ಯಾವುದೇ ಏರ್-ಡಿಫೆನ್ಸ್‌ಗೂ ಸಿಗದ ಅಜೇಯ ಕ್ಷಿಪಣಿ! ಯುಕ್ರೇನ್ ರಾಜಧಾನಿ ಧೂಳೀಪಟ! ರಷ್ಯಾ ಬಳಸಿದ ಭಯಾನಕ ಆಯುಧ ಕಂಡು ಬೆಚ್ಚಿಬಿದ್ದ ಜಗತ್ತು! Oreshnik Missile

ಜಗತ್ತಿನ ಯಾವುದೇ ಏರ್-ಡಿಫೆನ್ಸ್‌ಗೂ ಸಿಗದ ಅಜೇಯ ಕ್ಷಿಪಣಿ! ಯುಕ್ರೇನ್ ರಾಜಧಾನಿ ಧೂಳೀಪಟ! ರಷ್ಯಾ ಬಳಸಿದ ಭಯಾನಕ ಆಯುಧ ಕಂಡು ಬೆಚ್ಚಿಬಿದ್ದ ಜಗತ್ತು!
ಜಗತ್ತಿನ ಯಾವುದೇ ಏರ್-ಡಿಫೆನ್ಸ್‌ಗೂ ಸಿಗದ ಅಜೇಯ ಕ್ಷಿಪಣಿ! ಯುಕ್ರೇನ್ ರಾಜಧಾನಿ ಧೂಳೀಪಟ! ರಷ್ಯಾ ಬಳಸಿದ ಭಯಾನಕ ಆಯುಧ ಕಂಡು ಬೆಚ್ಚಿಬಿದ್ದ ಜಗತ್ತು!
Published on
ಕೀವ್: ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧವು ಈಗ ಅತ್ಯಂತ ದಾರುಣ ಹಾಗೂ ಭೀಕರ ಹಂತವನ್ನು ತಲುಪಿದೆ. ಭಾನುವಾರ ಯುಕ್ರೇನ್ ರಾಜಧಾನಿ ಕೀವ್ ನಗರವನ್ನು ಗುರಿಯಾಗಿಸಿಕೊಂಡು ರಷ್ಯಾ ನಡೆಸಿರುವ ಮಹಾ ವಾಯುದಾಳಿಯು ಇಡೀ ನಗರವನ್ನು ಸ್ಮಶಾನ ಸದೃಶವಾಗಿಸಿದೆ. ಈ ವಿನಾಶಕಾರಿ ದಾಳಿಯಲ್ಲಿ ರಷ್ಯಾ ತನ್ನ ಅತ್ಯಂತ ರಹಸ್ಯ ಹಾಗೂ ಅಜೇಯ ಹೈಪರ್ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯಾದ 'ಒರೇಶ್ನಿಕ್' (Oreshnik Missile) ಅನ್ನು ಪ್ರಯೋಗಿಸಿದೆ ಎಂದು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ನೂರಾರು ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಇಡೀ ಕೀವ್ ನಗರದ ಮೇಲೆ ರಷ್ಯಾ ನಡೆಸಿದ ಈ ರಾಕೆಟ್ ಪ್ರಹಾರಕ್ಕೆ ಕನಿಷ್ಠ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, 83ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ನಗರದ ವಸತಿ ಸಂಕೀರ್ಣಗಳು, ಶಾಲೆಗಳು, ಮಾರುಕಟ್ಟೆಗಳು ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳ ಸುತ್ತಮುತ್ತಲಿನ ಪ್ರದೇಶಗಳು ಸಂಪೂರ್ಣ ಧ್ವಂಸಗೊಂಡಿವೆ. 4 ವರ್ಷಗಳಿಂದ ನಡೆಯುತ್ತಿರುವ ಈ ಸುದೀರ್ಘ ಯುದ್ಧದಲ್ಲಿ ರಷ್ಯಾ ಈ ಬ್ರಹ್ಮಾಸ್ತ್ರವನ್ನು ಬಳಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.

