2 ಸೆಕೆಂಡ್​, 700 ಕಿ.ಮೀ! ಈ ವಿಷಯದಲ್ಲಿ ಚೀನಾ ಮುಂಚೂಣಿ; ವಿಶ್ವ ದಾಖಲೆ ನಿರ್ಮಾಣ | Maglev Train

ಚೀನಾದ ಮ್ಯಾಗ್ಲೆವ್ ರೈಲು
ಚೀನಾದ ಮ್ಯಾಗ್ಲೆವ್ ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಕೇವಲ ಎರಡು ಸೆಕೆಂಡುಗಳಲ್ಲಿ ಗಂಟೆಗೆ 700 ಕಿ.ಮೀ
  • ಕಣ್ಣು ಮಿಟುಕಿಸುವುದರೊಳಗೆ ಸಾಗಿದ ರೈಲು, ದೃಶ್ಯ ವೈರಲ್
  • 400 ಮೀಟರ್ ಹಳಿಯಲ್ಲಿ ನಡೆಸಿದ ಟ್ರಯಲ್​ ಯಶಸ್ವಿ
ಬೀಜಿಂಗ್: ಕೇವಲ ಎರಡು ಸೆಕೆಂಡುಗಳಲ್ಲಿ ಗಂಟೆಗೆ 700 ಕಿ.ಮೀ ಕ್ರಮಿಸುವ ಮೂಲಕ ಚೀನಾದ ಮ್ಯಾಗ್ಲೆವ್ ರೈಲು ವಿಶ್ವ ದಾಖಲೆಯನ್ನು ಬರೆದಿದೆ. ಕಣ್ಣು ಮಿಟುಕಿಸುವುದರೊಳಗೆ ಶರವೇಗದಲ್ಲಿ ಸಾಗುವ ಈ ರೈಲಿನ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಸೂಪರ್ ಕಂಡಕ್ಟಿಂಗ್ ಎಲೆಕ್ಟ್ರಿಕ್ ಮ್ಯಾಗ್ಲೆವ್ ವ್ಯವಸ್ಥೆಗಳನ್ನು ಬಳಸಿಕೊಂಡು ಈ ಅಪರೂಪದ ಸಾಧನೆಗೈದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ. ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮ್ಯಾಗ್ನೆಟಿಕ್ ಲೆವಿಟೇಶನ್ ರೈಲಿನಲ್ಲಿ ಈ ಪರೀಕ್ಷೆಯನ್ನು ಕೈಗೊಂಡರು. ಸುಮಾರು 1 ಟನ್​ ಕೆಜಿ ತೂಕವನ್ನು ಹೊತ್ತು ಸಾಗಿದ ರೈಲು, ಗಂಟೆಗೆ 700 ಕಿ.ಮೀ ಅನ್ನು 2 ಸೆಕೆಂಡ್​ನಲ್ಲಿ ಕ್ರಮಿಸಿರುವುದು ಇಡೀ ಜಗತ್ತನ್ನೇ ಅಚ್ಚರಿಗೆ ದೂಡಿದೆ.
400 ಮೀಟರ್ ಹಳಿಯಲ್ಲಿ ಈ ಟ್ರಯಲ್​ ಅನ್ನು ನಡೆಸಲಾಯಿತು. ಇದು ವಿಶ್ವದಲ್ಲೇ ಅತ್ಯಂತ ವೇಗದ ಸೂಪರ್ ಕಂಡಕ್ಟಿಂಗ್ ಎಲೆಕ್ಟ್ರಿಕ್ ಮ್ಯಾಗ್ಲೆವ್ ರೈಲು ಎನ್ನಲಾಗಿದೆ. ವಿಶೇಷವಾಗಿ, ಈ ಪ್ರಯೋಗವು ಹೈಪರ್‌ಲೂಪ್‌ನಲ್ಲಿ ಮ್ಯಾಗ್ಲೆವ್ ಟೆಕ್ನಾಲಜಿ ಬಳಸಿಕೊಂಡು ಭವಿಷ್ಯದಲ್ಲಿ ಪ್ರಯಾಣದ ವೇಗ ಹೇಗೆ ಇರಲಿದೆ ಎಂಬುದನ್ನು ತೋರಿಸಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net