ಸುತ್ತಲು ಸಮುದ್ರ ಮಾತ್ರ! ಮನುಷ್ಯರೇ ಇಲ್ಲದ ಭೂಮಿ ಮೇಲಿನ ನಿಶ್ಯಬ್ದ ಸ್ಥಳವೇ ಈ ಪಾಯಿಂಟ್ ನೆಮೊ | Point Nemo

ಪಾಯಿಂಟ್ ನೆಮೊಗೆ ಹತ್ತಿರವಿರುವ ಭೂಪ್ರದೇಶಗಳು ಮೂರು ಸಣ್ಣ ದ್ವೀಪಗಳಾಗಿವೆ. ಅವುಗಳೆಂದರೆ ನೈರುತ್ಯಕ್ಕೆ ಪಿಟ್‌ಕೈರ್ನ್ ದ್ವೀಪಗಳ ಭಾಗವಾಗಿರುವ ಡ್ಯೂಸಿ ದ್ವೀಪ, ಉತ್ತರಕ್ಕೆ ಮೊಟು ನುಯಿ ಮತ್ತು ದಕ್ಷಿಣಕ್ಕೆ ಮಹರ್ ದ್ವೀಪ. ಆದರೆ, ಇಲ್ಲಿ ಮಾನವರ ವಾಸವಿಲ್ಲ.
Point Nemo
ಸುತ್ತಲು ಸಮುದ್ರ ಮಾತ್ರ! ಮನುಷ್ಯರೇ ಇಲ್ಲದ ಭೂಮಿ ಮೇಲಿನ ನಿಶ್ಯಬ್ದ ಸ್ಥಳವೇ ಈ ಪಾಯಿಂಟ್ ನೆಮೊ
Published on: 

Point Nemo: ವಿಶ್ವ ಭೂಪಟದಲ್ಲಿ ಜನವಸತಿಯೇ ಇಲ್ಲದ ಮತ್ತು ಸಂಪೂರ್ಣವಾಗಿ ಸಮುದ್ರದಿಂದ ಸುತ್ತುವರಿದ ಸ್ಥಳ. ಹತ್ತಿರದ ಭೂಮಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಸಾಗರದಲ್ಲಿನ ಈ ಬಿಂದುವನ್ನೇ ಪಾಯಿಂಟ್ ನೆಮೊ ಎಂದು ಕರೆಯಲಾಗಿದೆ. ಇದು ಮಾನವರು ತಲುಪಲು ಸಾಧ್ಯವಾಗದ ಭೂಮಿಯ ಮೇಲಿನ ಅತ್ಯಂತ ದೂರದ ಸ್ಥಳಗಳಲ್ಲಿ ಒಂದು ಎನ್ನಲಾಗಿದ್ದೇ ಆದರೂ ಒಬ್ಬರಿಗೆ ಮಾತ್ರ ಇಲ್ಲಿಗೆ ಹೋಗಲು ಸಾಧ್ಯವಿದೆ.

ಎಲ್ಲಿದೆ ಈ ಪಾಯಿಂಟ್ ನೆಮೊ?

ಪಾಯಿಂಟ್ ನೆಮೊ ದಕ್ಷಿಣ ಪೆಸಿಫಿಕ್ ಮಹಾಸಾಗರದ ಮಧ್ಯ ಭಾಗದಲ್ಲಿದೆ. ಇದರ ಅಧಿಕೃತ ಭೌಗೋಳಿಕ ಸ್ಥಾನವು ಸರಿಸುಮಾರು 48°52.6′ ದಕ್ಷಿಣ, 123°23.6′ ಪಶ್ಚಿಮವಾಗಿದೆ. ಇದು ಮೂರು ಹತ್ತಿರದ ಭೂಭಾಗಗಳಿಂದ ಸರಿಸುಮಾರು 2,688 ಕಿ.ಮೀ. ದೂರದಲ್ಲಿದೆ. ಪಾಯಿಂಟ್ ನೆಮೊಗೆ ಹತ್ತಿರವಿರುವ ಭೂಪ್ರದೇಶಗಳು ಮೂರು ಸಣ್ಣ ದ್ವೀಪಗಳಾಗಿವೆ. ಅವುಗಳೆಂದರೆ ನೈರುತ್ಯಕ್ಕೆ ಪಿಟ್‌ಕೈರ್ನ್ ದ್ವೀಪಗಳ ಭಾಗವಾಗಿರುವ ಡ್ಯೂಸಿ ದ್ವೀಪ, ಉತ್ತರಕ್ಕೆ ಮೊಟು ನುಯಿ ಮತ್ತು ದಕ್ಷಿಣಕ್ಕೆ ಮಹರ್ ದ್ವೀಪ. ಆದರೆ, ಇಲ್ಲಿ ಮಾನವರ ವಾಸವಿಲ್ಲ.

