ನೆತನ್ಯಾಹು ಸಾವು ನಿಶ್ಚಿತ: ಇಸ್ರೇಲ್​ ಪ್ರಧಾನಿ ಸಾವು ಖಚಿತ; ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಶಪಥ! Benjamin Netanyahu

ಇಸ್ರೇಲ್​ ಪ್ರಧಾನಿಯನ್ನು ನಾವು ಕೊಲ್ಲುತ್ತೇವೆ: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್
ಇಸ್ರೇಲ್​ ಪ್ರಧಾನಿಯನ್ನು ನಾವು ಕೊಲ್ಲುತ್ತೇವೆ: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ
  • ಇಸ್ರೇಲ್​ ಪ್ರಧಾನಿಯನ್ನು ನಾವು ಕೊಲ್ಲುತ್ತೇವೆ: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್
  • ಬೆಂಜಾಮಿನ ನೆತನ್ಯಾಹು ಬಲಿಯನ್ನು ನಾವು ಪಡೆಯುತ್ತೇವೆ
ಇರಾನ್​: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಇನ್ನಷ್ಟು ಕತ್ತಲನ್ನು ಆವರಿಸುತ್ತಿದ್ದು, ಇಸ್ರೇಲ್​ ಪ್ರಧಾನಿ ಬೆಂಜಾಮಿನ್​ ನೆತನ್ಯಾಹು (Benjamin Netanyahu) ನನ್ನು ಯಾವುದೇ ಕಾರಣಕ್ಕೂ ಜೀವಂತ ಉಳಿಸುವುದಿಲ್ಲ ಎಂದು ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಶಪಥ ಮಾಡಿದೆ.
ಕೆಲದಿನಳ ಹಿಂದೆ ಇಸ್ರೇಲ್ ಪ್ರಧಾನಿ, ಇರಾನಿನ ದಾಳಿಗೆ ಸಿಲುಕಿ ಮೃತ ಪಟ್ಟಿದ್ದಾರೆ ಎಂದು ಟೆಹ್ರಾನ್​ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವದಂತಿಗಳನ್ನು ತಳ್ಳಿಹಾಕಿದ್ದ ಇಸ್ರೇಲ್​ ತನ್ನ ಪ್ರಧಾನ ಮಂತ್ರಿಯ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಈ ವದಂತಿಗೆ ತಿಲಾಂಜಲಿ ಇಟ್ಟಿತ್ತು.
ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್, ಅವನೊಬ್ಬ ರಕ್ತ ಪಿಪಾಸು, ಸಾವಿರಾರು ಮಕ್ಕಳ ಬಲಿ ತೆಗೆದುಕೊಂಡ ಅವನನ್ನು ಜೀವ ಸಮೇತ ನಾವು ಉಳಿಸುವುದಿಲ್ಲ. ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿ ಇಸ್ರೇಲ್​ ಪ್ರಧಾನ ಮಂತ್ರಿಯ ಬಲಿ ತೆಗೆದುಕೊಳ್ಳುತ್ತೇವೆ ಎಂದು IRGC ಹೇಳಿಕೆ ನೀಡಿದೆ.

ಎಐ ವಿಡಿಯೋ ಹರಿಬಿಟ್ಟ ನೆತನ್ಯಾಹು?

ಇಸ್ರೇಲ್​ ಪ್ರಧಾನಿಯನ್ನು ನಾವು ಕೊಂದಿದ್ದೇವೆ ಎಂದು ಇರಾನ್​ ಹೇಳಿದಾಗ, ಬೆಂಜಮಿನ್​ ನೆತನ್ಯಾಹು ತಮ್ಮ ಎಕ್ಸ್(ಟ್ವಿಟರ್​) ಖಾತೆಯಲ್ಲಿ ತಾವು ಜೀವಂತವಾಗಿದ್ದೇವೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ, ವಿಡಿಯೋವೊಂದನ್ನು ಹಂಚಿಕೊಂಡರು.
ಆದರೆ ಈ ವಿಡಿಯೋನಲ್ಲಿ ನೆತನ್ಯಾಹು ಅವರ ಕೈಯಲ್ಲಿ ಆರು ಬೆರಳು ಗಳಿರುವುದನ್ನು ನೋಡಿದ ಜನ ಈ ವಿಡಿಯೋ ಕೃತಕ ಬುದ್ಧಿಮತ್ತೆ ಬಳಸಿ ತಯಾರಸಿದ್ದು ಎಂದು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತು ಎಕ್ಸ್(ಟ್ವಿಟರ್​)ನ ಚಾಟ್​ಬಾಟ್​​ ಗ್ರೋಕ್​ ಎಐ ಗೆ ಕೇಳಿದರೆ, ಈ ವಿಡಿಯೋ ಕೃತಕವಾಗಿ ನಿರ್ಮಿಸಿದ್ದಲ್ಲ, ಇದೊಂದು ಆಪ್ಟಿಕಲ್ ಇಲ್ಯೂಷನ್ ಎಂದು ಹೇಳಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net