ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಮೇಲೆ ಅಟ್ಯಾಕ್: ಇರಾನ್ ಮಿಸೈಲ್ ದಾಳಿಗೆ ಇಬ್ಬರು ಭಾರತೀಯರು ಬಲಿ! Indians killed

ಇರಾನ್​​ ದಾಳಿಗೆ ಮೃತರಾದ ಬಿಹಾರದ​ ಅಶೀಶ್​ ಕುಮಾರ್​ ಮತ್ತು ರಾಜಸ್ಥಾನದ ದಿಲೀಪ್​ ಸಿಂಗ್​
ಇರಾನ್​​ ದಾಳಿಗೆ ಮೃತರಾದ ಬಿಹಾರದ​ ಅಶೀಶ್​ ಕುಮಾರ್​ ಮತ್ತು ರಾಜಸ್ಥಾನದ ದಿಲೀಪ್​ ಸಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ಹಾರ್ಮುಜ್​ ಜಲಸಂಧಿಯಲ್ಲಿ ಟ್ಯಾಂಕರ್​ ಮೇಲೆ ಇರಾನ್​ ದಾಳಿ
  • ಟ್ಯಾಂಕರ್​ನಲ್ಲಿದ್ದ ಇಬ್ಬರು ಭಾರತೀಯರು ಸಾವು
  • ಮೃತರನ್ನು ಬಿಹಾರದ​ ಅಶೀಶ್​ ಕುಮಾರ್​ ಮತ್ತು ರಾಜಸ್ಥಾನದ ದಿಲೀಪ್​ ಸಿಂಗ್​ ಎಂದು ಗುರುತಿಸಲಾಗಿದೆ
ಟೆಹ್ರಾನ್​: ದಿನ ಕಳೆದಂತೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀಕರತೆ ಹೆಚ್ಚುತ್ತಿದ್ದು, ಸ್ಕೈಲೈಟ್​ ಎಂಬ ತೈಲ ಟ್ಯಂಕರ್​ಗೆ ಇರಾನ್​ ದಾಳಿ ನಡೆಸಿದ ಪರಿಣಾಮ ಭಾರತೀಯ ಮೂಲದ ಇಬ್ಬರು ಸಾವನ್ನಪ್ಪಿದ್ದಾಗಿ (Indians killed) ಮಾಹಿತಿ ಲಭ್ಯವಾಗಿದೆ.
ಮೃತ ಭಾರತೀಯರನ್ನು ಬಿಹಾರದ ಕ್ಯಾಪ್ಟನ್​ ಅಶೀಶ್​ ಕುಮಾರ್​ ಮತ್ತು ರಾಜಸ್ಥಾನದ ದಿಲೀಪ್​ ಸಿಂಗ್​ ಎಂದು ಗುರುತಿಸಲಾಗಿದೆ. ಈ ಟ್ಯಾಂಕರ್​ ಫೆಬ್ರುವರಿ 22 ರಂದು ಹಾರ್ಮುಜ್ ಜಲಸಂಧಿ ಹತ್ತಿರ ತಲುಪಿದ್ದು, ಇರಾನ್​ ಜಲಸಂಧಿಯನ್ನು ಬಂದ್​ ಮಾಡಿದ ನಂತರ ಅಲ್ಲಿಯೇ ನಿಂತಿದೆ.
ರಿಪಬ್ಲಿಕ್​ ಆಫ್​ ಪಲಾವ್​ (Republic of Palau) ನ ಬಾವುಟ ಹಾರಿಸಿಕೊಂಡು ನಿಂತಿದ್ದ ಟ್ಯಾಂಕರ್​ ಮೇಲೆ ಇರಾನಿನ ಮಿಸೈಲ್​ ಬಡಿದ ಪರಿಣಾಮ ಈ ಸಾವು-ನೋವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಟ್ಯಾಂಕರ್​ನಲ್ಲಿದ್ದ 20 ಜನರಲ್ಲಿ 15 ಜನ ಭಾರತೀಯ ಮೂಲದವರಾಗಿದ್ದು, 5 ಜನ ಇರಾನಿನ ಪ್ರಜೆಗಳೆಂದು ತಿಳಿದು ಬಂದಿದೆ. ಇರಾನಿನ ಈ ದಾಳಿ ಮಾರ್ಚ್​. 1 ರಂದು ನಡೆದಿದೆ ಎಂದು ಓಮನ್​ ಕಡಲ ಭದ್ರತಾ ಕೇಂದ್ರ ಮಾಹಿತಿ ಹಂಚಿಕೊಂಡಿತ್ತು. 
ಹಾರ್ಮುಜ್​ ದಾಟಲು ನಾವು ಬಿಡುವುದಿಲ್ಲ!
ಇರಾನ್​ ಮತ್ತು ಅಮೆರಿಕ, ಇಸ್ರೇಲ್​ ನಡುವಿನ ಈ ಸಂಘರ್ಷವು ಐದನೇ ದಿನ ತಲುಪಿದ್ದು, ಇರಾನ್​ ಹಾರ್ಮುಜ್​ ಜಲಸಂಧಿಯನ್ನು ಬಂದ್​ ಮಾಡಿ ಜಾಗತಿಕ ತೈಲ ಮಾರುಕಟ್ಟೆಯನ್ನು ಬುಡಮೇಲು ಮಾಡುವ ಯೋಜನೆ ರೂಪಿಸಿ ಕುಳಿತಿದೆ. ತನ್ನ ಮಿತ್ರ ದೇಶ ಚೀನಾದ ಹಡಗುಗಳನ್ನು ಹೊರತು ಪಡಿಸಿ ಬೇರೇ ಯಾವುದೇ ದೇಶದ ಸಾಗಣಾ ವಾಹನಗಳು ಹಾರ್ಮುಜ್​ ಜಲಸಂಧಿಯನ್ನು ದಾಟದಂತೆ ಇರಾನ್​ ತಾಕೀತು ಮಾಡಿದ್ದು, ಇದನ್ನು ಉಲ್ಲಂಘಿಸುವ ದೇಶದ ವಾಹಕಗಳನ್ನು ಹೊಡೆದುರಳಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ನಾವು ರಕ್ಷಣೆ ನೀಡುತ್ತೇವೆ

ಈ ಹಾರ್ಮುಜ್​ ಜಲಸಂಧಿ ಬಂದ್​ ಆಗಿರುವ ಕಾರಣ ಜಾಗತಿಕ ವ್ಯಾಪಾರ-ವ್ಯವಹಾರದ ಮೇಲೆ ಪೆಟ್ಟು ಬೀಳುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ನಾವು ರಕ್ಷಣೆ ನೀಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ. ಅಗತ್ಯ ಬಿದ್ದರೆ ಅಮೆರಿಕದ ನೌಕಾಪಡೆಯನ್ನು ಮತ್ತು ಯುದ್ಧನೌಕೆಗಳನ್ನು ಹಾರ್ಮುಜ್​ ಜಲಸಂಧಿಯಲ್ಲಿ ಇಳಿಸುವುದಾಗಿ ಅವರು ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net