ಏಕಾಂತದಲ್ಲಿದ್ದ ದಂಪತಿ ಬೆಡ್​ ಕೆಳಗೆ ಕಂಡ ನಾಗಪ್ಪ; 'ಬದುಕಿದ್ದೇ ಹೆಚ್ಚು ಕಣ್ರಪ್ಪ ಎಂದ ಥೈಲ್ಯಾಂಡ್‌ ಪ್ರವಾಸದಲ್ಲಿದ್ದ ಜೋಡಿ..Thailand Travel Tragedy

Thailand Travel Tragedy
Thailand Travel Tragedy
Published on
Thailand Travel Tragedy:ಒತ್ತಡ ಮತ್ತು ಮಾನಸಿಕವಾಗಿ ಬೆಂದ ದೇಹವನ್ನು ತಣಿಸಲು ಪ್ರವಾಸಕ್ಕೆ ಹೋಗೋದು ಸಾಮಾನ್ಯ. ಆದರೆ, ಅಲ್ಲಿಯೂ ಸಾವು ಬಾಯಿಗೆ ಬರುವಂತಹ ಪ್ರಕರಣಗಳು ನಡೆದುಬಿಟ್ಟರೆ ಅಬ್ಬಾ..!. ಇದೆಲ್ಲ ಬೇಕಿತ್ತಾ ಎಂದು ಎನಿಸಿಬಿಡುತ್ತದೆ. ಅಂತದ್ದೇ ಒಂದು ಮರೆಯಲಾಗದ ಘಟನೆಯನ್ನು ಥೈಲ್ಯಾಂಡ್‌​ಗೆ ತೆರಳಿದ್ದ ದಂಪತಿ ಅನುಭವಿಸಿದ್ದಾರೆ. 
ರಜಾ ದಿನಗಳನ್ನು ಹಾಯಾಗಿ ಕಳೆಯಲು ಥೈಲ್ಯಾಂಡ್‌ಗೆ ತೆರಳಿದ್ದ ದಂಪತಿ, ಕ್ರಾಬಿಯಲ್ಲಿನ ಹೋಟೆಲ್​ವೊಂದರಲ್ಲಿ​ ಕೋಣೆಯೊಂದನ್ನು ಬಾಡಿಗೆಗೆ (Krabi Hotel Snake incident) ತೆಗೆದುಕೊಂಡಿದ್ದರು. ರಾತ್ರಿ ಗಾಢವಾಗಿ ಮಲಗಿರುವ ವೇಳೆ ಅವರ ಬೆಡ್​ ಬಳಿ ವಿಷಕಾರಿ ಹಾವೊಂದು ಹರಿದಾಡಿರುವುದು ಗಮನಕ್ಕೆ ಬಂದಿದೆ.  

ಬೆಡ್​ ಕೆಳಗೆ ಕಂಡ ನಾಗಪ್ಪ

ಥೈಲ್ಯಾಂಡ್‌ ಸುತ್ತಮುತ್ತಲು ಭತ್ತದ ಗದ್ದೆ, ಕಡಲ ತೀರ, ಪರ್ವತ ಗುಡ್ಡಗಳಿಂದ ಕೂಡಿದೆ. ಸೆಲಬ್ರೆಟಿಗಳು ಸೇರಿದಂತೆ ಹಲವರು ಕಾಬ್ರಿಯಲ್ಲಿನ ಕಡಲ ತೀರ, ಐತಿಹಾಸಿಕ ದೇಗುಲಗಳ ವೀಕ್ಷಣೆಗೆ ಭೇಟಿ ನೀಡುತ್ತಾರೆ. ಮ್ಯಾನ್ಮಾರ್​, ಕಾಂಬೋಡಿಯಾ, ಮಲೇಷಿಯಾ ಒಂದೊಂದು ಪ್ರದೇಶದಲ್ಲೂ ವಿಸ್ಮಯತೆ ಹೆಚ್ಚಿದೆ. 

ಭದ್ರತೆ ಬಗ್ಗೆ ಹೆಚ್ಚಿದ ಆತಂಕ

ಸದ್ಯ ಕಣ್ಣುತ್ತಾಕರ್ನ್ ಉತ್ತರಣಾಕ್ರೋನ್ ಎಂಬುವವರು ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಪ್ರವಾಸಿಗರಲ್ಲಿ ಆತಂಕವನ್ನುಂಟು ಮಾಡಿದೆ. ಬೆಳಿಗ್ಗೆ ಸುಮಾರು 5 ಗಂಟೆ. ಪಕ್ಕದಲ್ಲಿದ್ದ ನನ್ನ ಸಂಗಾತಿ ಜೋರಾಗಿ ಕಿರುಚಾಡಲು ಶುರು ಮಾಡಿದರು. ಬೆಳ್ಳಂಬೆಳಗ್ಗೆ  ಇವಳ್ಯಾಕೆ ಹೀಗೆ ಕಿರುಚಾಡುತ್ತಿದ್ದಾಳೆ ಎಂದು ಕೇಳಿದೆ. ಆಗ ಎದೆ ಝಲ್​ ಎನ್ನುವ ವಿಚಾರವನ್ನು ಆಕೆ ಹೇಳಿದಳು. 
ನನ್ನ ಕುತ್ತಿಗೆ ಮೇಲೆ ಹಾವು ಹರಿದಾಡಿಂತಾಯಿತು ಎಂದು ಆಕೆ ಹೇಳಿದಳು. ಮೊದಲಿಗೆ ಭ್ರಮೆ ಎಂದು ತಿಳಿದು ಸುಮ್ಮನಾದ ಆಕೆ. ನಂತರ ಟಾರ್ಚ್​​ ಹಾಕಿ ಹುಡುಕಾಡಿದಾಗ ನಮ್ಮ ಬೆಡ್ ​ಕೆಳಗೆ ಹಾವು ಬುಸ್​ಗುಡುತ್ತಿತ್ತು. ಅದೃಷ್ಟವಶಾತ್ ಇಬ್ಬರಿಗೆ ಹಾವು ಕಚ್ಚಲಿಲ್ಲ ಎಂದು ದಂಪತಿ ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net