ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ(Trump - Bill Gates in Epstein files) ಸಂಬಂಧಿಸಿದ 35 ಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಸಾರ್ವಜನಿಕಗೊಳಿಸಿದೆ. ಯುಎಸ್ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಈ ವರದಿಗಳ ಪ್ರಕಾರ, 2013 ರಲ್ಲಿ ಎಪ್ಸ್ಟೀನ್ ಸ್ವತಃ ಬರೆದ ಇಮೇಲ್‌ಗಳಲ್ಲಿ, ಬಿಲ್ ಗೇಟ್ಸ್ ಅವರು ರಷ್ಯಾದ ಯುವತಿಯರೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು ಮತ್ತು ಈ ಕಾರಣದಿಂದಾಗಿ ಅವರಿಗೆ ಲೈಂಗಿಕವಾಗಿ ಹರಡುವ ರೋಗ (STD) ತಗುಲಿತ್ತು. ಈ ರೋಗದ ವಿಷಯವನ್ನು ತಮ್ಮ ಅಂದಿನ ಪತ್ನಿ ಮೆಲಿಂಡಾ ಅವರಿಂದ ಮುಚ್ಚಿಡಲು ಬಿಲ್ ಗೇಟ್ಸ್ ಪ್ರಯತ್ನಿಸಿದ್ದರು ಎಂಬ ಸಂಚಲನಕಾರಿ ವಿಷಯ ವರದಿಯಾಗಿದೆ.