ನವದೆಹಲಿ: ಇರಾನ್ ಮೇಲೆ ಅಮೇರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ಜಂಟಿ ವೈಮಾನಿಕ ದಾಳಿಯು ಇರಾನ್‌ನ ಮಿಲಿಟರಿ ಶಕ್ತಿಯನ್ನು ಮಾತ್ರವಲ್ಲದೆ, ಚೀನಾ ನಿರ್ಮಿತ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯ ಮಾನವನ್ನೂ ಹರಾಜು ಹಾಕಿದೆ. ಇರಾನ್ ಹೆಮ್ಮೆಯಿಂದ ಬೀಗುತ್ತಿದ್ದ ಚೀನಾದ HQ-9B ಏರ್ ಡಿಫೆನ್ಸ್ ಸಿಸ್ಟಮ್ ಶತ್ರುಗಳ ಕ್ಷಿಪಣಿಗಳನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಇರಾನ್ ನಗರಗಳು ಈಗ ಸ್ಮಶಾನ ಸದೃಶವಾಗಿವೆ.