವುಗಳನ್ನು ಕೊಲ್ಲುವ ಹಕ್ಕಿಯ ಬಗ್ಗೆ ಇಲ್ಲಿವೆ ನಿಮ್ಮ ಹುಬ್ಬೇರಿಸುವ ಸಂಗತಿಗಳು | ​Secretary Bird

ಸೆಕ್ರೆಟರಿ ಬರ್ಡ್​ ದಾಳಿಯ ದೃಶ್ಯ
ಸೆಕ್ರೆಟರಿ ಬರ್ಡ್​ ದಾಳಿಯ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಕಾಲಿನ ಉಗುರುಗಳಿಂದ ಹಾವುಗಳನ್ನು ಕುಕ್ಕಿ ಕೊಲ್ಲುವ ಹಕ್ಕಿಯಿದು
  • ನೋಡಲು ಸುಂದರ! ಆದ್ರೆ, ಅಟ್ಯಾಕ್​ನಲ್ಲಿ ಭಯಂಕರ ​
  • 'ದಿ ಆರ್ಚರ್ ಆಫ್ ಸ್ನೇಕ್ಸ್​' ಎಂಬ ಪಟ್ಟ ಈ ಹಕ್ಕಿಗಿದೆ
Secretary Bird: ಬಾನಿನಲ್ಲಿ ವಿಮಾನಗಳಿಗಿಂತಲೂ ಮೊದಲು ಹಾರಾಡುವುದನ್ನು ಕಲಿತದ್ದೇ ಹಕ್ಕಿಗಳು. ಈ ಶಕ್ತಿಯನ್ನು ಭಗವಂತ ಮೊದಲು ಹಕ್ಕಿಗಳಿಗೆ ನೀಡಿರುವುದು ನಿಜಕ್ಕೂ ಅಚ್ಚರಿ ಹಾಗೂ ವಿಶೇಷವೇ ಸರಿ. ಜಗತ್ತಿನಲ್ಲಿ ಹಲವಾರು ಪ್ರಬೇಧಗಳಿರುವ ರೆಕ್ಕೆಯ ಜೀವಿಗಳು, ಸಾಕಷ್ಟು ವಿಶಿಷ್ಟ ಹಾಗೂ ವೈಶಿಷ್ಟ್ಯತೆಗಳಿಂದ ಕೂಡಿವೆ. ಹೀಗಿರುವಾಗ, ಇಲ್ಲೊಂದು ಹಕ್ಕಿ ಹಾವುಗಳನ್ನು ಕಂಡರೆ ಸಾಕು, ಅದನ್ನು ಒಂದೇ ಏಟಿಗೆ ಸಾಯಿಸುವ ಸಾಮರ್ಥ್ಯ ಇದಕ್ಕಿದೆ. ಭಯಂಕರ ದಾಳಿ ಮತ್ತು ಸ್ಪಷ್ಟ ಗುರಿ ಹೊಂದಿರುವ ವಿದೇಶಿ ಹಕ್ಕಿಯ ಬಗ್ಗೆ ಇಲ್ಲಿವೆ ನಿಮಗೆ ಗೊತ್ತಿರದ ಕೆಲವು ಕುತೂಹಲಕಾರಿ ಸಂಗತಿಗಳು ತಿಳಿಯಿರಿ.
ಬೇಟೆಯನ್ನು ಬೆಂಬಿಡದೆ ದಾಳಿ ನಡೆಸುವ ಈ ಹಕ್ಕಿಯೂ ಹಾವುಗಳನ್ನು ಕಂಡರೆ ಸಾಕು ತನ್ನ ಕಾಲಿನ ಉಗುರುಗಳಿಂದ ಅವುಗಳನ್ನು ಕುಕ್ಕಿ ಕೊಲ್ಲುತ್ತವೆ. ಅದರಲ್ಲೂ ಅತ್ಯಂತ ವಿಷಕಾರಿ ಹಾವುಗಳು ಅಟ್ಯಾಕ್​ ಮಾಡಲು ಯತ್ನಿಸಿದರೆ, ಅವನ್ನು ಅತ್ಯಂತ ಕ್ರೂರವಾಗಿ ಕೊಂದು ತಿನ್ನುತ್ತದೆ. ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಈ ಹಕ್ಕಿಯ ಹೆಸರು 'ಸೆಕ್ರೆಟರಿ ಬರ್ಡ್'. ಇತರೆ ಪ್ರಾಣಿಗಳಿಗಿಂತ ಹಾವುಗಳು ಇದರ ಅಚ್ಚುಮೆಚ್ಚಿನ ಬೇಟೆಯಾಗಿದೆ.
