ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಜಾಗತಿಕ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಯುದ್ಧಗಳಲ್ಲಿ ಒಂದಾಗಿ ಮಾರ್ಪಡುತ್ತಿದೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್(US Military Bases Damage) ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ ಆರಂಭವಾದ ಈ ಮಹಾಯುದ್ಧದಲ್ಲಿ, ಇರಾನ್ ಕೆಂಡದಂತಹ ಪ್ರತ್ಯಾಕ್ರಮಣ ನೀಡಿದೆ. ಈವರೆಗೆ ಅಮೆರಿಕ ತನ್ನ ಮೇಲಾದ ಹಾನಿಯನ್ನು ಗೌಪ್ಯವಾಗಿಟ್ಟಿದ್ದರೂ, ಈಗ ಹೊರಬಿದ್ದಿರುವ ವರದಿಗಳು ಶ್ವೇತಭವನವನ್ನು ಬೆಚ್ಚಿಬೀಳಿಸಿವೆ.