ಖಮೇನಿ ಕೂಡ ಅಲಿಪುರ ಭೇಟಿ, ಕರ್ನಾಟಕದಲ್ಲಿ ಅವರ ಗುರುತಿನ ಮೂಲಾಧಾರವಾಗಿ ಉಳಿದಿದೆ. ತಮ್ಮ ಆಗಮನದ ಸಮಯದಲ್ಲಿ, ಸ್ಥಳೀಯ ವಿದ್ವಾಂಸರು ಮತ್ತು ನಿವಾಸಿಗಳೊಂದಿಗೆ ಸಂಭಾಷಣೆ ನಡೆಸುವ ಮೂಲಕ ಈ ಊರಿನಲ್ಲಿ ಅವರು ಸಮಯ ಕಳೆದರು ಎಂದು ವರದಿಯಾಗಿದೆ. ಇಸ್ರೇಲ್-ಅಮೆರಿಕ ಜಂಟಿ ದಾಳಿಯನ್ನು ಖಂಡಿಸಿರುವ ಗ್ರಾಮಸ್ಥರು, ಭಾರೀ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ನಿಟ್ಟಿನಲ್ಲಿ, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಗ್ರಾಮದ ಸುತ್ತಮುತ್ತ ಹದ್ದಿನ ಕಣ್ಣಿಟ್ಟಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಬಿಗಿ ಬಂದೋಬಸ್ತ್ ಮಾಡಿದ್ದಾರೆ,(ಏಜೆನ್ಸೀಸ್).