ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ; 80ಕ್ಕೂ ಹೆಚ್ಚು ಜನರು ಸಾವು..China coal mine blast

China Coal Mine Blast
China Coal Mine Blast
Published on

ಪ್ರಮುಖ ಮುಖ್ಯಾಂಶಗಳು

  • ಚೀನಾದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟ
  • ಅವಶೇಷಗಳಡಿಯಿದ್ದ 201 ಜನರನ್ನು ರಕ್ಷಣೆ, 80ಕ್ಕೂ ಹೆಚ್ಚು ಜನರು ಸಾವು
  • ತುರ್ತು ರಕ್ಷಣೆ, ಸಮಗ್ರ ತನಿಖೆಗೆ ಅಧ್ಯಕ್ಷ ಷಿ ಜಿನ್​ಪಿಂಗ್​ ಅಧಿಕಾರಿಗಳಿಗೆ ಸೂಚನೆ
China Coal Mine Blast: ಉತ್ತ ಚೀನಾದ ಶಾಂಕ್ಸಿ ಪ್ರಾಂತ್ಯದ ಚಾಂಗ್ಜಿ ನಗರದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟ ಸಂಭವಿಸಿದ್ದು, ಎಂಬತ್ತಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಕ್ಸಿನ್ಹುವಾ ಪ್ರಕಾರ, ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದಾಗ 247 ಕಾರ್ಮಿಕರು ನೆಲದಡಿ ಕೆಲಸ ಮಾಡುತ್ತಿದ್ದರು. ಸ್ಫೋಟಕ್ಕೆ ಕಾರಣ ಏನು ಎನ್ನುವುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಮುಂಜಾನೆಯ ಹೊತ್ತಿಗೆ, 201 ಜನರನ್ನು ರಕ್ಷಿಸಲಾಗಿದ್ದು, ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಜಿನ್​ಪಿಂಗ್​ ಹೇಳಿದ್ದೇನು?
ಕಾರ್ಮಿಕರ ತುರ್ತು ರಕ್ಷಣೆಗಾಗಿ, ಸಮಗ್ರ ತನಿಖೆಗೆ ಅಧ್ಯಕ್ಷ ಷಿ ಜಿನ್​ಪಿಂಗ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆ ಬೆನ್ನಲ್ಲೇ ಅತ್ಯಂತ ವಿಷಕಾರಿ ಮತ್ತು ವಾಸನೆ ರಹಿತ ಅನಿಲವಾದ ಕಾರ್ಬನ್​ ಮಾನಾಕ್ಸೈಡ್​​ ಮಟ್ಟವು ಗಣಿಯಲ್ಲಿ ಮಿತಿ ಮೀರಿತ್ತು. ಗಣಿಯಲ್ಲಿ ಸಿಲುಕಿರುವವವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವಘಡದಲ್ಲಿ ಸಿಕ್ಕಿ ಹಾಕಿಕೊಂಡಿರುವವರ ರಕ್ಷಣಗಾಗಿ 345 ಸಿಬ್ಬಂದಿಯನ್ನು ನೇಮಕ ಮಾಡಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ಮಾಹಿತಿಯನ್ನು ಹಂಚಿಕೊಂಡಿದೆ.
2000 ದಶಕದಲ್ಲಿ ಶಾಂಕ್ಸಿ ಪ್ರಾಂತ್ಯದಲ್ಲಿ ಚಿನ್ನದ ಗಣಿಗಾರಿಕೆ ಉದ್ಯಮ ಆರಂಭವಾಗಿತ್ತು. ಅಂದಿನಿಂದಲೂ ಇಲ್ಲಿ ಅವಘಡ ಸಂಭವಿಸುವುದು ಸಾಮಾನ್ಯವಾಗಿದೆ. ಆದರೆ, ಇವುಗಳನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ಜಾರಿ ಮಾಡಿತ್ತು. ಇಷ್ಟಾಗಿಯೂ ಸ್ಫೋಟ ಸಂಭವಿಸಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net