ವಿಶ್ವದ ಅತ್ಯಂತ ಹಳೆಯ ಜೀವಂತ ಭೂ ಜೀವಿ ಜೊನಾಥನ್​ಗ ಆಮೆಗೆ ಸಿಕ್ತು 'ಗಿನ್ನೆಸ್ ವಿಶ್ವ ದಾಖಲೆಯ ಐಕಾನ್'​ ಪಟ್ಟ; ಇದರ ವಯಸ್ಸೆಷ್ಟು ಗೊತ್ತಾ?..Jonathan

Jonathan the tortoise is a Guinness World Records Icon
Jonathan the tortoise is a Guinness World Records Icon
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ಅತ್ಯಂತ ಹಳೆಯ ಜೀವಂತ ಭೂ ಪ್ರಾಣಿ ಜೊನಾಥನ್
  • 2026ರ ಗಿನ್ನೆಸ್ ವಿಶ್ವ ದಾಖಲೆಯ ಐಕಾನ್​ ಪಡೆದ ಆಮೆ
  • 194 ವರ್ಷದಿಂದ ದಕ್ಷಿಣ ಅಟ್ಲಾಂಟಿಕ್​ ಮಹಾಸಾಗರದಲ್ಲಿರುವ ಜೊನಾಥನ್ ಆಮೆ
Jonathan the tortoise is a Guinness World Records Icon: ರಾಣಿ ವಿಕ್ಟೋರಿಯಾ ಆಳ್ವಿಕೆ ಮುಗಿಯುವ ಮೊದಲು, ಐಫೆಲ್​ ಟವರ್​ ನಿರ್ಮಾಣಕ್ಕೂ ದಶಕಗಳ ಹಿಂದೆಯಿಂದಲೂ, ಟೆಲಿಫೋನ್​ ಯುಗಕ್ಕೂ ಮೊದಲು ಜನಿಸಿ, ಎಐ ಕಾಲದಲ್ಲಿಯೂ ಬದುಕುಳಿದ ಜೀವಿ. ನೀವೆಂದಾದರೂ ಕಂಡಿದ್ದೀರಾ? ಇಲ್ವೇ ಇಲ್ಲ. ಆದರೆ, ನಾವಿಂದು ಅಂತಹ ಒಂದು ಅಪರೂಪದ ಜೀವಿಯ ಬಗ್ಗೆ ನಿಮಗೆ ಪರಿಚಯ ಮಾಡಿಕೊಡಲು ಹೊರಟಿದ್ದೇವೆ. ಅಷ್ಟು ವರ್ಷ ಬದುಕಿರೋ ಮನುಷ್ಯ ಯಾರಪ್ಪ ಎಂದು ಯೋಚನೆ ಮಾಡ್ತಿದ್ದೀರಾ? ಆದರೆ, ಇವ್ರು ಮನುಷ್ಯ ಅಲ್ಲ ಪ್ರಾಣಿ.. 194 ವರ್ಷದಿಂದ ಬದುಕುಳಿದಿರುವ ಜೊನಾಥಾನ್​ ಎಂದು ಕರೆಸಿಕೊಂಡಿರುವ ಆಮೆ ಬಗ್ಗೆ.

 ಜೊನಾಥಾನ್​​ ವಿಶ್ವ ದಾಖಲೆ ಐಕಾನ್

ಹೌದು ಜೊನಾಥಾನ್​​ ಎನ್ನುವ ಆಮೆಯು 194 ವರ್ಷ ಬದುಕುಳಿದು 2026ರ ಗಿನ್ನೆಸ್ ವಿಶ್ವ ದಾಖಲೆಯ ಐಕಾನ್​ ಎಂದು ಹೆಸರು ಪಡೆದುಕೊಂಡಿದೆ. ವಿಶ್ವದ ಅತ್ಯಂತ ಹಳೆಯ ಜೀವಂತ ಪ್ರಾಣಿಯೇ ಈ  ಜೊನಾಥಾನ್​​ ಇತಿಹಾಸದಲ್ಲಿ ಅತ್ಯಂತ ಅಸಾಧಾರ  ದಾಖಲೆ ಹೊಂದಿರುವವರ ಸಾಲಿನಲ್ಲಿ ಈ ಆಮೆಗೂ ಒಂದು ಸ್ಥಾನ ಸಿಕ್ಕಿದೆ.

ಜೊನಾಥಾನ್​ ವಾಸ ಎಲ್ಲಿ?

