

NASA: ಬಾಹ್ಯಾಕಾಶದ ವಿಸ್ಮಯಕಾರಿ ನೋಟಗಳನ್ನು ಜಗತ್ತಿಗೆ ಪರಿಚಯಿಸುವ ತಮ್ಮ ಅಭ್ಯಾಸವನ್ನು ಮುಂದುವರಿಸಿರುವ ನಾಸಾ ಗಗನಯಾತ್ರಿ ಅನಿಲ್ ಮೆನನ್, ಈ ಬಾರಿಯೂ ಒಂದು ಅತ್ಯದ್ಭುತ ವೀಡಿಯೊ ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ಡ್ರಾಗನ್ ಬಾಹ್ಯಾಕಾಶ ನೌಕೆಯ ಕಿಟಕಿಯಿಂದ ಭೂಮಿ ಮತ್ತು ಚಂದ್ರ ಒಂದೇ ಚೌಕಟ್ಟಿನಲ್ಲಿ ಕಾಣುವ ಅಪರೂಪದ 'ಟೈಮ್‌ಲ್ಯಾಪ್ಸ್' (Time-lapse) ವಿಡಿಯೋವನ್ನು ಸಾಮಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.