ಇನ್ನೂ ಇರಾನ್ನಲ್ಲಿ ಕಟ್ಟರ್ ಆಡಳಿತವನ್ನು ವಿರೋಧಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೊಜ್ತಬಾ ಖಮೇನಿ ನೇಮಕವನ್ನು ವಿರೋಧಿಸುವ ಸಾಧ್ಯತೆ ಇದೆ. ಭಾನುವಾರ ಈ ಕುರಿತು ಎಬಿಸಿ ನ್ಯೂಸ್ಗೆ ಮಾತನಾಡಿದ್ದ ಅವರು, ಅಲ್ಲಿ ಅಧಿಕಾರಕ್ಕೆ ಬರುವ ನಾಯಕರು ನಮ್ಮಿಂದ ಅನುಮೋದನೆ ಪಡೆಯದಿದ್ದರೆ, ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.