ಬಲೂಚ್ ರಾಜಕುಮಾರ, ಮೂವರು ಅಂಗರಕ್ಷಕರು ಕಿಡ್ನಾಪ್; ಮುಂದುವರೆದ ಶೋಧ ಕಾರ್ಯ..Baloch Prince

ಬಲೂಚ್ ರಾಜಕುಮಾರ, ಮೂವರು ಅಂಗರಕ್ಷಕರು ಕಿಡ್ನಾಪ್;  ಮುಂದುವರೆದ ಶೋಧ ಕಾರ್ಯ..Baloch Prince
Published on: 
  • ಪ್ರಿನ್ಸ್ ಮುಹಮ್ಮದ್ ಖಾನ್ ಅಹ್ಮದ್‌ಜೈ ಅಪಹರಣ.

  • ಅಂಗರಕ್ಷರೊಂದಿಗೆ ಕಿಡ್ನಾಪ್ ಮಾಡಿದ ಮೂವರು ಬಂದೂಕುಧಾರಿಗಳು.

  • ರಾಜಕುಮಾರನ ಪತ್ತೆಗಾಗಿ ಮುಂದುವರೆದ ಪೊಲೀಸರ ಶೋಧ ಕಾರ್ಯ.

ಕ್ವೆಟ್ವಾ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಕಲಾತ್‌ನ ಪ್ರಸ್ತುತ ಖಾನ್ ಸುಲೆಮಾನ್ ಖಾನ್ ದಾವೂದ್ ಅವರ ಪುತ್ರ ಪ್ರಿನ್ಸ್ ಮುಹಮ್ಮದ್ ಖಾನ್ ಅಹ್ಮದ್‌ಜೈ ಅವರನ್ನು ಮೂವರು ಬಂಧೂಕುಧಾರಿಗಳು ಅಂಗರಕ್ಷಕರೊಂದಿಗೆ ಅಪಹರಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಸದ್ಯ ಖುಜ್ದಾರ್​ ಪ್ರದೇಶದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ, ಐವರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ಮಾಹಿತಿ ಸಿಕ್ಕಿದ್ದು, ರಾಜಕುಮಾರನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ ಎನ್ನಲಾಗಿದೆ.

Also Read
ಮುಗಿಯದ ಮಧ್ಯಪ್ರಾಚ್ಯ ಮಹಾಯುದ್ಧ: 900 ವರ್ಷ ಹಳೆಯ ಬ್ಯೂಫೋರ್ಟ್ ಕೋಟೆ ಇಸ್ರೇಲ್​ ವಶ; ಅಡಕತ್ತರಿಯಲ್ಲಿ ಸಿಲುಕಿದ ಲೆಬನಾನ್​! Israel Captures Beaufort Castle
ಬಲೂಚ್ ರಾಜಕುಮಾರ, ಮೂವರು ಅಂಗರಕ್ಷಕರು ಕಿಡ್ನಾಪ್;  ಮುಂದುವರೆದ ಶೋಧ ಕಾರ್ಯ..Baloch Prince

ಪೊಲೀಸರು ಏನಂದ್ರು?

ಕ್ವೆಟ್ವಾದ ಪೊಲೀಸರ ತನಿಖೆ ಪ್ರಕಾರ, ಸೋಮವಾರ ರಾತ್ರಿ ಖುಜ್ಡರ್​ನಿಂದ ಕಲಾತ್​ಗೆ ಪ್ರಯಾಣಿಸುತ್ತಿದ್ದ ವೇಳೆ ಪ್ರಿನ್ಸ್ ಅಹ್ಮದ್‌ಜೈ ಅವರ ವಾಹನವನ್ನು ಸಶಸ್ತ್ರ ವ್ಯಕ್ತಿಗಳು ಹೆದ್ದಾರಿ ಮಧ್ಯೆ ತಡೆ ಹಿಡಿದಿದ್ದಾರೆ. ಪ್ರಿನ್ಸ್ ಅಹ್ಮದ್‌ಜೈ ಹಾಗೂ ಅವರೊಂದಿಗೆ ಪ್ರಯಾಣಿಸುತ್ತಿದ್ದ ಬಂದೂಕುಧಾರಿ ಸಿಬ್ಬಂದಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಲಾತ್‌ನ ಪ್ರಸ್ತುತ ಖಾನ್ ಸುಲೆಮಾನ್ ಖಾನ್ ದಾವೂದ್ ಅವರ ಪುತ್ರ ಪ್ರಿನ್ಸ್ ಮುಹಮ್ಮದ್ ಖಾನ್ ಅಹ್ಮದ್‌ಜೈ ಅವರನ್ನು ಅವರ ಮೂವರು ಬಂದೂಕುಧಾರಿ ಅಂಗರಕ್ಷಕರನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನುವ ನಿಖರ ಮಾಹಿತಿ ಇಂದಿಗೂ ಸಿಕ್ಕಿಲ್ಲ. ಘಟನೆ ನಡೆದು ಹಲವು ಗಂಟೆ ಕಳೆದಿದ್ದರೂ ಸಹ ಅಪಹರಣದ ಹೊಣೆಯನ್ನು ಬಂಡುಕೋರರು ಹೊತ್ತಿಲ್ಲ ಎನ್ನಲಾಗಿದೆ.