ಯುಕ್ರೇನ್ ದಾಳಿಗೆ ಪುಟಿನ್ ಭೀಕರ ಪ್ರತಿಕಾರ!

ರಷ್ಯಾದ ರಕ್ಷಣಾ ಸಚಿವಾಲಯವು ತಾನು ಒರೇಶ್ನಿಕ್ ಹೈಪರ್ಸಾನಿಕ್ ಕ್ಷಿಪಣಿಯನ್ನು ಯುಕ್ರೇನ್‌ನ ಮಿಲಿಟರಿ ಕಮಾಂಡ್ ಸೆಂಟರ್‌ಗಳು, ವಾಯುನೆಲೆಗಳು ಮತ್ತು ರಕ್ಷಣಾ ಉದ್ಯಮದ ಕೇಂದ್ರಗಳ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿರುವುದಾಗಿ ಘೋಷಿಸಿದೆ. ರಷ್ಯಾದ ಭೂಪ್ರದೇಶದಲ್ಲಿ ಇತ್ತೀಚೆಗೆ ಯುಕ್ರೇನ್ ನಡೆಸಿದ ದಾಳಿಗಳಿಗೆ ಪ್ರತಿಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಸ್ಕೋ ಸ್ಪಷ್ಟಪಡಿಸಿದೆ.

ಏನಿದು 'ಒರೇಶ್ನಿಕ್' ಮರಣ ಮೃದಂಗ?; ಶಬ್ದಕ್ಕಿಂತ 10 ಪಟ್ಟು ವೇಗ!

ರಷ್ಯನ್ ಭಾಷೆಯಲ್ಲಿ 'ಒರೇಶ್ನಿಕ್' ಎಂದರೆ 'ಹ್ಯಾಜಲ್‌ನಟ್ ಮರ' ಎಂದರ್ಥ. ಆದರೆ ಇದರ ವಿನಾಶಕಾರಿ ಸಾಮರ್ಥ್ಯ ಮಾತ್ರ ಇಡೀ ಜಗತ್ತನ್ನೇ ನಡುಗಿಸುವಂತಿದೆ. ಇದು ರಷ್ಯಾದ ಸೇನಾ ಬತ್ತಳಿಕೆಯಲ್ಲಿರುವ ಅತ್ಯಂತ ಸುಧಾರಿತ ಮತ್ತು ಅತ್ಯಂತ ಅಪಾಯಕಾರಿ ಅಸ್ತ್ರವಾಗಿದೆ.
ಊಹಿಸಲಾಗದ ವೇಗ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರಕಾರ, ಒರೇಶ್ನಿಕ್ ಕ್ಷಿಪಣಿಯು ಶಬ್ದದ ವೇಗಕ್ಕಿಂತ 10 ಪಟ್ಟು ಅಧಿಕ ವೇಗದಲ್ಲಿ (ಅಂದರೆ ಗಂಟೆಗೆ ಸುಮಾರು 13,000 ಕಿಲೋಮೀಟರ್ ವೇಗದಲ್ಲಿ) ಚಲಿಸಬಲ್ಲದು.
ಅಜೇಯ ತಂತ್ರಜ್ಞಾನ: ಈ ಕ್ಷಿಪಣಿಯ ವೇಗ ಮತ್ತು ವಾತಾವರಣದಲ್ಲಿ ಇದು ಸೃಷ್ಟಿಸುವ ಚಲನೆಯ ಕಾರಣದಿಂದಾಗಿ, ಪ್ರಸ್ತುತ ಜಗತ್ತಿನಲ್ಲಿರುವ ಯಾವುದೇ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗೂ ಇದನ್ನು ಪತ್ತೆಹಚ್ಚಲು ಅಥವಾ ಹೊಡೆದುರುಳಿಸಲು ಸಾಧ್ಯವಿಲ್ಲ.
ಉಲ್ಕಾಪಾತದಂತಹ ತೀವ್ರತೆ: ಪುಟಿನ್ ಈ ಕ್ಷಿಪಣಿಯ ದಾಳಿಯ ತೀವ್ರತೆಯನ್ನು ಭೂಮಿಗೆ ಅಪ್ಪಳಿಸುವ ಭೀಕರ ಉಲ್ಕಾಪಾತಕ್ಕೆ ಹೋಲಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಯುದ್ಧವಿಮಾನದ ಬಾಂಬ್‌ಗಳಿಗಿಂತ ಇದರ ಆಘಾತಕಾರಿ ಸಾಮರ್ಥ್ಯ ನೂರಾರು ಪಟ್ಟು ಹೆಚ್ಚಾಗಿದೆ.
ಬಂಕರ್ ಬಸ್ಟರ್: ಈ ಕ್ಷಿಪಣಿಯು ನೆಲದ ಆಳದಲ್ಲಿ ಮೂರ್ನಾಲ್ಕು ಮಹಡಿಗಳಷ್ಟು ಕೆಳಗೆ ಅಡಗಿರುವ ಅತ್ಯಂತ ಸುರಕ್ಷಿತ ಭೂಗತ ಬಂಕರ್‌ಗಳನ್ನು ಸಹ ಕ್ಷಣಾರ್ಧದಲ್ಲಿ ಧೂಳೀಪಟ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಅಣುಬಾಂಬ್ ಅಥವಾ ಸಾಂಪ್ರದಾಯಿಕ ಯುದ್ಧ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು.

