ಢಾಕಾ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ತಾರಿಕ್ ರಹಮಾನ್(Tarique Rahman) ಅವರು ಈಗ ಇಂಟರ್ನೆಟ್ ಲೋಕದಲ್ಲಿ ಭಾರಿ ಹಾಸ್ಯ ಮತ್ತು ಟ್ರೋಲ್‌ಗೆ ಗುರಿಯಾಗಿದ್ದಾರೆ. ಪದವಿ ಇಲ್ಲದಿದ್ದರೂ ನೆಟ್ಟಿಗರು ಅವರನ್ನು ಇಂಜಿನಿಯರ್ ಎಂದು ಕರೆಯುತ್ತಿರುವುದು ಈಗ ದೊಡ್ಡ ಸುದ್ದಿಯಾಗಿದೆ. ಆದರೆ, ಇದು ಗೌರವದ ಸಂಕೇತವಲ್ಲ, ಬದಲಿಗೆ ಚುನಾವಣಾ ಇಂಜಿನಿಯರಿಂಗ್ ಎಂದು ವ್ಯಂಗ್ಯವಾಡಿದ್ದಾರೆ.