ಮತ್ತೆ ನಿಜವಾಯ್ತು ಬಾಬಾ ವಂಗಾ ಭವಿಷ್ಯವಾಣಿ: ಇಷ್ಟಕ್ಕೆ ಕೊನೆಯಾದ್ರೆ ಸರಿ ಇದೇನಾದ್ರೂ ನಡೆದ್ರೆ ಜಗತ್ತೇ ಸರ್ವನಾಶ! Baba Vanga

ಮತ್ತೆ ನಿಜವಾಯ್ತು ಬಾಬಾ ವಂಗಾ ಭವಿಷ್ಯವಾಣಿ: ಇಷ್ಟಕ್ಕೆ ಕೊನೆಯಾದ್ರೆ ಸರಿ ಇದೇನಾದ್ರೂ ನಡೆದ್ರೆ ಜಗತ್ತೇ ಸರ್ವನಾಶ! Baba Vanga
ಮತ್ತೆ ನಿಜವಾಯ್ತು ಬಾಬಾ ವಂಗಾ ಭವಿಷ್ಯವಾಣಿ: ಇಷ್ಟಕ್ಕೆ ಕೊನೆಯಾದ್ರೆ ಸರಿ ಇದೇನಾದ್ರೂ ನಡೆದ್ರೆ ಜಗತ್ತೇ ಸರ್ವನಾಶ! Baba Vanga
Published on

ಪ್ರಮುಖ ಮುಖ್ಯಾಂಶಗಳು

  • ಇಸ್ರೇಲ್, ಅಮೆರಿಕ ಹಾಗೂ ಇರಾನ್​ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ
  • ಇರಾನ್, ಅಮೆರಿಕ ಮತ್ತು ಇಸ್ರೇಲ್​ ವಿರುದ್ಧ ಬಾಂಬ್​ಗಳ ಸುರಿಮಳೆಗೈಯುತ್ತಿದೆ
  • ಅಮೆರಿಕ ಮತ್ತು ಇಸ್ರೇಲ್​​ ಕೂಡ ಇರಾನ್​ನಲ್ಲಿರುವ ಪ್ರಮುಖ ಸ್ವತ್ತುಗಳನ್ನು ನಾಶ ಮಾಡುತ್ತಿವೆ
  • ಇದೆಲ್ಲದರ ನಡುವೆ ಬಾಂಬಾ ವಂಗಾ ಅವರ ಭವಿಷ್ಯವಾಣಿ ಭಾರಿ ಸದ್ದು ಮಾಡುತ್ತಿದೆ
Baba Vanga : ಇಸ್ರೇಲ್, ಅಮೆರಿಕ ಹಾಗೂ ಇರಾನ್​ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅದರಲ್ಲೂ ತಮ್ಮ ಸುಪ್ರೀಂ ಲೀಡರ್​ ಅಯತೊಲ್ಲಾ ಖಮೇನಿಯನ್ನು ಕೊಂದ ಬಳಿಕ ಗಾಯಗೊಂಡ ಸಿಂಹದಂತೆ ಕೆರಳಿರುವ ಇರಾನ್, ಅಮೆರಿಕ ಮತ್ತು ಇಸ್ರೇಲ್​ ವಿರುದ್ಧ ಬಾಂಬ್​ಗಳ ಸುರಿಮಳೆಗೈಯುತ್ತಿದೆ.​ ಗಲ್ಫ್​ ರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್​ ದಾಳಿಯ ಮೂಲಕ ಭೀಕರ ಸನ್ನಿವೇಶವನ್ನು ಇರಾನ್​ ಸೃಷ್ಟಿಸುತ್ತಿದೆ. ಅತ್ತ ಅಮೆರಿಕ ಮತ್ತು ಇಸ್ರೇಲ್​​ ಕೂಡ ಇರಾನ್​ನಲ್ಲಿರುವ ಪ್ರಮುಖ ಸ್ವತ್ತುಗಳನ್ನು ನಾಶ ಮಾಡುತ್ತಿವೆ. ದಿನದಿಂದ ದಿನಕ್ಕೆ ಯುದ್ಧದ ಕಾವು ಹೆಚ್ಚಾಗುತ್ತಿದ್ದು, ಸಾವಿರಾರು ಮಂದಿ ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸದ್ಯ ಯುದ್ಧ ಮುಂದುವರಿದೆ. ಇದೆಲ್ಲದರ ನಡುವೆ ಬಾಂಬಾ ವಂಗಾ ಅವರ ಭವಿಷ್ಯವಾಣಿ ಭಾರಿ ಸದ್ದು ಮಾಡುತ್ತಿದೆ.

ಯಾರೀ ಬಾಬಾ ವಂಗಾ?