4 ವರ್ಷಗಳ ಯುದ್ಧದಲ್ಲಿ ಇದು 3ನೇ ಪ್ರಹಾರ!

ಒರೇಶ್ನಿಕ್ ಕ್ಷಿಪಣಿಯ ವ್ಯಾಪ್ತಿ ಸುಮಾರು 3,000 ದಿಂದ 5,500 ಕಿಲೋಮೀಟರ್ ಆಗಿದ್ದು, ಇದು ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ರಷ್ಯಾ ಇದನ್ನು ಮೊದಲ ಬಾರಿಗೆ 2024ರ ನವೆಂಬರ್‌ನಲ್ಲಿ ಯುಕ್ರೇನ್‌ನ ದ್ನಿಪ್ರೋ ನಗರದ ಮೇಲೆ ಪ್ರಯೋಗಿಸಿತ್ತು. ತದನಂತರ ಎರಡನೇ ಬಾರಿಗೆ 2025ರ ಜನವರಿಯಲ್ಲಿ ಪಶ್ಚಿಮ ಯುಕ್ರೇನ್‌ನ ಎಲ್ವಿವ್ ಪ್ರದೇಶದ ಮೇಲೆ ದಾಳಿ ನಡೆಸಿತ್ತು. ಇದೀಗ 2026ರ ಮೇ ತಿಂಗಳಲ್ಲಿ ನೇರವಾಗಿ ರಾಜಧಾನಿ ಕೀವ್ ಸಮೀಪದ ಬಿಲಾ ತ್ಸೆರ್ಕ್ವಾ ಪ್ರದೇಶವನ್ನು ಗುರಿಯಾಗಿಸಿ ಮೂರನೇ ಬಾರಿ ಈ ಘೋರ ಅಸ್ತ್ರವನ್ನು ಪ್ರಯೋಗಿಸಿದೆ.
ಝೆಲೆನ್ಸ್ಕಿ ಆಕ್ರೋಶ: ದಾಳಿಯ ನಂತರ ವಿಶ್ವ ಸಮುದಾಯಕ್ಕೆ ಕರೆ ನೀಡಿರುವ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾದ ಈ ಹುಚ್ಚುತನದ ವರ್ತನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಕ್ಕ ಶಿಕ್ಷೆಯಾಗಲೇಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇಡೀ ರಾತ್ರಿ ಕೀವ್ ನಗರದಲ್ಲಿ ವಾಯುದಾಳಿಯ ಸೈರನ್‌ಗಳು ಮೊಳಗುತ್ತಲೇ ಇದ್ದು, ಇಡೀ ನಗರ ದಟ್ಟ ಹೊಗೆಯಿಂದ ಆವೃತವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net