ಪ್ರತ್ಯೇಕ ಹೇಗೆ?

ಪಾಯಿಂಟ್ ನೆಮೊ ಒಂದು ದ್ವೀಪ ಅಥವಾ ಬಂಡೆಯಲ್ಲ. ಇದು ಸಮುದ್ರದ ಮೇಲಿರುವ ನಿರ್ದಿಷ್ಟ ಭೌಗೋಳಿಕ ನಿರ್ದೇಶಾಂಕವನ್ನು ಪ್ರತಿನಿಧಿಸುವ ಸಮುದ್ರದ ಒಂದು ಬಿಂದುವಾಗಿದೆ ಅಷ್ಟೇ. ಹಾಗಾಗಿ ಇಲ್ಲಿ ನಿಲ್ಲಲು ಭೂಮಿಯೇ ಇಲ್ಲ. ಮುಖ್ಯವಾಗಿ ಇದರ ಸುತ್ತಲಿನ ವಿಶಾಲವಾದ ಪೆಸಿಫಿಕ್ ಮಹಾಸಾಗರದ ಕಾರಣದಿಂದಾಗಿ ಇದು ಯಾವುದೇ ಮಾನವ ವಾಸಸ್ಥಾನದಿಂದ ಬಹಳ ದೂರದಲ್ಲಿದೆ. ಈ ಸ್ಥಳದ ಬಗ್ಗೆ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಕೆಲವೊಮ್ಮೆ ಪಾಯಿಂಟ್ ನೆಮೊಗೆ ಮಾನವರು ಸಮೀಪಿಸಬಹುದು. ಆದರೆ, ಅವರಾರು ಭೂಮಿ ಮೇಲಿರಲು ಸಾಧ್ಯವಿಲ್ಲ. ಬದಲಿಗೆ, ಬಾಹ್ಯಾಕಾಶದಲ್ಲಿ ಮಾತ್ರ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮೂಲಕ ಗಗನಯಾತ್ರಿಗಳು ಈ ಜಾಗಕ್ಕೆ ಎಂಟ್ರಿಕೊಡಬಹುದು ಎನ್ನಲಾಗಿದೆ. ಬಾಹ್ಯಾಕಾಶ ನಿಲ್ದಾಣವು ಭೂಮಿಯಿಂದ ಸುಮಾರು 400 ಕಿ.ಮೀ ಎತ್ತರದಲ್ಲಿ ಪರಿಭ್ರಮಿಸುವಾಗ, ಆ ಪ್ರದೇಶದಲ್ಲಿ ಮನುಷ್ಯರಿಗಿಂತ ಗಗನಯಾತ್ರಿಗಳಿಗೆ ಹತ್ತಿರ ಎಂದು ವಿವರಿಸಲಾಗಿದೆ.

'ನೆಮೊ' ಎಂಬ ಹೆಸತರೇಕೆ?

ಪಾಯಿಂಟ್ ನೆಮೊಗೆ ಪ್ರಸಿದ್ಧ ಸಾಹಿತ್ಯ ಪಾತ್ರ ಕ್ಯಾಪ್ಟನ್ ನೆಮೊ ಹೆಸರಿಡಲಾಗಿದೆ. ನೆಮೊ ಜೂಲ್ಸ್ ವೆರ್ನ್ ಅವರ ಕಾದಂಬರಿ ಟ್ವೆಂಟಿ ಥೌಸಂಡ್ ಲೀಗ್ಸ್ ಅಂಡರ್ ದಿ ಸೀನಲ್ಲಿ ನಾಟಿಲಸ್ ಎಂಬ ಸಮುದ್ರದೊಳಗಿನ ಹಡಗಿನ ನಾಯಕ. ಲ್ಯಾಟಿನ್ ಭಾಷೆಯಲ್ಲಿ "ನೆಮೊ" ಎಂದರೆ "ಯಾರೂ ಇಲ್ಲ". ಜನವಸತಿಯಿಂದ ದೂರವಿರುವ ಸ್ಥಳಕ್ಕೆ ಇಂತಹ ಹೆಸರು ಇಡುವುದು ಸೂಕ್ತ ಎನಿಸಿ ಇಡಲಾಗಿದೆ.

ಮನುಷ್ಯರು ಇಲ್ಲಿಗೆ ಬರ್ತಾರಾ?

