ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದ ಪರವಾಗಿ ಟ್ರಾವಿಸ್ ಹೆಡ್ (29) ಮತ್ತು ಜೇಕ್ ವೆದರಾಲ್ಡ್ (34) 62 ರನ್‌ಗಳ ಜೊತೆಯಾಟವಾಡಿದರು. ಅದರೆ, ಇಂಗ್ಲೆಂಡ್‌ನ ಜೋಶ್ ಟಂಗ್ 3 ವಿಕೆಟ್ ಕಬಳಿಸಿ ದಿಢೀರ್ ಕುಸಿತಕ್ಕೆ ಕಾರಣರಾದರು. ನಂತರ ಬಂದ ಮಾರ್ನಸ್ ಲ್ಯಾಬುಶೇನ್ 37 ರನ್‌ಗಳಿಗೆ ರನೌಟ್ ಆದಾಗ, ಆಸ್ಟ್ರೇಲಿಯಾ 121-5 ಸ್ಕೋರ್‌ಗಳಲ್ಲಿ ಇನ್ನೂ 39 ರನ್‌ಗಳ ಕೊರತೆಯಿಂದ ಸಂಕಷ್ಟದಲ್ಲಿತ್ತು. ವಿಕೆಟ್ಕೀಪರ್ ಅಲೆಕ್ಸ್ ಕ್ಯಾರಿ (16 ) ಮತ್ತು ಕ್ಯಾಮರೂನ್ ಗ್ರೀನ್ (22 ) ರನ್ಗಳಿಸಿ ತಂಡದ ಗೆಲುವಿನ ದಡ ಸೇರಿಸಿದರು.