ಸಿಎನ್ಎನ್ ವರದಿಯ ಪ್ರಕಾರ, ಚೀನಾವು ಮ್ಯಾನ್ಪ್ಯಾಡ್ಸ್ ಎಂದು ಕರೆಯಲಾಗುವ, ಹೆಗಲ ಮೇಲೆ ಇಟ್ಟುಕೊಂಡು ಹಾರಿಸಬಹುದಾದ ವಿಮಾನ ನಿರೋಧಕ ಕ್ಷಿಪಣಿಗಳನ್ನು ಇರಾನ್ಗೆ ರವಾನಿಸಲು ಯೋಜಿಸುತ್ತಿದೆ. ಈ ಶಸ್ತ್ರಾಸ್ತ್ರಗಳನ್ನು ನೇರವಾಗಿ ಕಳುಹಿಸುವ ಬದಲು, ಮೂರನೇ ರಾಷ್ಟ್ರಗಳ ಮೂಲಕ ರಹಸ್ಯ ಮಾರ್ಗಗಳಲ್ಲಿ ರವಾನಿಸಿ, ತನ್ನ ಪಾತ್ರವನ್ನು ಮರೆಮಾಚಲು ಬೀಜಿಂಗ್ ಯತ್ನಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.