ನವದೆಹಲಿ: ಪಾಕಿಸ್ತಾನದಲ್ಲಿ ಭಾರತೀಯ ಚಿತ್ರವಾದ ಧುರಂಧರ್ (Dhurandhar) ಚಿತ್ರವನ್ನು ನಿಷೇಧಿಸಲಾಗಿದೆ ಮತ್ತು ಕೋರ್ಟ್‌ಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಆದರೂ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP)ಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಕ್ಷದ ಕಾರ್ಯಕ್ರಮ ಅಥವಾ ಪಾರ್ಟಿಯಲ್ಲಿ ಧುರಂಧರ್ ಚಿತ್ರದ ಹಾಡು ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಆಗಿರುವ ವೀಡಿಯೊ ಇದೀಗ ಸಿಕ್ಕಪಟ್ಟೆ ವೈರಲ್ ಆಗಿದೆ.
ಪಾಕಿಸ್ತಾನ ವಿರೋಧಿ ನಿಲುವು ಹೊಂದಿರುವ ಕಾರಣ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಆರು ಗಲ್ಫ್ ದೇಶಗಳಲ್ಲಿ ಧುರಂಧರ್ ಚಿತ್ರವನ್ನು ನಿಷೇಧಿಸಲಾಗಿದ್ದರೂ, ಪಾಕಿಸ್ತಾನದ ರಾಜಕಾರಣಿ ಬಿಲಾವಲ್ ಭುಟ್ಟೋ ಕೂಡ ಇರುವ ಪಾಕಿಸ್ತಾನದ ಪಾರ್ಟಿಯಲ್ಲಿ ಈ ಚಿತ್ರದ ಹಾಡನ್ನು ಪ್ರದರ್ಶಿಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ಅಲ್ಲಿಯೂ ಈ ಚಿತ್ರವು ಬಲವಾದ ಅಸ್ತಿತ್ವವನ್ನು ಹೊಂದಿದೆ ಎಂದು ತೋರುತ್ತದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಈ ವೀಡಿಯೊದಲ್ಲಿ ಬಿಲಾವಲ್ ಭುಟ್ಟೋ ಅವರು ಎಂಟ್ರಿ ಮಾಡುವಾಗ ಧುರಂಧರ್‌ನ( (ಮುಖ್ಯವಾಗಿ ಅಕ್ಷಯ್ ಖನ್ನಾ ಅವರ ರೆಹಮಾನ್ ದಾಕೈತ್ ಎಂಟ್ರಿ ಸಾಂಗ್ "FA9LA") ಹಾಡು ಜೋರಾಗಿ ಕೇಳಿಸುತ್ತಿದೆ. ಪಾಕಿಸ್ತಾನಿಗಳು ಒಂದೆಡೆ ಚಿತ್ರವನ್ನು ವಿರೋಧಿಸುತ್ತಾ, ಮತ್ತೊಂದೆಡೆ ಬಾಲಿವುಡ್ ಸಾಂಗ್‌ಗಳನ್ನು ಆನಂದಿಸುತ್ತಿರುವ ವಿರೋಧಾಭಾಸ ಗಮನ ಸೆಳೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಇದು ಭಾರೀ ಟ್ರೋಲ್ ಮತ್ತು ಮೀಮ್‌ಗಳಿಗೆ ಕಾರಣವಾಗಿದೆ. ಭಾರತೀಯರ ವಿರುದ್ಧ ಹಗೆ ಸಾಧಿಸುತ್ತಾ ರಹಸ್ಯವಾಗಿ ಇಂಡಿಯನ್ ಸಿನಿಮಾ ನೋಡುತ್ತಾರೆ ಎಂದು ಟೀಕಿಸುತ್ತಿದ್ದಾರೆ.
ಚಿತ್ರವನ್ನು ಪಾಕಿಸ್ತಾನ ಮತ್ತು ಕೆಲವು ಗಲ್ಫ್ ದೇಶಗಳಲ್ಲಿ (UAE, ಸೌದಿ ಇತ್ಯಾದಿ) ಬ್ಯಾನ್ ಮಾಡಲಾಗಿದೆ, ಏಕೆಂದರೆ ಅದು ಪಾಕಿಸ್ತಾನ್‌ನ ಲ್ಯಾರಿ ಪ್ರದೇಶ, ಗ್ಯಾಂಗ್‌ವಾರ್ ಮತ್ತು PPPಗೆ ಸಂಬಂಧಿಸಿದ ರೆಫರೆನ್ಸ್‌ಗಳನ್ನು ತೋರಿಸಿದೆ ಎಂದು ಆರೋಪ ಹೊರಿಸಲಾಗಿದೆ.
ವರ್ಲ್ಡ್‌ವೈಡ್ 590-600 ಕೋಟಿ ಕಲೆಕ್ಷನ್
ಇದೇ ಡಿಸೆಂಬರ್ 5ಕ್ಕೆ ರಿಲೀಸ್ ಆದ ಈ ಚಿತ್ರ ಡಿಸೆಂಬರ್ 16ರವರೆಗೆ ಭಾರತದಲ್ಲಿ 410-470 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ವರ್ಲ್ಡ್‌ವೈಡ್ 590-600 ಕೋಟಿ ದಾಟಿದೆ. ಈ ಚಿತ್ರದಿಂದ ಅಕ್ಷಯ್ ಅವರು ಮತ್ತೆ ಬಾಲಿವುಡ್‌ನ ಟಾಪ್ ಅಂಡರ್‌ರೇಟೆಡ್ ಟ್ಯಾಲೆಂಟ್ ಆಗಿ ಮರುಜನ್ಮ ಪಡೆದಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ,(ಏಜೆನ್ಸೀಸ್).