ಸಾಹಸ ಮಾಡಲು ಹೋಗಿ ಹೆಣವಾದ ಮಹಿಳೆಯರು! ಹಗ್ಗ ಕಟ್ಟದೆ ಒಬ್ಬಳ ಸಾವು; ಸ್ಪ್ರೇ ಹಚ್ಚಿಕೊಳ್ಳಲು ಹೋಗಿ ಇನ್ನೊಬ್ಬಳ ದುರ್ಮರಣ! Brazilian Woman Dies

ಬ್ರೆಜಿಲ್‌ನಲ್ಲಿ ನಡೆದ ಬ್ಯಾಕ್-ಟು-ಬ್ಯಾಕ್ ದುರಂತಗಳು!
ಬ್ರೆಜಿಲ್‌ನಲ್ಲಿ ನಡೆದ ಬ್ಯಾಕ್-ಟು-ಬ್ಯಾಕ್ ದುರಂತಗಳು!
Published on

ಪ್ರಮುಖ ಮುಖ್ಯಾಂಶಗಳು

  • ಬ್ರೆಜಿಲ್‌ನಲ್ಲಿ ನಡೆದ ಬ್ಯಾಕ್-ಟು-ಬ್ಯಾಕ್ ದುರಂತಗಳು!
  • ಬಂಜಿ ಜಂಪಿಂಗ್ ವೇಳೆ ಸೊಂಟಕ್ಕೆ ಹಗ್ಗ ಕಟ್ಟದೆ ಯುವತಿಯನ್ನು 130 ಅಡಿ ಕೆಳಗೆ ಬಿದ್ದ ಯುವತಿ
  • ಟ್ರೆಕ್ಕಿಂಗ್ ವೇಳೆ ಬಗ್ ಸ್ಪ್ರೇ ಹಚ್ಚಿಕೊಳ್ಳಲು ಹೋಗಿ 100 ಅಡಿ ಪ್ರಪಾತಕ್ಕೆ ಬಿದ್ದ ಮತ್ತೊಬ್ಬ ಮಹಿಳೆ
ಬ್ರೆಜಿಲ್​: ಕೆಲ ದಿನಗಳ ಹಿಂದೆ ಸೊಂಟಕ್ಕೆ ಹಗ್ಗ ಕಟ್ಟದೆ ಸೇತುವೆಯಿಂದ ಕೆಳಗೆ ತಳ್ಳಿ ಯುವತಿ ಸಾವನ್ನಪ್ಪಿದ ಬೆನ್ನಲ್ಲೇ, ಮತ್ತೊಬ್ಬ ಮಹಿಳೆ ಕೀಟ ನಿವಾರಕ ಸ್ಪ್ರೇ ಹಚ್ಚಿಕೊಳ್ಳಲು ಹೋಗಿ 100 ಅಡಿ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಬ್ರೆಜಿಲ್ (Brazilian Woman Dies)​ ನಲ್ಲಿ ವರದಿಯಾಗಿದೆ.

ಕೀಟ ನಿವಾರಕ ಸ್ಪ್ರೇ ಹಚ್ಚಲು ಹೋಗಿ ನೂರಡಿ ಪ್ರಪಾತಕ್ಕೆ ಬಿದ್ದಳು!

ರಿಯೊ ಡಿ ಜನೈರೊ ಬಳಿ ನಡೆದಿರು ಈ ಘಟನೆಯಲ್ಲಿ 59 ವರ್ಷದ ರೋಸ್ಮರಿ ಸುಜಾರ್ಟ್ ಗಾರ್ಸಿಯಾ (Rosemary Suzart Garcia) ಎಂಬ ಮಹಿಳೆ ತನ್ನ ಸ್ನೇಹಿತರ ಗುಂಪಿನೊಂದಿಗೆ ಟ್ರೆಕ್ಕಿಂಗ್ ಹೋಗಿದ್ದರು. ಕಾಡಿನ ದಾರಿಯಲ್ಲಿ ಹೋಗುವಾಗ ಸೊಳ್ಳೆ ಅಥವಾ ಕೀಟಗಳು ಕಚ್ಚಬಾರದು ಎಂದು ಬಗ್ ಸ್ಪ್ರೇ ಹಚ್ಚಿಕೊಳ್ಳಲು ನಿರ್ಧರಿಸಿದ್ದಾಳೆ.
ಅದನ್ನು ಸ್ಪ್ರೇ ಮಾಡಿಕೊಳ್ಳಲು ಒಂದು ಕಾಲನ್ನು ಮೇಲೆತ್ತಿದಾಗ, ದುರದೃಷ್ಟವಶಾತ್ ಅವರ ಬ್ಯಾಲೆನ್ಸ್ ತಪ್ಪಿದ್ದು, ನೇರವಾಗಿ ಪ್ರಪಾತದ ಅಂಚಿಗೆ ಜಾರಿದ್ದಾರೆ. ಇದನ್ನು ನೋಡಿದ ಗೈಡ್ ಓಡಿ ಬಂದು ಆಕೆಯ ಕೈ ಹಿಡಿಯಲು ಪ್ರಯತ್ನಿಸಿದ್ದಾನೆ. ಆದರೆ ವೇಗವಾಗಿ ಜಾರುತ್ತಿದ್ದ ಮಹಿಳೆಯನ್ನು ಹಿಡಿಯಲು ಹೋದ ಆತನೇ ಪ್ರಪಾತಕ್ಕೆ ಬೀಳುವಂತಾಗಿದ್ದ.
ಕೊನೆಗೆ ಆತ ಅಲ್ಲಿನ ಮರದ ಬೇರನ್ನು ಹಿಡಿದು ಬಚಾವಾಗಿದ್ದಾನೆ. ಆದರೆ ಹೆಲ್ಮೆಟ್, ಹ್ಯಾಂಡ್​ ಗ್ಲೌಸ್​​ ಸೇರಿದಂತೆ ಎಲ್ಲಾ ಸುರಕ್ಷತಾ ಸಾಧನಗಳನ್ನು ಧರಿಸಿದ್ದ ರೋಸ್ಮರಿ, ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ನೂರಡಿ ಆಳಕ್ಕೆ ಬಿದ್ದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆಕೆಯ ಶವವನ್ನು ಹೊರತೆಗೆದಿದ್ದಾರೆ.

