ಕಳೆದ ವರ್ಷದಲ್ಲಿ ಜುಲೈ ತಿಂಗಳಲ್ಲಿ ನಡೆದ ದಂಗೆಗೆ ಸಂಬಂಧಿಸಿದ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪಗಳ ಕುರಿತು ನ್ಯಾಯಮಂಡಳಿ ತನ್ನ ತೀರ್ಪು ಇಂದೇ(ನ.17) ನೀಡಲಿದೆ. ಭಾರತದಲ್ಲಿಯೇ ಉಳಿದಿರುವ ಹಸೀನಾಗೆ ಮರಣದಂಡನೆ ವಿಧಿಸಬೇಕೆಂದು ಪ್ರಾಸಿಕ್ಯೂಟರ್‌ಗಳು ಕೋರಿದ್ದಾರೆ. ಅವರು ಮತ್ತು ಅವರ ಸಹ-ಆರೋಪಿ, ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರನ್ನು ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲಾಯಿತು.