ಮೀಟರ್​ ಬೇಕು ಮೀಟರ್... ​ಹೆಬ್ಬಾವಿನ ಬೆನ್ನೇರಿ ಜಾರುಬಂಡಿ ಆಡಿದ ಮಕ್ಕಳು, ವೈರಲ್​ ವಿಡಿಯೋ ನೋಡಿ ನೆಟ್ಟಿಗರು ದಂಗು! Python

Python
ಮೀಟರ್​ ಬೇಕು ಮೀಟರ್... ​ಹೆಬ್ಬಾವಿನ ಬೆನ್ನೇರಿ ಜಾರುಬಂಡಿ ಆಡಿದ ಮಕ್ಕಳು, ವೈರಲ್​ ವಿಡಿಯೋ ನೋಡಿ ನೆಟ್ಟಿಗರು ದಂಗು!
Published on: 

ಜಕಾರ್ತ : ಶಾಲೆಯ ರಜಾ ದಿನಗಳಲ್ಲಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಮೈದಾನದಲ್ಲಿ ಅಥವಾ ಮನೆಯಂಗಳದಲ್ಲಿ ವಿವಿಧ ಆಟಗಳನ್ನು ಆಡುವುದು ನಮ್ಮ ಕಣ್ಣಿಗೆ ಕಾಣುವ ಸಾಮಾನ್ಯ ದೃಶ್ಯ. ಆದರೆ, ನೀವೇನಾದರೂ ವೈರಲ್​ ಆಗಿರುವ ಈ ವಿಡಿಯೋ ನೋಡಿದ್ರೆ ನಮ್ಮ ಜೀವನದಲ್ಲೇ ಇಂಥಾ ದೃಶ್ಯವನ್ನು ನೋಡೇ ಇಲ್ಲ ಅಂತಾ ಹೇಳಿದರೆ ಅಚ್ಚರಿ ಏನಿಲ್ಲ. ವಿಶ್ವದಲ್ಲೇ ಅತ್ಯಂತ ದೊಡ್ಡ ಮತ್ತು ಅಪಾಯಕಾರಿ ಹಾವುಗಳಲ್ಲಿ ಒಂದಾದ ಬರ್ಮನ್ ಹೆಬ್ಬಾವಿನ ( Python ) ಬೆನ್ನನ್ನೇ ಜಾರಬಂಡಿಯಂತೆ (Slide) ಬಳಸಿಕೊಂಡು ಕೆಲ ಮಕ್ಕಳು ಅಪಾಯಕಾರಿ ಆಟವಾಡುತ್ತಿರುವ ಆಘಾತಕಾರಿ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ಆಘಾತಕಾರಿ ವಿಡಿಯೋವನ್ನು 'Nexta' ಹೆಸರಿನ ಎಕ್ಸ್ (X) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೋಡು ನೋಡತ್ತಿದ್ದಂತೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಲ್ಲಿನ ದೃಶ್ಯಗಳನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ವೈರಲ್ ಆಗಿರುವ ಆ ದೃಶ್ಯಗಳಲ್ಲಿ, ಮೂವರು ಚಿಕ್ಕ ಮಕ್ಕಳು ದೈತ್ಯಾಕಾರದ ಹಾವಿನ ಶರೀರದ ಮೇಲ್ಭಾಗದಲ್ಲಿ ಕುಳಿತು, ಅದರ ಬೆನ್ನಿನ ಮೇಲೆ ಕೆಳಗೆ ಜಾರುತ್ತಾ ಆಟವಾಡುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

Also Read
ಏಲಿಯನ್​ ಬಂತು.... ಆಗಸದಲ್ಲಿ ಹಾರಾಡಿದ ಜೆಲ್ಲಿ ಫಿಶ್​ ರೀತಿಯ ವಿಚಿತ್ರ ವಸ್ತುವನ್ನು ಕಂಡು ದಂಗಾದ ಅಲಸ್ಕಾ ಮಂದಿ..! Alien
Python

ಅತಿ ದೊಡ್ಡ ಗಾತ್ರದ ಹೆಬ್ಬಾವು ಮಕ್ಕಳೊಂದಿಗೆ ಯಾವುದೇ ಸಹನೆಯಿಂದಲೇ ವರ್ತಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದ್ದರೆ, ಹತ್ತಿರದಲ್ಲೇ ಕೆಲ ವಯಸ್ಕರು ನಿಂತು ಇದನ್ನು ನೋಡುತ್ತಿರುವುದು ಮತ್ತಷ್ಟು ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ. "ಮಕ್ಕಳ ಪ್ರಾಣದೊಂದಿಗೆ ಆಟವಾಡಲು ಇವರಿಗೆ ಹೇಗೆ ಮನಸ್ಸು ಬಂತು?" ಮತ್ತು "ಇಂತಹ ಅಪಾಯಕಾರಿ ಪ್ರಾಣಿಗಳ ಬಳಿಗೆ ಮಕ್ಕಳನ್ನು ಬಿಡಲು ಯಾರು ಅನುಮತಿ ನೀಡಿದರು?" ಎಂದು ಅನೇಕರು ತೀವ್ರವಾಗಿ ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ಇಂಡೋನೇಷಿಯಾ ದೇಶದಲ್ಲಿ ಇಂತಹ ದೃಶ್ಯಗಳು ಸಾಮಾನ್ಯವೆಂದೂ, ಅಲ್ಲಿ ಕೆಲವರು ಹಾವನ್ನು ಸಾಕುಪ್ರಾಣಿಯಂತೆ ಸಾಕುತ್ತಾರೆ ಎಂದೂ ಕಾಮೆಂಟ್ ಮಾಡಿದ್ದಾರೆ. ಇದರ ಜತೆಗೆ, ಈ ವಿಡಿಯೋ ನೈಜವಾದುದಲ್ಲ, ಇದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋ ಇರಬಹುದು ಎಂಬ ಶಂಕೆಯನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.

Also Read
ರಾಮಾಯಣ ಚಿತ್ರದಲ್ಲಿ ರಾಮನ ಮೌಲ್ಯಗಳಿಗಿಲ್ಲ ಬೆಲೆ, ರಾವಣನೇ ಹೀರೋ: ಟೀಕಾ ಪ್ರಹಾರ ನಡೆಸಿದ ಖ್ಯಾತ ನಟ..Ramayana
Python

ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ದೊಡ್ಡ ಹಾವಿನೊಂದಿಗೆ ಮಕ್ಕಳು ಈ ರೀತಿ ಆಟವಾಡುತ್ತಿರುವುದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ವನ್ಯಜೀವಿಗಳ ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾವಿನ ಸ್ವಭಾವವು ಯಾವಾಗ ಬೇಕಾದರೂ ಬದಲಾಗಬಹುದು ಮತ್ತು ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ದುರಂತ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ, ಈ ವಿಡಿಯೋ ಎಐ ಸೃಷ್ಟಿಯೋ ಅಥವಾ ನಿಜವಾದ ಘಟನೆಯೋ ಎಂಬ ಚರ್ಚೆಗಳ ನಡುವೆಯೂ, ಮಕ್ಕಳ ಈ ಅಪಾಯಕಾರಿ ಸಾಹಸದ ದೃಶ್ಯಗಳು ಮಾತ್ರ ಎಲ್ಲರ ಬೆನ್ನುಮೂಳೆಯಲ್ಲಿ ಭೀತಿ ಹುಟ್ಟಿಸುವಂತಿವೆ, (ಏಜೆನ್ಸೀಸ್​).