ಹನುಮಾನ್ ಪ್ರತಿಮೆ ಬಗ್ಗೆ ವಿವಾದಾತ್ಮಕ ಹೇಳಿಕೆ: ಟೆಕ್ಸಾಸ್ ರಿಪಬ್ಲಿಕನ್ ನಾಯಕನ ವಿರುದ್ಧ ಭಾರಿ ಆಕ್ರೋಶ! | Hanuman

Hanuman
Hanuman
Published on

ಟೆಕ್ಸಾಸ್‌:ಟೆಕ್ಸಾಸ್‌ನ ಶುಗರ್ ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಾಲಯದಲ್ಲಿ ನಿರ್ಮಿಸಲಾದ 90 ಅಡಿಎತ್ತರದ ಹನುಮಂತನ(Hanuman) ಪ್ರತಿಮೆಯ (Statue of Union) ಬಗ್ಗೆ ಮಗಾ (MAGA) ಕಾರ್ಯಕರ್ತಮತ್ತು ರಿಪಬ್ಲಿಕನ್ ನಾಯಕ ಕಾರ್ಲೋಸ್ ಟುರ್ಸಿಯೊಸ್ ನೀಡಿದ ಹೇಳಿಕೆ ಈಗ ಅಮೆರಿಕದಲ್ಲಿ ಭಾರಿ ಚರ್ಚೆಗೆಗ್ರಾಸವಾಗಿದೆ.

ಪ್ರತಿಮೆಯ ವೀಡಿಯೊವನ್ನುಹಂಚಿಕೊಂಡ ಕಾರ್ಲೋಸ್ ಟುರ್ಸಿಯೊಸ್, "ಇದು ಇಸ್ಲಾಮಾಬಾದ್ ಅಥವಾ ನವದೆಹಲಿ ಅಲ್ಲ, ಇದು ಟೆಕ್ಸಾಸ್.ಮೂರನೇ ಜಗತ್ತಿನ ಪರಕೀಯರು (Aliens) ಅಮೆರಿಕ ಮತ್ತು ಟೆಕ್ಸಾಸ್ ಅನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ.ಅಮೆರಿಕದ ಮೂರನೇ ಅತಿ ಎತ್ತರದ ಪ್ರತಿಮೆ ಇದ್ಯಾಕಿರಬೇಕು? ಈ ಆಕ್ರಮಣವನ್ನು ನಿಲ್ಲಿಸಿ" ಎಂದುಎಕ್ಸ್ (X) ನಲ್ಲಿ ಬರೆದುಕೊಂಡಿದ್ದಾರೆ. ಅವರ ಈ 'ಇನ್ವೇಷನ್' (Invasion) ಎಂಬ ಪದ ಬಳಕೆಯು ಜನಾಂಗೀಯದ್ವೇಷದ ಸಂಕೇತ ಎಂದು ಅನೇಕರು ಟೀಕಿಸಿದ್ದಾರೆ.

ಪ್ರತಿಮೆಯವಿಶೇಷತೆಗಳು

ಎತ್ತರ: 90 ಅಡಿ (ಅಮೆರಿಕದ 3ನೇ ಅತಿ ಎತ್ತರದ ಪ್ರತಿಮೆ).

ಹೆಸರು: ಪಂಚಲೋಹ ಅಭಯ ಹನುಮಾನ್ (Statue ofUnion).

ಉದ್ಘಾಟನೆ: 2024 ರಲ್ಲಿ ಶ್ರೀ ಚಿನ್ನಜೀಯರ್ ಸ್ವಾಮೀಜಿಅವರ ಮಾರ್ಗದರ್ಶನದಲ್ಲಿ ಇದನ್ನು ನಿರ್ಮಿಸಲಾಯಿತು.

ಸಂದೇಶ: ಇದು ಭಕ್ತಿ, ಶಕ್ತಿ ಮತ್ತು ಶಾಂತಿಯ ಆಧ್ಯಾತ್ಮಿಕಕೇಂದ್ರವೆಂದು ಗುರುತಿಸಲ್ಪಟ್ಟಿದೆ.

ಮುಖಭಂಗ ಮಾಡಿದನೆಟ್ಟಿಗರು

ಕಾರ್ಲೋಸ್ ಅವರಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಕ್ಕ ಉತ್ತರಗಳು ಲಭ್ಯವಾಗಿವೆ.

ಭಾಷೆ ಮತ್ತುಸಂಸ್ಕೃತಿ: ಕಾರ್ತಿಕ್ಗಡ ಎಂಬುವವರು ಅಂಕಿಅಂಶಗಳ ಸಮೇತ ಪ್ರತಿಕ್ರಿಯಿಸಿ, ಅಮೆರಿಕದಲ್ಲಿ 4.1 ಕೋಟಿ ಸ್ಪ್ಯಾನಿಷ್ ಮಾತನಾಡುವವರಿದ್ದಾರೆ.ಆದರೆ ಯಾವುದೇ ಭಾರತೀಯ ಭಾಷೆಗಳು ಮೊದಲ ಹತ್ತು ಸ್ಥಾನಗಳಲ್ಲಿಲ್ಲ. ಭಾರತೀಯ ಮೂಲದವರು ಅಮೆರಿಕದ ಸಂಸ್ಕೃತಿಗೆಉತ್ತಮವಾಗಿ ಹೊಂದಿಕೊಂಡಿದ್ದಾರೆ ಎಂದು ನೆನಪಿಸಿದ್ದಾರೆ.

ಸಹಿಷ್ಣುತೆ: "ಹಿಂದೂ ಧರ್ಮ ಯಾರನ್ನೂ ಬಲವಂತವಾಗಿಮತಾಂತರ ಮಾಡುವುದಿಲ್ಲ, ಹಿಂದೂಗಳಿಂದ ಪಾಶ್ಚಿಮಾತ್ಯ ಸಂಸ್ಕೃತಿಗೆ ಯಾವುದೇ ಅಪಾಯವಿಲ್ಲ. ಮೊದಲು ಧರ್ಮದಬಗ್ಗೆ ಅಧ್ಯಯನ ಮಾಡಿ" ಎಂದು ಆಡೆಲ್ ನಜಾರಿಯನ್ ಎಂಬುವವರು ಟೀಕಿಸಿದ್ದಾರೆ.

ಧಾರ್ಮಿಕಹಕ್ಕು: "ಅಮೆರಿಕದನೆಲದಲ್ಲಿ ಹಿಂದೂಗಳಿಗೆ ತಮ್ಮ ಧರ್ಮವನ್ನು ಪಾಲಿಸುವ ಹಕ್ಕಿದೆ. ನಿಮಗೆ ಇಷ್ಟವಿಲ್ಲದಿದ್ದರೆ ಆ ಕಡೆನೋಡಬೇಡಿ" ಎಂದು ನೂರಿ ಸುನ್ನಾ ಎಂಬುವವರು ಬರೆದಿದ್ದಾರೆ.

ಈ ಹಿಂದೆ ಅಲೆಕ್ಸಾಂಡರ್ಡಂಕನ್ ಎಂಬ ಮತ್ತೊಬ್ಬ ರಿಪಬ್ಲಿಕನ್ ನಾಯಕ ಕೂಡ ಅಮೆರಿಕ ಒಂದು 'ಕ್ರಿಶ್ಚಿಯನ್ ರಾಷ್ಟ್ರ' ಎಂದು ಹೇಳುವಮೂಲಕ ಈ ಪ್ರತಿಮೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net