ಪಾಯಿಂಟ್ ನೆಮೊ ಸಾಗರದ ಕೇಂದ್ರದಲ್ಲಿದೆ. ಆದ್ದರಿಂದ, ಅಲ್ಲಿ ಶಾಶ್ವತ ನಿವಾಸಿಗಳಿಲ್ಲ. ಸಂಶೋಧನಾ ಹಡಗುಗಳು ಅಥವಾ ಇತರ ಸಾಗರ ದಂಡಯಾತ್ರೆಗಳು ಈ ಪ್ರದೇಶವನ್ನು ಅಪರೂಪವಾಗಿ ಸಮೀಪಿಸುತ್ತವೆ. ಈ ಬಿಂದುವಿನ ನಿಖರವಾದ ಸ್ಥಳವನ್ನು ಕ್ರೊಯೇಷಿಯನ್-ಕೆನಡಿಯನ್ ಸರ್ವೇ ಇಂಜಿನಿಯರ್ ಹ್ರ್ವೋಜೆ ಲುಕಾಟೆಲಾ ಕಂಪ್ಯೂಟರ್ ಲೆಕ್ಕಾಚಾರಗಳಿಂದ 1992ರಲ್ಲಿ ನಿರ್ಧರಿಸಲಾಯಿತು. ಹೀಗಾಗಿ, ಪಾಯಿಂಟ್ ನೆಮೊವನ್ನು ನಿಗೂಢ ದ್ವೀಪ ಅಲ್ಲ. ಬದಲಿಗೆ, ಇದು ಭೂಮಿಯ ಮೇಲಿನ ಭೂಮಿಯಿಂದ ಅತ್ಯಂತ ದೂರದಲ್ಲಿರುವ ಸಾಗರದಲ್ಲಿ ಗಣಿತಶಾಸ್ತ್ರೀಯವಾಗಿ ವ್ಯಾಖ್ಯಾನಿಸಲಾದ ಬಿಂದುವಾಗಿಯೇ ಉಳಿದಿದೆ.

Also Read
1 ಕೋಟಿ ರೂ. ಕ್ಯಾಶ್​, ಲಕ್ಸುರಿ ವಾಚ್‌ಗಳ ರಾಶಿ... ಅಧಿಕಾರಿ ದಂಪತಿಯ ಮನೆಯಲ್ಲಿ ಸಿಕ್ಕ ಆಸ್ತಿ ಕಂಡು ವಿಜಿಲೆನ್ಸ್ ತಂಡವೇ ಶಾಕ್ | Bureaucrat Couple
Point Nemo

ಭೂಮಿ ಮೇಲಿನ ಏಕಾಂಗಿ ಸ್ಥಳ

ಯಾವುದೇ ನಗರಗಳಿಲ್ಲ, ಮನೆಗಳಿಲ್ಲ, ರಸ್ತೆಗಳಿಲ್ಲ, ಮರಗಳಿಲ್ಲದ ಸ್ಥಳವಿದು. ಪಾಯಿಂಟ್ ನೆಮೊವನ್ನು ಮಾನವರಿಗೆ ಭೂಮಿಯ ಮೇಲಿನ ಅತ್ಯಂತ ಪ್ರತ್ಯೇಕವಾದ ಸ್ಥಳಗಳಲ್ಲಿ ಒಂದು ಎನ್ನಲಾಗಿದೆ. ಭೂಮಿಯ ನಕ್ಷೆಯಲ್ಲಿ ಇದು ಕೇವಲ ಒಂದು ಸಣ್ಣ ನಿರ್ದೇಶಾಂಕವಾಗಿದ್ದರೂ, ಅದರ ಹಿಂದಿನ ಕಥೆ ಆಳವಾಗಿದೆ. ಭೂಮಿಯಿಂದ ಸುಮಾರು 2,688 ಕಿ.ಮೀ ದೂರದಲ್ಲಿರುವ ಸಾಗರದಲ್ಲಿನ ಒಂದು ಬಿಂದು. ಪಾಯಿಂಟ್ ನೆಮೊ ಏಕಕಾಲದಲ್ಲಿ ಭೂಮಿಯ ಮೇಲಿನ ಏಕಾಂಗಿ ಸ್ಥಳವಾಗಿದೆ ಮತ್ತು ಹಳೆಯ ಬಾಹ್ಯಾಕಾಶ ನೌಕೆಯ ಲಾಸ್ಟ್​ ರೆಸ್ಟಿಂಗ್​ ಸ್ಪಾಟ್​ಗಳಲ್ಲಿ ಒಂದಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net