ಈ ಘಟನೆ ದಾಖಲಾಗುತ್ತಿದ್ದಂತೆ ನ್ಯೂಯಾರ್ಕ್ ಪೊಲೀಸರು ಕಾರ್ಯಪ್ರವರ್ತರಾಗಿದ್ದಾರೆ. ಮಾಹಿತಿ ಪ್ರಕಾರ, ಗುಪ್ತಚರ ಪೊಲೀಸರು ಕೆಲ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಮೃತಪಟ್ಟ ಇಬ್ಬರೂ ರಟ್ಗರ್ಸ್ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಒಂದೇ ವರ್ಷ ತೇರ್ಗಡೆಯಾಗಿದ್ದಾರೆಂದು ತಿಳಿದು ಬಂದಿದೆ. ಮಲೈಕಾ ಚಿತ್ರೆ ಈಕೆ, ಅಕಾಡಿಯಾ ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಕಾರ್ಯಾಚರಣೆ ತಜ್ಞಯಾಗಿ ಕೆಲಸ ಮಾಡುತ್ತಿದ್ದರೆ, ನವಮ್ ಕೌಲ್ ಬ್ಲೂಮ್‌ಬರ್ಗ್‌ನಲ್ಲಿ ಹಣಕಾಸು ದತ್ತಾಂಶ ವಿಶ್ಲೇಷಕನಾಗಿ ಕೆಲಸ ಮಾಡುತ್ತಿದ್ದನೆಂದು ಪತ್ತೆಹಚ್ಚಲಾಗಿದೆ.