ಭ್ರಷ್ಟಾಚಾರ ಪ್ರಕರಣ: ಶೇಕ್​ ಹಸೀನಾಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬಾಂಗ್ಲಾ ನ್ಯಾಯಾಲಯ | Sheikh Hasina

ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಕ್​ ಹಸೀನಾ
ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಕ್​ ಹಸೀನಾ
Published on

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಕ್​ ಹಸೀನಾಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಬಾಂಗ್ಲಾ ನ್ಯಾಯಾಲಯ
  • ಸರ್ಕಾರಿ ವಸತಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರ ಹಿನ್ನಲೆ ಶಿಕ್ಷೆ ಪ್ರಕಟ
  • ಹಸೀನಾ ಜತೆ, ಸೋದರಳಿಯ ಮತ್ತು ಸೊಸೆಯಂದಿರಿಗೂ ಶಿಕ್ಷೆ ಘೋಷಿಸಿದ ನ್ಯಾಯಾಲಯ
ಬಾಂಗ್ಲಾದೇಶ: ಸರ್ಕಾರಿ ವಸತಿ ಯೋಜನೆಯಲ್ಲಿ ಭೂ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಾಂಗ್ಲಾದೇಶ ಸ್ಥಳೀಯ ನ್ಯಾಯಾಲಯವು ಸೋಮವಾರ (ಫೆ.2) ದೇಶಭ್ರಷ್ಟ ಪ್ರಧಾನಿ ಶೇಖ್ ಹಸೀನಾ (Sheikh Hasina) ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಢಾಕಾ ವಿಶೇಷ ನ್ಯಾಯಾಧೀಶರ ನ್ಯಾಯಾಲಯ, ನ್ಯಾ. ರಬಿಯುಲ್ ಅಲಂ ತೀರ್ಪನ್ನು ಪ್ರಕಟಿಸಿದ್ದು, ಹಸೀನಾ ಅವರಿಗೆ ಪ್ರತಿ ಪ್ರಕರಣಕ್ಕೆ 5 ವರ್ಷದಂತೆ ಒಟ್ಟು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ವರದಿಯಾಗಿದೆ. ರಾಜುಕ್ ನ್ಯೂ ಟೌನ್ ಯೋಜನೆಯಡಿ ಪ್ಲಾಟ್‌ಗಳ ಹಂಚಿಕೆಯಲ್ಲಿ ಅಕ್ರಮಗಳ ಆರೋಪದ ಮೇಲೆ 78 ವರ್ಷದ ಶೇಖ್ ಹಸೀನಾ, ಸೋದರಳಿಯ ರದ್ವಾನ್ ಮುಜೀಬ್ ಸಿದ್ದಿಕ್ ಮತ್ತು ಸೊಸೆಯಂದಿರಾದ ತುಲಿಪ್ ರಿಜ್ವಾನಾ ಸಿದ್ದಿಕ್ ಮತ್ತು ಅಜ್ಮಿನಾ ಸಿದ್ದಿಕ್ ಮತ್ತು ಇತರರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ತುಲಿಪ್ ಸಿದ್ದಿಕ್‌ಗೆ ನಾಲ್ಕು ವರ್ಷ ಜೈಲು ಶಿಕ್ಷೆ

ಪ್ರಕಟವಾದ ತೀರ್ಪಿನಲ್ಲಿ ಶೇಖ್ ಹಸೀನಾಳ ಸೊಸೆ ತುಲಿಪ್ ಸಿದ್ದಿಕ್‌ಗೆ ನಾಲ್ಕು ವರ್ಷ ಮತ್ತು ಅಳಿಯ ರದ್ವಾನ್ ಮುಜೀಬ್ ಸಿದ್ದಿಕ್ ಮತ್ತು ಅಜ್ಮಿನಾ ಸಿದ್ದಿಕ್‌ಗೆ ಎರಡೂ ಪ್ರಕರಣಗಳಲ್ಲಿ ತಲಾ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ಮುಂದೆ ಶರಣಾದ ಏಕೈಕ ಆರೋಪಿ ಮೊಹಮ್ಮದ್ ಖುರ್ಷಿದ್ ಆಲಂಗೆ ಪ್ರತಿ ಪ್ರಕರಣದಲ್ಲಿ ಒಂದು ವರ್ಷದಂತೆ ಒಟ್ಟು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಲಾಗಿದೆ.
ಒಂದು ಲಕ್ಷ ಟಾಕಾ ದಂಡ ವಿಧಿಸಿದ ನ್ಯಾಯಾಲಯ
ನ್ಯಾಯಾಲಯವು ಎಲ್ಲಾ ಶಿಕ್ಷೆಗೊಳಗಾದ ವ್ಯಕ್ತಿಗಳಿಗೆ ತಲಾ 1 ಲಕ್ಷ ಟಾಕಾ ದಂಡ ವಿಧಿಸಿತು ಮತ್ತು ಪಾವತಿ ಮಾಡದಿದ್ದರೆ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆಗೆ ಗುರಿಮಾಡುವುದಾಗಿ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ನಡೆದ ಭಾರೀ ಪ್ರತಿಭಟನೆ ಹಿನ್ನಲೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಶೇಕ್​ ಹಸೀನಾ ಭಾರತದಲ್ಲಿ ವಾಸಿಸುತ್ತಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net