ವರದಿಗಳ ಪ್ರಕಾರ, ಬಾಬಾ ವಂಗಾ ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಅನೇಕ ಭವಿಷ್ಯಗಳು ನಿಜವಾಗಿವೆ

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

ಇದೀಗ ಮತ್ತೆ ನಿಜವಾಯ್ತು ಭವಿಷ್ಯವಾಣಿ

ಹೌದು, ಬಾಬಾ ವಂಗಾ ಅವರು ಹೇಳಿದ ಭವಿಷ್ಯವಾಣಿ ಮತ್ತೆ ನಿಜವಾಗಿದೆ. ಅಷ್ಟಕ್ಕೂ ಬಾಬಾ ವಂಗಾ ಹೇಳಿದ ಆ ಭವಿಷ್ಯವಾಣಿ ಯಾವುದು ಅಂದರೆ, 2026ರಲ್ಲಿ ಒಂದು ದೊಡ್ಡ ಮಹಾಯುದ್ಧ ಪ್ರಾರಂಭವಾಗಲಿದೆ ಎಂದಿದ್ದರು. ಪ್ರಮುಖ ಮಹಾಶಕ್ತಿಗಳು ಆ ಯುದ್ಧದಲ್ಲಿ ಭಾಗಿಯಾಗುತ್ತವೆ ಮತ್ತು ಉದ್ವಿಗ್ನತೆ ಪ್ರಪಂಚದಾದ್ಯಂತ ಖಂಡಗಳಿಗೆ ಹರಡುತ್ತದೆ ಎಂದಿದ್ದರು. ಅದರಂತೆ, ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಇರಾನ್​ ಜತೆ ಯುದ್ಧಕ್ಕೆ ಇಳಿದಿದೆ. ಇಸ್ರೇಲ್​ ಕೂಡ ಜಾಗತಿಕವಾಗಿ ಅತ್ಯಂತ ಪ್ರಭಾವಶಾಲಿ ದೇಶಗಳಲ್ಲಿ ಒಂದು. ಇನ್ನು ಇರಾನ್​ ಕೂಡ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಅಲ್ಲದೆ, ಈ ಕೊಲ್ಲಿ ಯುದ್ಧ ಈಗಾಗಲೇ ಅರಬ್​ ದೇಶಗಳಿಗೂ ಹರಡಿದೆ. ಇದಿಷ್ಟೇ ಅಲ್ಲದೆ, ಇರಾನ್​ ತನ್ನ ಹಾರ್ಮುಜ್​ ಜಲಸಂಧಿಯನ್ನು ಮುಚ್ಚಿದೆ. ಇದರ ಪರಿಣಾಮ ತೈಲ ಸಾಗಾಟ ಬಂದ್​ ಆಗಿದ್ದು, ಇಡೀ ಪ್ರಪಂಚದ ಆರ್ಥಿಕತೆಯ ಮೇಲೆ ಕರಿನೆರಳು ಬೀರಿದೆ. 
ಅಂದಹಾಗೆ, ಆರಂಭದಲ್ಲಿ ಬಾಬಾ ವಂಗಾ ಅವರ ಮಾತುಗಳು ಅಸ್ಪಷ್ಟ ಭವಿಷ್ಯವಾಣಿಯಂತೆ ಕಾಣುತ್ತಿದ್ದವು. ಆದರೆ, ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಜನರು ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಬಾಬಾ ವಂಗಾ ಹೇಳಿರುವುದು ಕೂಡ ಇದನ್ನೇ ಎಂದು ಹೇಳುತ್ತಿದ್ದಾರೆ. ಪ್ರಸ್ತುತ ಘಟನೆಗಳು ಕೇವಲ ಕಾಕತಾಳೀಯವೇ ಅಥವಾ ಮುಂದೆ ಯಾವುದೋ ದೊಡ್ಡ ವಿಪತ್ತು ಇದೆಯೇ ಎಂಬುದರ ಬಗ್ಗೆಯೂ ದೊಡ್ಡ ಚರ್ಚೆ ನಡೆಯುತ್ತಿದೆ.
2026ರಲ್ಲಿ ಒಂದು ದೊಡ್ಡ ಯುದ್ಧ ಭುಗಿಲೆದ್ದು, ಅದು ವಿಶ್ವ ಯುದ್ಧವಾಗಿ ಬದಲಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ವಿಶೇಷವಾಗಿ ಯುರೋಪ್, ಈ ಯುದ್ಧದಲ್ಲಿ ಹೆಚ್ಚು ನಷ್ಟ ಅನುಭವಿಸುತ್ತದೆ ಎಂದಿದ್ದಾರೆ. ಈ ಸಂದರ್ಭದಲ್ಲಿ, "ಯುಎಸ್-ಇರಾನ್ ಉದ್ವಿಗ್ನತೆಗಳು", "ಇಸ್ರೇಲ್-ಇರಾನ್ ಯುದ್ಧ" ಮತ್ತು "2026 ರಲ್ಲಿ ಮೂರನೇ ಮಹಾಯುದ್ಧ" ಎಂಬ ಪದಗಳು ಪ್ರಸ್ತುತ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿವೆ.