ಹಗ್ಗ ಕಟ್ಟದೆಯೇ 130 ಅಡಿ ಸೇತುವೆಯಿಂದ ಕೆಳಗೆ ತಳ್ಳಿದ್ರು!

ಈ ಘಟನೆಗೂ ಮುನ್ನ ಸಾವೊ ಪಾಲೊದಲ್ಲಿರುವ ಸ್ಕೆಲಿಟನ್ ಸೇತುವೆಯಲ್ಲಿ ಮತ್ತೊಂದು ಭೀಕರ ದುರಂತ ನಡೆದಿತ್ತು. ಬ್ರೆಜಿಲ್​ನಲ್ಲಿ ಯುವತಿಯೊಬ್ಬಳ ಸೊಂಟಕ್ಕೆ ಹಗ್ಗ ಕಟ್ಟುವುದನ್ನು ಮರೆತ ಬಂಜಿ ಜಂಪಿಂಗ್​ ತಂಡ ಆಕೆಯನ್ನು ಸುಮಾರು 130 ಅಡಿ ಎತ್ತರಿಂದ ಕೆಳಗೆ ಬಿಸಾಕಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಸಾವನ್ನಪ್ಪಿದ ಯುವತಿಯನ್ನು 21 ವರ್ಷದ ಮಾರಿಯಾ ಎಡ್ವರ್ಡಾ ರೋಡ್ರಿಗಸ್ ಡಿ ಫ್ರೀಟಾಸ್ (Maria Eduarda Rodrigues de Freitas) ಎಂದು ಗುರುತಿಸಲಾಗಿದೆ.
ಇಕೆಯನ್ನು ಬಂಜಿ ಜಂಪಿಂಗ್​ಗೆ ಸಿದ್ದಪಡಿಸಿದ ತಂಡ ಸುರಕ್ಷಾ ಹಗ್ಗವನ್ನು ಆಕೆಯ ಸೊಂಟಕ್ಕೆ ಸಿಕ್ಕಿಸುವುದನ್ನು ಮರೆತಿದ್ದು, ಇಬ್ಬರು ಯುವಕರು, ಯುವತಿಯನ್ನು ಎತ್ತಿ ಬಿಸಾಕಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗಿದೆ. ಇದೇ ವಿಡಿಯೋನಲ್ಲಿ ಅಲ್ಲಿದ್ದ ಇತರ ಯುವ ಸಮುದಾಯ, ರೋಪ್​, ರೋಪ್​ (ಹಗ್ಗವನ್ನು ಸಿಕ್ಕಿಸಿಲ್ಲ) ಎಂದು ಚಿರುತ್ತಿರುವುದನ್ನು ಕೇಳಿಸಿಕೊಳ್ಳಬಹುದಾಗಿದೆ.

ಪೊಲೀಸರ ಆ್ಯಕ್ಷನ್, ಆರು ಜನರ ಬಂಧನ

ಈ ಹಗ್ಗ-ಜಂಪಿಂಗ್ ಘಟನೆಗೆ ಸಂಬಂಧಿಸಿದಂತೆ ಬ್ರೆಜಿಲ್ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಇವೆಂಟ್ ಆಯೋಜಿಸಿದ್ದ ಸಂಸ್ಥೆಯ ಆರು ಜನರನ್ನು ಬಂಧಿಸಲಾಗಿದ್ದು, ಮೂವರು ಪ್ರಮುಖ ಸಂಘಟಕರ ಮೇಲೆ ದುರುದ್ದೇಶಪೂರ್ವಕ ನರಹತ್ಯೆ (Culpable Homicide) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net