ವಾಸ್ತವವಾಗಿ, ಈ ಹಕ್ಕಿ ಅತ್ಯಂತ ವಿಷಕಾರಿ ಹಾವುಗಳನ್ನು ಕೊಂದು, ನಿಮಿಷಗಳೊಳಗೆ ತಿಂದು ಮುಗಿಸುತ್ತದೆ. ಸೆಕ್ರೆಟರಿ ಬರ್ಡ್ ಬೇಟೆಗೆ ಹೆಸರುವಾಸಿಯಾದ ಪಕ್ಷಿಯಾಗಿದ್ದು, ಆಫ್ರಿಕಾದಲ್ಲಿ ಮೊದಲು ಕಂಡುಬಂದ ಈ ಹಕ್ಕಿ ತನ್ನ ಹೆಚ್ಚಿನ ಸಮಯವನ್ನು ಬಾನಿಗಿಂತ ನೆಲದ ಮೇಲೆಯೇ ಕಳೆಯುತ್ತದೆ. ನೋಡಲು ಆಕರ್ಷಕ ಮೈಬಣ್ಣ ಹೊಂದಿರುವ ಸೆಕ್ರೆಟರಿ ಬರ್ಡ್​, ಸುಂದರವಾಗಿ ಕಂಡರೂ ಅತ್ಯಂತ ಅಪಾಯಕಾರಿ. ಅದಕ್ಕಾಗಿಯೇ ಇದನ್ನು 'ದಿ ಆರ್ಚರ್ ಆಫ್ ಸ್ನೇಕ್ಸ್​' ಎಂದೂ ಆಂಗ್ಲ ಪದದಲ್ಲಿ ಬಿರುದು ನೀಡಲಾಗಿದೆ.
ಈ ಹಕ್ಕಿ ಹಾವುಗಳನ್ನು ಹಿಡಿಯಲು ತನ್ನ ತೀಕ್ಷ್ಣವಾದ, ಶಕ್ತಿಯುತ ಕಾಲುಗಳನ್ನು ಬಳಸುತ್ತದೆ. ತನ್ನ ದೇಹದ ತೂಕಕ್ಕಿಂತ ಐದು ಪಟ್ಟು ಬಲದಿಂದ ಒದೆಯುವ ಸಾಮರ್ಥ್ಯ ಹೊಂದಿದೆ. ಆ ಬಲ ಸುಮಾರು 195 ನ್ಯೂಟನ್‌ಗಳು ಎನ್ನಲಾಗಿದೆ. ಇದೊಂದು ಕಿಕ್​ ಕೇವಲ 15 ಮಿಲಿಸೆಕೆಂಡ್​ಗಳಲ್ಲಿ ಹಾವನ್ನು ಕೊಲ್ಲುತ್ತದೆ. ವಿಷವನ್ನು ಕಕ್ಕುವ ಸರ್ಪಗಳಿಗೆ ಆನೆಯಂತ ದೊಡ್ಡ ಜೀವಿಗಳೇ ಹೆದರುವಾಗ, ಈ ಪಕ್ಷಿ ಮಾತ್ರ ಅವುಗಳನ್ನು ಆಕ್ರೋಶದಿಂದ ಕುಕ್ಕಿ ಕೊಲ್ಲುವ ದೃಶ್ಯ ನೋಡುಗರನ್ನು ಅಕ್ಷರಶಃ ಬೆರಗಾಗಿಸುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net