ಟ್ರಂಪ್ಗೆ ಬ್ರಿಟನ್ ಪ್ರಧಾನಿ ಶೆಡ್ಡು; ಇರಾನ್ ವಿರುದ್ಧದ ಯುದ್ಧಕ್ಕೆ ಸೇರಲ್ಲ; ರಾಷ್ಟ್ರೀಯ ಹಿತಾಸಕ್ತಿಗೆ ಕೆಲಸ ಮಾಡ್ತೇನೆ: ಕೀರ್ ಸ್ಟಾರ್ಮರ್ | Keir Starmer
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್
Published on:
Copied
Follow Us
ಲಂಡನ್: ಇರಾನ್ ವಿರುದ್ಧದ ಯುದ್ಧಕ್ಕೆ ಬೆಂಬಲ ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆಗೆ ಬುಧವಾರ(ಏ. 01) ಶೆಡ್ಡು ಹೊಡೆದಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಇರಾನ್ ವಿರುದ್ಧದ ಯುದ್ಧದ ಭಾಗವಹಿಸಲು ಬ್ರಿಟನ್‌ಗೆ ಯಾವುದೇ ಅವಕಾಶವಿಲ್ಲ ಎಂದು ಯುದ್ದಕ್ಕೆ ಬೆಂಬಲವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.
ಬುಧವಾರ ದೇಶವನ್ನುದ್ದೇಶಿಸಿ ಮಾತನಾಡಿರುವ ಅವರು, ಇರಾನ್ ನಿರ್ಬಂಧಿಸಿರುವ ಪ್ರಮುಖ ಹಡಗು ಸಂಚಾರ ದಟ್ಟಣೆಯಾದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಮಾರ್ಗಗಳ ಕುರಿತು ಜಾಗತಿಕ ಶೃಂಗಸಭೆಯನ್ನು ಆಯೋಜಿಸುವುದಾಗಿ ಇದೇ ವೇಳೆ ತಿಳಿಸಿದ್ದಾರೆ.
ನ್ಯಾಟೋದಿಂದ ಅಮೆರಿಕ ಹೊರ ಹೋಗುವ ಬಗ್ಗೆ ಟ್ರಂಪ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಮತ್ತು ಇತರರ ಮೇಲೆ ಎಷ್ಟೇ ಒತ್ತಡ ಇದ್ದರೂ, ಎಷ್ಟೇ ಗದ್ದಲ ಎದ್ದರೂ, ನಾನು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಬ್ರಿಟಿಷ್ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇನೆ ಎಂದಿದ್ದಾರೆ.
ಒಂದು ತಿಂಗಳ ಕಾಲ ನಡೆಯುವ ಯುದ್ಧವು ಯುಕೆಯ ಭವಿಷ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಇದು ಇಂಧನ ಹರಿವಿಗೆ ಅಡ್ಡಿಯಾಗುವುದರಿಂದ ಜೀವನ ವೆಚ್ಚದಲ್ಲಿ ಏರಿಕೆಯನ್ನು ಸೂಚಿಸುತ್ತದೆ. ಪ್ರಮುಖ ತೈಲ ಸಾಗಣೆ ಮಾರ್ಗಕ್ಕೆ ಕಡಲ ಭದ್ರತೆಯನ್ನು ಪುನಃಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯ ಹೇಳಿಕೆಗೆ 35 ದೇಶಗಳು ಸಹಿ ಹಾಕಿವೆ. ಎಂದು ಸ್ಟಾರ್ಮರ್ ಹೇಳಿದರು.
ಯುದ್ಧದಲ್ಲಿ ಅಮೆರಿಕವನ್ನು ಬೆಂಬಲಿಸಲು ನ್ಯಾಟೋ ನಿರಾಕರಿಸಿದ್ದಕ್ಕಾಗಿ ನ್ಯಾಟೋದಿಂದ ಹೊರಬರುವ ಬಗ್ಗೆ ಯೋಚಿಸುತ್ತಿರುವುದಾಗಿ ಡೊನಾಲ್ಡ್ ಟ್ರಂಪ್ ಸೂಚಿಸಿದ ಕೆಲವೇ ಗಂಟೆಗಳ ನಂತರ ಸ್ಟಾರ್ಮರ್ ಈ ಹೇಳಿಕೆ ನೀಡಿದ್ದಾರೆ. ಎರಡು ನ್ಯಾಟೋ ಮಿತ್ರರಾಷ್ಟ್ರಗಳಾದ ಇಟಲಿ ಮತ್ತು ಸ್ಪೇನ್ ಸಹ ಸಂಘರ್ಷದಲ್ಲಿ ಭಾಗಿಯಾಗಿರುವ ಯುಎಸ್ ಜೆಟ್‌ಗಳಿಗೆ ಮಿಲಿಟರಿ ನೆಲೆಗಳನ್ನು ಬಳಸಲು ನಿರಾಕರಿಸಿವೆ (ಏಜೆನ್ಸೀಸ್).