ದಂಪತಿ ಇಲ್ಲಿಯವರೆಗೆ $37,000 ಆಸ್ಟ್ರೇಲಿಯನ್ ಡಾಲರ್ (ಸುಮಾರು £19,261) ದೇಣಿಗೆ ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ. ಆದಾಗ್ಯೂ, ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ನಲ್ಲಿ ನಮ್ಮ ನಾಲ್ಕು ಪವಾಡದ ಮಕ್ಕಳು ಸುರಕ್ಷಿತವಾಗಿ ಜನಿಸಿದ್ದಾರೆ. ನಮ್ಮ ಹೃದಯ ಕೃತಜ್ಞತೆಯಿಂದ ತುಂಬಿದೆ. ಆದರೆ, ಒಂದೇ ಬಾರಿಗೆ ನಾಲ್ಕು ನವಜಾತ ಶಿಶುಗಳನ್ನು ನೋಡಿಕೊಳ್ಳುವುದು ನಾವು ಊಹಿಸಿದ್ದಕ್ಕಿಂತ ಹೆಚ್ಚಿನ ಸವಾಲಿನಿಂದ ಕೂಡಿದೆ ಎಂದು ಬರೆದುಕೊಂಡಿದ್ದಾರೆ.