ಐತಿಹಾಸಿಕ ಹಿನ್ನೆಲೆ

ಪ್ರಸ್ತುತ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಕಲಾತ್ ಕೇಂದ್ರಿತ ಬ್ರಾಹುಯಿ-ನೇತೃತ್ವದ ರಾಜಪ್ರಭುತ್ವದ ಹಿಂದಿನ 'ಖಾನತ್ ಆಫ್ ಕಲಾತ್' (ಐತಿಹಾಸಿಕ ಬಿರುದೇ 'ಕಲಾತ್‌ನ ಖಾನ್'ಎಂದಾಗಿದೆ. ಕಲಾತ್‌ನ ಪ್ರಸ್ತುತ ಖಾನ್ ಆಗಿರುವ ಸುಲೆಮಾನ್ ದಾವೂದ್ ಅವರು ಯುನೈಟೆಡ್ ಕಿಂಗ್‌ಡಮ್ ಮತ್ತು ವೇಲ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಕಲಾತ್​ ಕಾನೆಟ್ ಐತಿಹಾಸಿಕ ಬಿಡುದಾಗಿದೆ. ಬಲೂಚ್​ ಜನರಲ್ಲಿ ಕಲಾತ್​ ರಾಜಮನೆತನದವರ ಬಗ್ಗೆ ಪೂಜ್ಯ ಭಾವನೆ ಇದೆ.

ಬಲೂಚಿಸ್ತಾನದ ಜನರಿಗೆ ರಾಜಕೀಯ ಐಕ್ಯತೆಯನ್ನು ಮೂಡಿಸುವಲ್ಲಿ, ಸಾರ್ವಭೌಮ ಗುರುತನ್ನು ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಸೃಷ್ಟಿಸುವಲ್ಲಿ ಕಲಾತ್‌ನ ಖಾನ್ ಕುಟುಂಬವು ಐತಿಹಾಸಿಕ ಪಾತ್ರವನ್ನು ಹೊಂದಿದ್ದು, ಅಲ್ಲಿ ಅತ್ಯಂತ ಗೌರವಾನ್ವಿತ ಸ್ಥಾನವನ್ನು ಪಡೆದಿದೆ.

ಕಲಾತ್​ನ 35ನೇ ಖಾನ್​ ಆಗಿರುವ ಮೀರ್​ ಸುಲೇಮಾನ್​ ದಾವೂದ್ ಖಾನ್ ಅವರು ಪಾಕಿಸ್ತಾನ ಸರ್ಕಾರದೊಂದಿಗೆ ಭಿನ್ನಭಿಪ್ರಾಯ ಹೊಂದಿದ್ದಾರೆ. ಅಲ್ಲದೆ ಬಲೂಚ್​ ಸ್ವಾತಂತ್ರ್ಯದ ಹೋರಾಟದ ನಿಲುವಿನಿಂದಾಗಿ ಕಳೆದ ಹಲವು ವರ್ಷದಿಂದ ಯುನೈಟೆಡ್​ ಕಿಂಗಡಮ್​ ಮತ್ತು ವೇಲ್ಸ್​ನಲ್ಲಿ ದೇಶ ಭ್ರಷ್ಟರಾಗಿ ವಾಸ ಮಾಡುತ್ತಿದ್ದಾರೆ. ಸದ್ಯ ಈಗ ಅಪಹರಣಕ್ಕೊಳಗಾಗಿರುವುದು ಅವರ ಪುತ್ರ ಪ್ರಿನ್ಸ್​ ಮುಹಮ್ಮದ್​​ ಖಾನ್​ ಅಹ್ಮದ್​ ಜೈ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net