ಉಸೇನ್ ಬೋಲ್ಟ್ ವಿಶ್ವ ದಾಖಲೆ ಪುಡಿಗಟ್ಟಿದ ಎರಡು ರೋಬೋ! ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಉಸೇನ್ ಬೋಲ್ಟ್ ವಿಶ್ವ ದಾಖಲೆ ಪುಡಿಗಟ್ಟಿದ ರೋಬೋ
ಉಸೇನ್ ಬೋಲ್ಟ್ ವಿಶ್ವ ದಾಖಲೆ ಪುಡಿಗಟ್ಟಿದ ರೋಬೋ
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾ ಜಗತ್ತಿನಲ್ಲಿ ಹೊಸ ಐತಿಹಾಸಿಕ ದಾಖಲೆ ಬರೆದ ಚೀನಾ ನಿರ್ಮಿತ ಹ್ಯೂಮನಾಯ್ಡ್​ ರೋಬೋ
  • ಚೀನಾದ ಬೀಜಿಂಗ್‌ನಲ್ಲಿ ನಡೆದ ‘ವರ್ಲ್ಡ್ ಹ್ಯೂಮನಾಯ್ಡ್ ರೋಬೋಟ್ ಗೇಮ್ಸ್’‌ ಸ್ಪರ್ಧೆ
  • ಉಸೇನ್ ಬೋಲ್ಟ್ ಹೆಸರಲ್ಲಿದ್ದ 100 ಮೀಟರ್​ ಸ್ಪರ್ಧೆಯ ವಿಶ್ವ ದಾಖಲೆ ಪುಡಿಗಟ್ಟಿದ 2 ರೋಬೋ
ಬೀಜಿಂಗ್: ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್​ ಯುಗದಲ್ಲಿ ಮಾನವನ ಅರ್ಧದಷ್ಟು ಕೆಲಸಕ್ಕೆ ಈಗಾಗಲೇ ಸವಾಲೆಸೆಯುವ ಸಾಮರ್ಥ್ಯ ಹೊಂದಿರುವ ಕೃತಕ ಬುದ್ಧಿಮತ್ತೆ, ಬಹು ವಲಯಗಳಲ್ಲಿ ಲಕ್ಷಾಂತರ ಜನರ ಉದ್ಯೋಗವನ್ನೇ ಕಸಿದುಕೊಂಡಿದೆ. ಹೀಗಿರುವಾಗಲೇ, ಚೀನಾದವರು ನಿರ್ಮಿಸಿರುವ ಹ್ಯೂಮನಾಯ್ಡ್​ ರೋಬೋಗಳು (Humanoid Robots) ಕ್ರೀಡಾ ಜಗತ್ತಿನಲ್ಲಿ ಹೊಸ ಐತಿಹಾಸಿಕ ದಾಖಲೆಯನ್ನು ಬರೆದಿರುವುದು ಸದ್ಯ ಭವಿಷ್ಯದಲ್ಲಿ ಮನುಷ್ಯರಿಗೆ ಹೊಸ ಕಂಟಕ ಎದುರಾದಂತಿದೆ.
ಇತ್ತೀಚೆಗಷ್ಟೇ ಚೀನಾದ ಬೀಜಿಂಗ್‌ನಲ್ಲಿ ನಡೆದ ‘ವರ್ಲ್ಡ್ ಹ್ಯೂಮನಾಯ್ಡ್ ರೋಬೋಟ್ ಗೇಮ್ಸ್’‌ನಲ್ಲಿ ಚೀನಾದ ಎರಡು ಮಾನವರೂಪಿ ರೋಬೋಗಳು, ಅಥ್ಲೆಟಿಕ್ಸ್ ಇತಿಹಾಸದಲ್ಲಿ ಇಂದಿಗೂ ದಂತಕಥೆಯಾಗಿ ಜನರು ಎದುರಿಗಿರುವ ಉಸೇನ್ ಬೋಲ್ಟ್ ಅವರ ಹೆಸರಲ್ಲಿದ್ದ 100 ಮೀಟರ್​ ಸ್ಪರ್ಧೆಯ ವಿಶ್ವ ದಾಖಲೆಯನ್ನು ಇದೀಗ ಈ ಮಾನವ ನಿರ್ಮಿತ ರೋಬೋ ಮೀರಿಸಿದೆ.  

