ಇಸ್ಲಾಮೀಕರಣ ವಿರೋಧಿ ಪ್ರತಿಭಟನೆ: ಮೇಯರ್​ ಮಮ್ದಾನಿ ಮನೆ ಮೇಲೆ ಸ್ಪೋಟಕ ಎಸೆದ ಕಿಡಿಗೇಡಿಗಳು! Zohran Mamdani

ನ್ಯೂಯಾರ್ಕ್‌ನ ಮೇಯರ್​ ಜೊಹ್ರಾನ್ ಮಮ್ದಾನಿ (Zohran Mamdani) ಮನೆ ಮೇಲೆ ಸ್ಪೋಟಕ ಎಸೆದ ಪ್ರತಿಭಟನಾಕಾರರು
ನ್ಯೂಯಾರ್ಕ್‌ನ ಮೇಯರ್​ ಜೊಹ್ರಾನ್ ಮಮ್ದಾನಿ (Zohran Mamdani) ಮನೆ ಮೇಲೆ ಸ್ಪೋಟಕ ಎಸೆದ ಪ್ರತಿಭಟನಾಕಾರರು
Published on

ಪ್ರಮುಖ ಮುಖ್ಯಾಂಶಗಳು

  • ನ್ಯೂಯಾರ್ಕ್‌ನಲ್ಲಿ ನಡೆದ ಇಸ್ಲಾಮೀಕರಣ ವಿರೋಧ ಪ್ರತಿಭಟನೆ
  • ನ್ಯೂಯಾರ್ಕ್‌ನ ಮೇಯರ್​ ಜೊಹ್ರಾನ್ ಮಮ್ದಾನಿ ಮನೆ ಮೇಲೆ ಸ್ಪೋಟಕ ಎಸೆದ ಪ್ರತಿಭಟನಾಕಾರರು
  • 18 ವರ್ಷದ ಹುಡುಗನನ್ನು ಬಂಧಿಸಿದ ನ್ಯೂಯಾರ್ಕ್‌ ಪೊಲೀಸರು
ನ್ಯೂಯಾರ್ಕ್‌: ಶನಿವಾರ(ಮಾ.8) ನ್ಯೂಯಾರ್ಕ್‌ನಲ್ಲಿ ನಡೆದ ಇಸ್ಲಾಮೀಕರಣ ವಿರೋಧ ಪ್ರತಿಭಟನೆಯಲ್ಲಿ ನ್ಯೂಯಾರ್ಕ್‌ನ ಮೇಯರ್​ ಜೊಹ್ರಾನ್ ಮಮ್ದಾನಿ (Zohran Mamdani) ಮನೆಯ ಮೇಲೆ ಸ್ಟೋಟಕ ವಸ್ತುಗಳನ್ನು ಎಸೆಯಲಾಗಿದೆ ಎಂದು ವರದಿಯಾಗಿದೆ.
ಬಲಪಂಥೀಯ ನಾಯಕ ಜೇಕ್ ಲ್ಯಾಂಗ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೆಂಕಿ ಹೊತ್ತಿಸಿದ ಸಾಧನಗಳನ್ನು ಬಳಸಲಾಗಿದ್ದು, ಇದಕ್ಕೆ ಸಂಬಂಧಿಸಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿರುವುದಾಗಿ NYPD ಆಯುಕ್ತೆ ಜೆಸ್ಸಿಕಾ ಟಿಶ್ಚ್ ತಿಳಿಸಿದ್ದಾರೆ.
ಇರಾನ್​ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಹಾಗೂ ನ್ಯೂಯಾರ್ಕ್‌ನ ಬೀದಿಗಳಲ್ಲಿ ಸಾಮೂಹಿಕ ನಮಾಜ್​ ಮಾಡುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿತ್ತು. ನ್ಯೂಯಾರ್ಕ್‌ ಮೇಯರ್​ ಕೂಡ ಒಬ್ಬ ಮುಸಲ್ಮಾನನಾಗಿರುವ ಕಾರಣ ಪ್ರಕ್ಷುದ್ಧರಾದ ಗುಂಪು ಈ ರೀತಿ ಮಾಡಿದೆ ಎಂದು NYPD ಆಯುಕ್ತೆ ತಿಳಿಸಿದ್ದಾರೆ.
ಮೇಯರ್​ ಮನೆಯ ಮೇಲೆ ಎಸೆಯಲಾಗಿರುವ ವಸ್ತುವಿನಲ್ಲಿ ನಟ್‌, ಬೋಲ್ಟ್‌ ಮತ್ತು ಸ್ಕ್ರೂಗಳ ಫ್ಯೂಸ್ ಇದ್ದವು, ಆದರೆ ಇವು ನಿಜವಾಗಿಯೂ ಸ್ಪೋಟಕಗಳೇ ಆಗಿದ್ದವೇ? ಅಥವಾ ನಕಲಿ ಸ್ಪೋಟಕಗಳೇ ಎನ್ನುವುದು ತನಿಖೆ ನಂತರ ತಿಳಿಯಬೇಕಾಗಿದೆ ಎಂದು ಜೆಸ್ಸಿಕಾ ಟಿಶ್ಚ್ ಹೇಳಿದ್ದಾರೆ.

18 ವರ್ಷದ ಹುಡುಗನ ಬಂಧನ

ಸ್ವೆಟ್‌ಶರ್ಟ್ ಮತ್ತು ಕಾರ್ಗೋ ಪ್ಯಾಂಟ್ ಧರಿಸಿದ ವ್ಯಕ್ತಿಗೆ ಟೇಪ್‌ನಲ್ಲಿ ಸುತ್ತಿ ಹೊಗೆಯನ್ನು ಹೊರಸೂಸುವ ಸಾಧನವನ್ನು ಇನ್ನೊಬ್ಬ ಕಾರ್ಯಕರ್ತ ಹಸ್ತಾಂತರಿಸಿದ್ದಾನೆ. ನಂತರ ಆ ವ್ಯಕ್ತಿ ಈ ಸ್ಪೋಟಕವನ್ನು ಪೊಲೀಸರ ಮತ್ತು ಮೇಯರ್​ ಮನೆ ಮೇಲೆ ಎಸೆದಿದ್ದಾನೆ.
ಈ ಕೃತ್ಯದಲ್ಲಿ ಭಾಗಿಯಾದ ಹುಡುಗನನ್ನು 18 ವರ್ಷದ ಅಮೀರ್ ಬಾಲಾತ್ ಎಂದು ಗುರುತಿಸಲಾಗಿದ್ದು, ನ್ಯೂಯಾರ್ಕ್‌ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು NYPD ಆಯುಕ್ತೆ ತಿಳಿಸಿದ್ದಾರೆ. ಹೀಗೆ ಸ್ಪೋಟಕವನ್ನು ಎಸೆದ ಕೂಡಲೇ ಬಾಂಬ್​ ಸ್ವಾಡ್​​ ತಕ್ಷಣ ಸ್ಥಳಕ್ಕೆ ಬಂದು ನಡೆಯಬಹುದಾಗಿದ್ದ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net