ಜಗತ್ತೇ ಸರ್ವನಾಶ

ಪ್ರಸ್ತುತ ನಡೆಯುತ್ತಿರುವ ಯುದ್ಧದ ನಂತರ ಯುರೋಪ್ ಬಹಳವಾಗಿ ಬಳಲುತ್ತದೆ ಮತ್ತು ಆ ಪ್ರದೇಶದಲ್ಲಿ ಗಂಭೀರ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟುಗಳು ಉಂಟಾಗುತ್ತವೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಅದೇ ಸಮಯದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯ ನಂತರ ರಷ್ಯಾ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಲಿದೆ ಎಂದು ಬಾಬಾ ವಂಗಾ ಹೇಳಿದ್ದಾರೆ. ಕೆಲವರು ಇನ್ನೂ ಮುಂದೆ ಹೋಗಿ ಭವಿಷ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾ ನಡುವೆ ದೊಡ್ಡ ನೇರ ಸಂಘರ್ಷದ ಸಾಧ್ಯತೆಯಿದೆ ಎಂದು ಊಹಿಸುತ್ತಾರೆ. ಇದೇನಾದರೂ ಜಡೆದರೆ ಜಗತ್ತೇ ಸರ್ವನಾಶವಾಗಲಿದೆ.

2026ರ ಭವಿಷ್ಯವಾಣಿಗಳು

ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದಾಗಿ ಬಾಬಾ ವಂಗಾರ ಇನ್ನುಳಿದ 2026ರ ಭವಿಷ್ಯವಾಣಿಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ಬಾಬಾ ವಂಗಾ ಹೇಳಿದಂತೆ ಈ ವರ್ಷ ರಷ್ಯಾದಲ್ಲಿ ಹೊಸ ನಾಯಕ ಹೊರಹೊಮ್ಮುತ್ತಾನೆ. ಆ ನಾಯಕನನ್ನು ಜನರು ವಿಶ್ವ ನಾಯಕ ಎಂದು ಆಚರಿಸುತ್ತಾರಂತೆ. ಆತ ಅಂತಾರಾಷ್ಟ್ರೀಯ ಶಕ್ತಿ ಸಮೀಕರಣವನ್ನು ಬದಲಾಯಿಸುತ್ತಾನಂತೆ. ಜನರು ಹೆಚ್ಚು ಇಷ್ಟಪಡುವ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಬೆಲೆಗಳು ಅನಿರೀಕ್ಷಿತವಾಗಿ ಏರಿಕೆಯಾಗುತ್ತವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇದು ಸಾಮಾನ್ಯ ಜನರಿಗೆ ತೊಂದರೆ ತರುತ್ತದೆ. ಅಲ್ಲದೆ, ಬ್ಯಾಂಕ್ ಸಂಸ್ಥೆಗಳ ಕುಸಿತ, ಬೆಲೆ ಏರಿಕೆ ಮತ್ತು ಹಣಕಾಸು ವ್ಯವಸ್ಥೆಯು ತೀವ್ರ ಸಂಕಷ್ಟ ಎದುರಿಸಲಿದೆ. ಇನ್ನು ಚಿನ್ನದ ಬೆಲೆಯು ಅಸಾಧಾರಣವಾಗಿ ಏರಿದ ನಂತರ ಕುಸಿಯಬಹುದು ಅಂತಾನೂ ಬಾಬಾ ವಂಗಾ ಹೇಳಿದ್ದಾರೆ. 2026ರ ನವೆಂಬರ್ ತಿಂಗಳಲ್ಲಿ ಒಂದು ದೊಡ್ಡ ಬಾಹ್ಯಾಕಾಶ ನೌಕೆ ಭೂಮಿಯನ್ನು ಸಮೀಪಿಸಲಿದೆ ಎಂದು ಊಹಿಸಲಾಗಿದೆ. ಇದು ಮಾನವರು ಮತ್ತೊಂದು ಪ್ರಪಂಚದೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಮತ್ತು ಅನ್ಯಗ್ರಹ ಜೀವಿಗಳು ಮನುಷ್ಯರೊಂದಿಗೆ ಮಾತನಾಡಲು ಅನುವು ಮಾಡಿಕೊಡುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ರೀತಿಯ ಇನ್ನು ಸಾಕಷ್ಟು ಭವಿಷ್ಯವಾಣಿಗಳನ್ನು ಬಾಬಾ ವಂಗಾ ನುಡಿದಿದ್ದಾರೆ. 

5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ

ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ.
ಅಂದಹಾಗೆ, ಈ ಭವಿಷ್ಯವಾಣಿಗಳು ಬಾಬಾ ವಂಗಾ ಅವರ ಅನುಯಾಯಿಗಳಿಂದ ವ್ಯಾಖ್ಯಾನಿಸಲ್ಪಟ್ಟಿವೆ ಹೊರತು ಅದಕ್ಕೆ ನಿಖರ ದಾಖಲೆಗಳು ಇಲ್ಲ. ಹೀಗಾಗಿ ಈ ಭವಿಷ್ಯವಾಣಿಗಳನ್ನು ಕೇವಲ ಮನರಂಜನೆಯಾಗಿ ಅಥವಾ ಚಿಂತನೆಗೆ ಒಳಪಡಿಸಿ ನೋಡಿ. ಯಾವುದೇ ಕಾರಣಕ್ಕೂ ವೈಜ್ಞಾನಿಕವಾಗಿ ನಂಬಬೇಡಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net