ಮಿಂಚಿನ ವೇಗದಲ್ಲಿ ಓಡಿದ 'ಟಿಯಾನ್‌ಗಾಂಗ್‌' ಮತ್ತು 'ಲೈಟ್ನಿಂಗ್'

ಬೀಜಿಂಗ್ ಹ್ಯೂಮನಾಯ್ಡ್ ರೋಬೋಟ್ ಇನ್ನೋವೇಶನ್ ಸೆಂಟರ್' ಅಭಿವೃದ್ಧಿಪಡಿಸಿದ ಬಣ್ಣದ ಈ ರೋಬೋಟ್, 100 ಮೀಟರ್ ಓಟವನ್ನು ಕೇವಲ 9.39 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಮೊದಲ ಸ್ಥಾನ ಅಲಂಕಿಸಿತು. ಇನ್ನು ಲೈಟ್ನಿಂಗ್​, ಸ್ಮಾರ್ಟ್‌ಫೋನ್ ದೈತ್ಯ ಸಂಸ್ಥೆ 'ಹಾನರ್' (Honor) ಅಭಿವೃದ್ಧಿಪಡಿಸಿದ ಬ್ಲಾಕ್​-ವೈಟ್​ ಬಣ್ಣ ಮಿಶ್ರಿತ ಈ ರೋಬೋಟ್, 9.47 ಸೆಕೆಂಡುಗಳಲ್ಲಿ ಗುರಿ ತಲುಪಿ, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು.  

ಬೋಲ್ಟ್ ದಾಖಲೆ ಉಡೀಸ್

ಜಮೈಕಾದ ಜಾವೆದ್ ಅಥ್ಲೀಟ್ ಉಸೇನ್ ಬೋಲ್ಟ್ 2009ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿರ್ಮಿಸಿದ್ದ 9.58 ಸೆಕೆಂಡುಗಳ ಹಳೆಯ ವಿಶ್ವ ದಾಖಲೆಯನ್ನು ಈ ಎರಡೂ ರೋಬೋಟ್‌ಗಳು ಸುಲಭವಾಗಿ ಮೆಟ್ಟಿ ನಿಂತಿವೆ. ಸನ್ನಾಹ ಪರೀಕ್ಷೆಯಲ್ಲಿ 'ಲೈಟ್ನಿಂಗ್' ರೋಬೋ 100 ಮೀಟರ್​ ರೇಸ್​ ಅನ್ನು ಕೇವಲ 9.32 ಸೆಕೆಂಡ್​ಗೆ ಓಡಿ, ಗಂಟೆಗೆ ಗರಿಷ್ಠ 14.5 ಮೀಟರ್ ವೇಗವನ್ನು ತಲುಪಿದ್ದಾಗಿ ವರದಿಯಾಗಿದೆ.

ಮ್ಯಾರಥಾನ್‌ನಲ್ಲೂ ಹೊಸ ದಾಖಲೆ

ಕಳೆದ ವರ್ಷ ನಡೆದ ಪ್ರಥಮ ಆವೃತ್ತಿಯಲ್ಲಿ ಟಿಯಾನ್‌ಗಾಂಗ್ ರೋಬೋಟ್, 21.50 ಸೆಕೆಂಡುಗಳಲ್ಲಿ 100 ಮೀಟರ್ ಮುಗಿಸಿತ್ತು. ಈ ಬಾರಿ ತನ್ನ ಸಾಮರ್ಥ್ಯವನ್ನು ಭಾರಿ ಪ್ರಮಾಣದಲ್ಲಿ ಸುಧಾರಿಸಿಕೊಂಡಿದೆ. ಅಷ್ಟೇ ಅಲ್ಲದೆ, ಈ ಬಾರಿಯ 'ರೋಬೋಟ್ ಹಾಫ್-ಮ್ಯಾರಥಾನ್' ಸ್ಪರ್ಧೆಯಲ್ಲಿ 'ಲೈಟ್ನಿಂಗ್' ರೋಬೋಟ್ ಕೇವಲ 50 ನಿಮಿಷ 26 ಸೆಕೆಂಡ್​ನಲ್ಲಿ ಪೂರ್ಣಗೊಳಿಸಿ ಮಾನವ ಮ್ಯಾರಥಾನ್ ವೇಗಕ್ಕಿಂತ ವೇಗವಾಗಿ ಓಡಿ ಗೆದ್ದು ಬೀಗಿದೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net