Donald Trump: ಚೀನಾ ದೇಶವು ಅಮೆರಿಕದ ಚುನಾವಣಾ ಡೇಟಾವನ್ನು ಅಕ್ರಮವಾಗಿ ಪಡೆದುಕೊಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ. 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ (ಜೋ ಬೈಡನ್ ವಿರುದ್ಧ ತಮಗಾದ ಸೋಲು) ವ್ಯವಸ್ಥೆಯಲ್ಲಿದ್ದ ಆಘಾತಕಾರಿ ಭದ್ರತಾ ಲೋಪಗಳ ಕುರಿತ ಗುಪ್ತಚರ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಘೋಷಿಸಿದ ಟ್ರಂಪ್, 2020 ರ ಚುನಾವಣೆ ಕಳುವಾಗಿತ್ತು ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ.