ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ, ಅಮೆರಿಕ ಸರ್ಕಾರವು ತನ್ನ ಆಪ್ತ ಮಿತ್ರ ರಾಷ್ಟ್ರಗಳಾದ ಇಸ್ರೇಲ್, ಕತಾರ್, ಕುವೈತ್ ಮತ್ತು ಯುಎಇಗೆ ಬರೋಬ್ಬರಿ 8.6 ಬಿಲಿಯನ್ ಡಾಲರ್ (ಸುಮಾರು 72,000 ಕೋಟಿ ರೂಪಾಯಿ) ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು(US Arms Sale) ಮಾರಾಟ ಮಾಡಲು ಹಸಿರು ನಿಶಾನೆ ತೋರಿಸಿದೆ.