ಅಮೆರಿಕ : ಬಲಪಂಥೀಯ ರಾಜಕೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಅವರನ್ನು ಕೊಂದ ಆರೋಪ ಹೊತ್ತಿರುವ ವ್ಯಕ್ತಿ, ಮೊದಲ ಬಾರಿಗೆ ಅಮೆರಿಕದ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿದ್ದಾರೆ. ಸೆಪ್ಟೆಂಬರ್ 10 ರಂದು ನಡೆದ ಹತ್ಯೆಗೆ ಸಂಬಂಧಿಸಿದಂತೆ ಇಪ್ಪತ್ತೆರಡು ವರ್ಷದ ಟೈಲರ್ ರಾಬಿನ್ಸನ್‌ನನ್ನು ಉತಾಹ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಗಂಭೀರ ಕೊಲೆ ಆರೋಪ ಹೊರಿಸಲ್ಪಟ್ಟ ಮತ್ತು ಅಪರಾಧ ಸಾಬೀತಾದರೆ ಮರಣದಂಡನೆಯನ್ನು ಎದುರಿಸಲಿರುವ ರಾಬಿನ್ಸನ್ ನ್ಯಾಯಾಲಯದಲ್ಲಿ ಶಾಂತವಾಗಿ ಹಾಜರಾದರು.