ದಕ್ಷಿಣ ಅಟ್ಲಾಂಟಿಕ್​ ಮಹಾಸಾಗರದ ಸೇಂಟ್ ಹೆಲೆನಾ ದ್ವೀಪದಲ್ಲಿ  ವಾಸ ಮಾಡುತ್ತಿರುವ ಈ 194 ವರ್ಷದ ಆಮೆ. ರ ಸುಮಾರಿಗೆ ಜನಿಸಿರಬಹುದೆಂದು ಎಂದು ಊಹೆ ಮಾಡಲಾಗಿದೆ. ಇದರ ನಿಖರ ಜನನ ದಿನ ಯಾರಿಗೂ ತಿಳಿದಿಲ್ಲ. ಆದರೆ ಇದರ ರಕ್ಷಣೆಗೆಂದು ಇರುವ ಚಿಪ್ಪನ್ನು  ನೋಡಿ ಪರಿಶೀಲನೆ ಮಾಡುವ ಮೂಲಕ ಇದರ ಆಯಸ್ಸನ್ನು ಪತ್ತೆ ಹಚ್ಚಬಹುದು ಎನ್ನುತ್ತಾರೆ ತಜ್ಞರು. 
 ಎಕ್ಸ್​ನಲ್ಲಿ Guinness World Records ಬರೆದುಕೊಂಡಿದ್ದು ಹೀಗೆ
ಜೊನಾಥನ್ ಎಂಬ ಹೆಸರಿನ ಆಮೆಯು ಸದ್ಯ ಅಧಿಕೃತವಾಗಿ ಗಿನ್ನೆಸ್ ವಿಶ್ವ ದಾಖಲೆಗಳ ಐಕಾನ್ ಆಗಿದೆ. ಸುಮಾರು 1832 ರಲ್ಲಿ ಜನಿಸಿದರು ಎಂದು ನಂಬಲಾದ ಜೊನಾಥನ್​ಗೆ ಈಗ 194 ವರ್ಷ. ಅತ್ಯಂತ ಹಿರಿಯ ಭೂ ಪ್ರಾಣಿ. ಇದು ಸೀಶೆಲ್ಸ್ ದೈತ್ಯ ಆಮೆಯಾಗಿದ್ದು, ಅದರ ಸರಾಸರಿ ಜೀವಿತಾವಧಿ 150 ವರ್ಷಕ್ಕಿಂತ ಹೆಚ್ಚು ಕಾಲ ಬದುಕಿದೆ ಎಂದು ಪೋಸ್ಟ್​ನಲ್ಲಿ ತಿಳಿಸಿದೆ.

ಜೊನಾಥಾನ್​ಗೆ ಕಿವಿ ಚುರುಕು, ಕಣ್ಣಿಲ್ಲ

ಜೊನಾಥನ್​ ಆಮೆಗೆ ಕಣ್ಣಿನ ಪೊರೆ ಬಂದಿರುವ ಕಾರಣ ಕಣ್ಣು ಅಷ್ಟಾಗಿ ಕಾಣೋದಿಲ್ಲ. ಆದರೆ, ಕಿವಿ ಮಾತ್ರ ಚುರುಕು. ಯಾರು ಏನೇ ಮಾತನಾಡಿದರು ಗ್ರಹಿಸುವ ಶಕ್ತಿ ಇದಕ್ಕಿದೆ. ಜೊನಾಥನ್​ಗಾಗಿ ವಿಶೇಷ ವೈದ್ಯರನ್ನು ನೇಮಕ ಮಾಡಲಾಗಿದೆ,  ಇದು ಐವತ್ತು ವರ್ಷದಲ್ಲಿದ್ದಾಗ ಇದನ್ನು ಸೇಂಟ್​ ಹೆಲನಾಗೆ ತರಲಾಯಿತು ಎನ್ನಲಾಗಿದೆ.
ಜೊನಾಥನ್​ಗೆ ಸ್ಪೀಡಿ, ಡೇವಿಡ್​, ಫೆಡ್ರಿಕಾ ಎಂಬ ಹೆಸರಿನ ಆಮೆಗಳು ಗೆಳೆಯರು.  ಜೊನಾಥನ್ ಜೊತೆಗೆ ಎರಡು ಆಮೆಗಳನ್ನು ತರಲಾಗಿತ್ತು. ಆದರೆ, ಇಂದಿಗೂ ಉಳಿದುಕೊಂಡಿರುವುದು ಇದೊಂದು ಆಮೆ. ಇದು ಭೂಮಿಯ ಅತ್ಯಂತ ಹಳೆಯ ಜೀವಿ ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net