ಕದನ ವಿರಾಮ ಒಪ್ಪಂದ ಮುಕ್ತಾಯವಾದ ಬಳಿಕ ಏನಾಗಲಿದೆ ಎಂಬುದೇ ಈಗ ದೊಡ್ಡ ಪ್ರಶ್ನೆ. ಎರಡೂ ದೇಶಗಳು ಸಂಘರ್ಷದಲ್ಲಿ ತಾವೇ ಮೇಲುಗೈ ಸಾಧಿಸಿದ್ದೇವೆ ಎಂದು ಹೇಳಿಕೊಂಡಿವೆ. ಆದರೆ ಶಾಶ್ವತ ರಾಜಕೀಯ ಪರಿಹಾರ ಇನ್ನೂ ದೂರದಲ್ಲಿದೆ. ಇರಾನ್‌ನ ಪರಮಾಣು ಕಾರ್ಯಕ್ರಮ, ಆಡಳಿತ ಬದಲಾವಣೆ, ಪರಮಾಣು ಅಸ್ತ್ರ ಹೊಂದದಂತೆ ತಡೆಯುವುದು ಮತ್ತು ಮಧ್ಯಪ್ರಾಚ್ಯದಲ್ಲಿನ ಇರಾನ್ ಬೆಂಬಲಿತ ಸಂಘಟನೆಗಳ ವಿಚಾರಗಳು ಅಮೆರಿಕದ ಪ್ರಮುಖ ಗುರಿಗಳಾಗಿವೆ. ಹೀಗಾಗಿ ರಾಜತಾಂತ್ರಿಕ ಮಾತುಕತೆ ಮುಂದುವರಿಯುತ್ತಾ? ಅಥವಾ ಮತ್ತೆ ಯುದ್ಧದ ಕಾವು ಹೆಚ್ಚುತ್ತಾ? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).