ರೈಲಿನ ಮೇಲೆ ಬಿದ್ದ ಕ್ರೇನ್; 22 ಪ್ರಯಾಣಿಕರ ಸಾವು..Train

Train
Train
Published on
ಥೈಲ್ಯಾಂಡ್‌: ( Train) ಥೈಲ್ಯಾಂಡ್‌ನ ಈಶಾನ್ಯ ಪ್ರಾಂತ್ಯವಾದ ನಖೋನ್ ರಾಚಸಿಮಾದಲ್ಲಿ ಇಂದು (ಜನವರಿ 14, 2026, ಬುಧವಾರ) ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ ಮತ್ತು 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬ್ಯಾಂಕಾಕ್‌ನಿಂದ ಸುಮಾರು 230 ಕಿ.ಮೀ ದೂರದಲ್ಲಿರುವ ಸಿಖಿಯು ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ.ಚೀನಾ ಬೆಂಬಲಿತ ಹೈಸ್ಪೀಡ್ ರೈಲು ಯೋಜನೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ, ಭಾರೀ ಗಾತ್ರದ ನಿರ್ಮಾಣ ಕ್ರೇನ್ (Construction Crane) ಹಳಿಯ ಮೇಲೆ ಹಾದು ಹೋಗುತ್ತಿದ್ದ ಪ್ರಯಾಣಿಕ ರೈಲಿನ ಮೇಲೆ ಬಿದ್ದಿದೆ.
ಕ್ರೇನ್ ಬಿದ್ದ ರಭಸಕ್ಕೆ ರೈಲಿನ ಬೋಗಿಗಳು ಹಳಿತಪ್ಪಿ ತಕ್ಷಣವೇ ಬೆಂಕಿ ಹೊತ್ತಿಕೊಂಡಿತು. ರೈಲಿನಲ್ಲಿ ಸುಮಾರು 195 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಸ್ಥಳೀಯ ಪೊಲೀಸರ ಪ್ರಕಾರ ಸದ್ಯಕ್ಕೆ 22 ಜನರು ಮೃತಪಟ್ಟಿದ್ದಾರೆ ಎಂದು ಖಚಿತಪಟ್ಟಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ರೈಲಿನ ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕ ಪ್ರಯಾಣಿಕರು ಸಿಲುಕಿಕೊಂಡಿರುವ ಶಂಕೆ ಇರುವುದರಿಂದ, ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ. ಈ ಭೀಕರ ಅಪಘಾತದಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದರು ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಕ್ರೇನ್ 5.4 ಬಿಲಿಯನ್ ಡಾಲರ್ ವೆಚ್ಚದ ಹೈಸ್ಪೀಡ್ ರೈಲು ಯೋಜನೆಯ ಭಾಗವಾಗಿತ್ತು. ಇದು ಬ್ಯಾಂಕಾಕ್ ಅನ್ನು ಚೀನಾದ ಕುನ್ಮಿಂಗ್‌ಗೆ ಸಂಪರ್ಕಿಸುವ ಬೃಹತ್ ಯೋಜನೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net